ಸಾರಾಂಶ
ಯೂತ್ ಕಾಂಗ್ರೆಸ್ ಸಂಘಟನೆ ಬಲವಾದರೆ ಕಾಂಗ್ರೆಸ್ ಪಕ್ಷ ಬಲವಾಗಲಿದೆ. ಶಾಸಕರ ಕೆಲಸಗಳು ಕ್ಷೇತ್ರದಲ್ಲಿ ಮನೆಮಾತಾಗಿದ್ದು, ಪಕ್ಷ ಸಂಘಟನೆಗೂ ಬಲ ನೀಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ತಿಳಿಸಿದರು. ದಾಬಸ್‌ಪೇಟೆಯಲ್ಲಿ ಯೂತ್ ಕಾಂಗ್ರೆಸ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಯೂತ್ ಕಾಂಗ್ರೆಸ್ ಸಂಘಟನೆ ಬಲವಾದರೆ ಕಾಂಗ್ರೆಸ್ ಪಕ್ಷ ಬಲವಾಗಲಿದೆ. ಶಾಸಕರ ಕೆಲಸಗಳು ಕ್ಷೇತ್ರದಲ್ಲಿ ಮನೆಮಾತಾಗಿದ್ದು, ಪಕ್ಷ ಸಂಘಟನೆಗೂ ಬಲ ನೀಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್. ಗೌಡ ತಿಳಿಸಿದರು.ವೀರನಂಜೀಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಯೂತ್ ಕಾಂಗ್ರೆಸ್ ಚುನಾವಣೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕರ ಸಹಕಾರದೊಂದಿಗೆ ಕ್ಷೇತ್ರ ವೇಗವಾಗಿ ಅಭಿವೃದ್ಧಿಯ ಕಡೆ ಸಾಗುತ್ತಿದೆ, ಪ್ರತಿ ಗ್ರಾಮದಲ್ಲಿ ಶಾಸಕರ ಅನುದಾನದ ಕೆಲಸಗಳು ನಡೆಯುತ್ತಿದ್ದು, ಸರ್ಕಾರದ ಯೋಜನೆಗಳು ತಲುಪಿವೆ, ಶಾಸಕರು ಪಕ್ಷ ಸಂಘಟನೆಗೆ ಹೆಚ್ಚು ಶಕ್ತಿ ನೀಡಿದ್ದು, ಅವರ ಸಲಹೆ, ಸೂಚನೆಗಳನ್ನು ತೆಗೆದುಕೊಂಡು ಬೂತ್ ಮಟ್ಟದಲ್ಲಿ ಮತ್ತಷ್ಟು ಬಲವಾಗಬೇಕಾಗಿರುವ ಅನಿವಾರ್ಯತೆ ಇದೆ ಎಂದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ನಿಮ್ಮ ಹೋರಾಟ, ಸಂಘಟನೆಯ ಬಲ ಮುಂದಿನ ಚುನಾವಣೆಗಳಲ್ಲಿ ಫಲಿತಾಂಶದ ಲಾಭದಲ್ಲಿ ದೊಡ್ಡ ಪಾತ್ರ ವಹಿಸಬೇಕು. ಕ್ಷೇತ್ರದ 276 ಬೂತ್‌ಗಳಲ್ಲಿಯೂ 30 ರಿಂದ 40 ಯೂತ್ ಕಾಂಗ್ರೆಸ್‌ನ ಸದಸ್ಯರ ಯುವ ತಂಡ ಸಿದ್ಧವಾಗಬೇಕು ಎಂದು ಸಲಹೆ ನೀಡಿದರು.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಯಶಂತ್ ಎಚ್.ಕೆ ಹಾಗೂ ನಗರ, ಕಸಬಾ, ತ್ಯಾಮಗೊಂಡ್ಲು, ಸೋಂಪುರದ ನೆಲಮಂಗಲ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀವ್ ಬಿ.ವಿ ಸ್ಪರ್ಧಿಸಿದ್ದು, ಅವರಿಗೆ ಮತ ನೀಡಲು ಶಾಸಕ ಎನ್.ಶ್ರೀನಿವಾಸ್ ಟಿ.ಬೇಗೂರು ಜಿಪಂ ವ್ಯಾಪ್ತಿಯ ಎಲ್ಲಾ ಮುಖಂಡರಲ್ಲಿ ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಜಗದೀಶ್, ರಂಗಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ ನಾಗರಾಜು, ಎನ್‌ಪಿಎ ಅಧ್ಯಕ್ಷ ನಾರಾಯಣಗೌಡ, ಸದಸ್ಯ ವಾಸು, ನಗರಸಭೆ ಸದಸ್ಯ ಪ್ರದೀಪ್, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಗೌಡ, ಕಣ್ಣೆಗೌಡನಹಳ್ಳಿ ಗ್ರಾಪಂ ಅಧ್ಯಕ್ಷ ಲಕ್ಷ್ಮೀದೇವಮ್ಮ ಕೃಷ್ಣಪ್ಪ, ಮುಖಂಡರಾದ ಹಸಿರುವಳ್ಳಿ ಕುಮಾರ್, ಅರ್ಜುನ್, ಬೂದಿಹಾಳ್ ಗೋವಿಂದರಾಜು, ಅಂಜನಮೂರ್ತಿ, ಕಾಚನಹಳ್ಳಿ ಮನು ಸೇರಿ ಮತ್ತಿತರರಿದ್ದರು.