ಸಮಾಜ ಶ್ರೇಯೋಭಿವೃದ್ಧಿಗೆ ಕುಂಚಿಟಿಗರು ಕೈ ಜೋಡಿಸಲಿ

| Published : Jun 12 2024, 12:31 AM IST

ಸಾರಾಂಶ

ಕುಂಚಿಟಿಗ ಸಮಾಜ ಶ್ರೇಯೋಭಿವೃದ್ಧಿಗಾಗಿ ಅವಿರತ ಶ್ರಮ ವಹಿಸುತ್ತಿದ್ದೇವೆ. ಸಮಾಜದ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕೆಂದು ಹೊಸದುರ್ಗದ ಕುಂಚಗಿರಿಯ ಕಾಯಕಯೋಗಿ ಕುಂಚಿಟಿಗ ಸಮಾಜದ ಡಾ.ಶಾಂತವೀರ ಸ್ವಾಮೀಜಿ ನುಡಿದಿದ್ದಾರೆ.

- ಹೊನ್ನಾಳಿಯಲ್ಲಿ ಕುಂಚಿಟಿಗರ ಸರ್ವ ಸಮ್ಮೇಳನದಲ್ಲಿ ಜಗದ್ಗುರು ಶಾಂತವೀರ ಸ್ವಾಮೀಜಿ ಸಲಹೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕುಂಚಿಟಿಗ ಸಮಾಜ ಶ್ರೇಯೋಭಿವೃದ್ಧಿಗಾಗಿ ಅವಿರತ ಶ್ರಮ ವಹಿಸುತ್ತಿದ್ದೇವೆ. ಸಮಾಜದ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕೆಂದು ಹೊಸದುರ್ಗದ ಕುಂಚಗಿರಿಯ ಕಾಯಕಯೋಗಿ ಕುಂಚಿಟಿಗ ಸಮಾಜದ ಡಾ.ಶಾಂತವೀರ ಸ್ವಾಮೀಜಿ ನುಡಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ಕುಂಚಿಟಿಗರ ಸರ್ವ ಸಮ್ಮೇಳನ ಕಾರ್ಯಕ್ರಮ ಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.

2001ರಲ್ಲಿ ಸಮಾಜದ ಪ್ರಮುಖರಾದ ಬೇಲಿಮಲ್ಲೂರು ಕೆ.ಬಸವರಾಜಪ್ಪ, ಎನ್.ಎಚ್. ಹಾಲಪ್ಪ, ಎ.ಜಿ.ಕೃಷ್ಣಪ್ಪ, ಆರ್.ಪಿ.ಕೃಷ್ಣಮೂರ್ತಿ, ಮಲ್ಲಿಗೇನಹಳ್ಳಿ ಜಯಪ್ಪ ಮತ್ತು ಶಂಕರಪ್ಪ ಅವರ ನೇತೃತ್ವದಲ್ಲಿ ಗೊಲ್ಲರಹಳ್ಳಿಯಲ್ಲಿ ರಾಜ್ಯಮಟ್ಟದ ವಿಜಯರಾಯ ಸಂಗಮೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿ, ಸಮಾಜದ ಸಂಘಟನೆಗೆ ಮುನ್ನುಡಿ ಬರೆದರು ಎಂದು ಶ್ಲಾಘಿಸಿದರು.

35 ಹಿಂದುಳಿದ ವರ್ಗಗಳ ಸ್ವಾಮೀಜಿಗಳೊಂದಿಗೆ ಅನ್ಯೂನ್ಯತೆ ಸಂಬಂಧ ಹೊಂದಿದ್ದೇವೆ. ಸಮಾಜ ಬಾಂಧವರೂ ಕೂಡ ಇತರೆ ಸಮಾಜದವರೊಂದಿಗೆ ಅವಿನಾಭಾವ ಸಂಬಂಧ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನಸಭಾ ಚುನಾವಣೆಗೂ ಮುನ್ನ ಅಂದಿನ ಶಾಸಕರಾಗಿದ್ದ ಎಂ.ಪಿ. ರೇಣುಕಾಚಾರ್ಯ ಕುಂಚಿಟಿಗ ಸಮಾಜದ ಸಮುದಾಯ ಭವನಕ್ಕೆಂದು ಸರ್ಕಾರದಿಂದ ₹2.50 ಕೋಟಿ ಮಂಜೂರಾಗಿದೆ ಎಂದಿದ್ದರು. ಆದರೆ ಅದು ಬಿಡುಗಡೆಯಾಗದೇ ಸಮುದಾಯ ಭವನದ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಮತ್ತೆ ಇದೇ ರೀತಿಯ ಸಂದರ್ಭ ಎದುರಾಗದಂತೆ ಸಮಾಜದವರು ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.

ಹೊನ್ನಾಳಿ-ಶಿವಮೊಗ್ಗ ರಸ್ತೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಅವರು ಸಮಾಜದ ಋಣವನ್ನು ತೀರಿಸಲು 4.20 ಎಕರೆ ಜಮೀನನ್ನು ಅತ್ಯಂತ ಕಡಿಮೆ ದರಕ್ಕೆ ಮಾರಾಟ ಮಾಡಿದ್ದಾರೆ. ಅದು ಇಂದು ಸುಮಾರು ₹16 ಕೋಟಿ ಬೆಲೆ ಬಾಳುವ ಸ್ವತ್ತಾಗಿದೆ. ಶಾಸಕರು ₹12 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸಮುದಾಯ ಭವನಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಪಕ್ಷದ ಅಧ್ಯಕ್ಷರಾಗಿ ಯಶಸ್ವಿಯಾಗಿದ್ದೀರಿ, ತಾವು ಆರ್ಥಿಕವಾಗಿಯೂ ಸದೃಢರಾಗಿದ್ದೀರಿ. ಸಮಾಜದ ಸೇವೆಯಲ್ಲೂ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಸ್ವಾಮೀಜಿ ಅವರು ಸಲಹೆ ನೀಡಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಕುಂಚಿಟಿಗ ಸಮಾಜದ ಋಣವು ನನ್ನ ಮೇಲಿದೆ. ಸರ್ಕಾರ ವತಿಯಿಂದ ಸಮಾಜದ ಕಾಮಗಾರಿಗಳಿಗೆ ಅನುದಾನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇತ್ತೀಚೆಗೆ ನಿಧನರಾದ ಆತ್ಮೀಯರಾದ ಕೆ.ಬಸವರಾಜಪ್ಪ ಅವರ ವೈಕುಂಠ ಸಮಾರಾಧನೆಗೆ ಅವರ 5 ಜನ ಮಕ್ಕಳು ಒಗ್ಗಟ್ಟಾಗಿ ಕರೆಯಲು ಬಂದಿದ್ದನ್ನು ಸ್ಮರಿಸಿಕೊಂಡು ಭಾವುಕರಾದರು.

ಕುಂಚಿಟಿಗ ಮಹಾಸಭಾ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸಮಾಜ ವತಿಯಿಂದ ಎಲ್ಲೇ ಸಭೆ, ಸಮಾರಂಭಗಳು ನಡೆದರೂ ಸ್ವಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಮಾಜ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಿಗೆ ಉದಾರವಾಗಿ ಧನಸಹಾಯ ಮಾಡಬೇಕೆಂದು ವಿನಂತಿಸಿದರು.

ಸಮಾಜದ ಮುಖಂಡ ತಕ್ಕನಹಳ್ಳಿ ಎಂ.ಎಚ್.ಸುರೇಶ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ಕೆ.ಬಸವರಾಜಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಖಂಡರಾದ ಎನ್.ಎಚ್. ಹಾಲಪ್ಪ, ವರದರಾಜಪ್ಪ ಗೌಡ, ರಂಗನಗೌಡ, ಜೆ.ಕೆ. ಸುರೇಶ್, ಎಸ್.ಕೆ. ನರಸಿಂಹಮೂರ್ತಿ, ಜಿ.ಎಸ್. ತಿಮ್ಮಪ್ಪ, ಜಿ.ಎನ್.ರಂಗಪ್ಪ, ಶಣ್ಮುಖಪ್ಪ, ತಿಪ್ಪೇಸ್ವಾಮಿ, ಕೆ.ರಂಗನಾಥ್, ಬೇಲಿಮಲ್ಲೂರಿನ ರತ್ನಮ್ಮ, ಶಿವಪ್ರಸಾದ್, ಪ್ರಕಾಶ್, ರಮೇಶ್, ಸುರೇಶ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

- - - -11ಎಚ್.ಎಲ್.ಐ2:

ಹೊನ್ನಾಳಿ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಕುಂಚಿಟಿಗ ಸಮಾಜದ ಸರ್ವ ಸಮ್ಮೇಳನದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ಸಮಾಜದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.