ಸರ್ಕಾರದ ಯೋಜನೆ ಪಡೆಯಲು ಛಾಯಾಗ್ರಾಹಕರು ಸಂಘಟಿತರಾಗಲಿ-ವಿಜಯ ಜಾಧವ

| Published : Aug 03 2024, 12:40 AM IST

ಸರ್ಕಾರದ ಯೋಜನೆ ಪಡೆಯಲು ಛಾಯಾಗ್ರಾಹಕರು ಸಂಘಟಿತರಾಗಲಿ-ವಿಜಯ ಜಾಧವ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ತಂತ್ರಜ್ಞಾನ ಯುಗದಲ್ಲಿ ಛಾಯಚಿತ್ರ ವೃತ್ತಿಯನ್ನೆ ನಂಬಿಕೊಂಡು ವೃತ್ತಿ ಮಾಡುತ್ತಿರುವ ಛಾಯಾಗ್ರಾಹಕರ ಬದುಕು ತುಂಬಾ ಕಷ್ಟಕರವಾಗಿದೆ. ನಾವು ಮೊದಲು ಸಂಘಟಿತರಾಗಬೇಕಿದೆ, ಅಂದಾಗ ಮಾತ್ರ ಸರ್ಕಾರದ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ದಾವಣಗೆರೆ ಜಿಲ್ಲಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ವಿಜಯ ಜಾಧವ ಕಿವಿಮಾತು ಹೇಳಿದರು.

ಹಾನಗಲ್ಲ: ಇಂದಿನ ತಂತ್ರಜ್ಞಾನ ಯುಗದಲ್ಲಿ ಛಾಯಚಿತ್ರ ವೃತ್ತಿಯನ್ನೆ ನಂಬಿಕೊಂಡು ವೃತ್ತಿ ಮಾಡುತ್ತಿರುವ ಛಾಯಾಗ್ರಾಹಕರ ಬದುಕು ತುಂಬಾ ಕಷ್ಟಕರವಾಗಿದೆ. ನಾವು ಮೊದಲು ಸಂಘಟಿತರಾಗಬೇಕಿದೆ, ಅಂದಾಗ ಮಾತ್ರ ಸರ್ಕಾರದ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ದಾವಣಗೆರೆ ಜಿಲ್ಲಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ವಿಜಯ ಜಾಧವ ಕಿವಿಮಾತು ಹೇಳಿದರು.ಅ. ೨೪-೨೫ರಂದು ದಾವಣಗೆರೆಯಲ್ಲಿ ಏಳು ಜಿಲ್ಲೆಗಳ ಸಮ್ಮಿಲನದೊಂದಿಗೆ ನಡೆಸುತ್ತಿರುವ ಅಂತಾರಾಷ್ಟ್ರೀಯ ಛಾಯಾಮೇಳದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಹಾನಗಲ್ ತಾಲೂಕು ಛಾಯಾಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘಟನೆಗಳು ಬೆಳೆಯಬೇಕಾದರೆ ಎಲ್ಲರೂ ತನು, ಮನ, ಧನದಿಂದ ಕೈಜೋಡಿಸಿ ಕೆಲಸ ಮಾಡಬೇಕು. ಆಗ ಸಂಘಟನೆ ಶಕ್ತಿಯಾಗಿ ಹೊರಹೊಮ್ಮುತ್ತದೆ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗಿಟ್ಟು ಸಂಘಕ್ಕಾಗಿ ಎಲ್ಲರೂ ದುಡಿಯಬೇಕು. ಅಲ್ಲದೇ ಪ್ರತಿ ತಿಂಗಳ ಸಭೆ ನಡೆಸುವ ಮೂಲಕ ಸಂಘವನ್ನು ಗಟ್ಟಿಗೊಳಿಸಬೇಕು ಎಂದ ಅವರು, ಅ. ೨೪-೨೫ರಂದು ನಡೆಯುವ ಛಾಯಾಮೇಳಕ್ಕೆ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ದಾವಣಗೆರೆ ಜಿಲ್ಲಾ ಮಾಜಿ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಶಂಬು ಶಿಕಾರಿಬಾಬು, ಅತಿಥಿಗಳಾಗಿ ಹಾವೇರಿ ತಾಲೂಕು ಅಧ್ಯಕ್ಷ ಶಂಭುಗೌಡ ಅಂದಾನಿಗೌಡ್ರ, ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರಿ, ಹಾನಗಲ್ಲ ತಾಲೂಕು ಅಧ್ಯಕ್ಷ ಬಸವರಾಜ್ ಗಾಣಗೇರ ಮಾತನಾಡಿದರು. ಹಾವೇರಿ ಜಿಲ್ಲಾಧ್ಯಕ್ಷ ರಾಜೇಂದ್ರ ರಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಛಾಯಾಗ್ರಾಹಕ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಸುಣಗಾರ ವಂದಿಸಿದರು.ಈದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಛಾಯಾಮೇಳದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ತಾಲೂಕು ಛಾಯಾಗ್ರಾಹಕ ಸಂಘದ ಉಪಾಧ್ಯಕ್ಷ ರವಿ ಸಾಲಿಮಠ, ಗೌರವಾಧ್ಯಕ್ಷ ಪ್ರಮೋದ ದೇಸಾಯಿ, ಖಜಾಂಚಿ ಈರಣ್ಣ ಬಾಳಗೊಂಡರ, ಸಂಘಟನಾ ಕಾರ್ಯದರ್ಶಿ ಜಗದೀಶ ಹೊಸಳ್ಳಿ, ಸದಸ್ಯರಾದ ಕೆ. ಲೋಹಿತ್, ಗುರುಪ್ರಸಾದ ತೇಲಕರ್, ಮಾದೇವ್ ಬೆಳಗಾಲಪೇಟ್, ಮಂಜುನಾಥ ಅಂಬಿಗೇರ, ಲಿಂಗರಾಜ ಮೂಗೂರ, ಮೇಹಬೂಬ್ ಸಿದ್ದಿಯವರ, ಬಸವರಾಜ ಮಾಸಣಗಿ, ಮಾಲತೇಶ ಪೂಜಾರ ಉಪಸ್ಥಿತರಿದ್ದರು.