ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡಲಿ

| Published : Jul 01 2024, 01:48 AM IST

ಸಾರಾಂಶ

"ಮನ್ ಕಿ ಬಾತ್ " ಅಂದರೆ "ಮನದಾಳದ ಮಾತು ". ದೇಶದ ಜನರ ಹೃದಯಕ್ಕೆ ಹತ್ತಿರವಾದ, ಪ್ರಚಲಿತ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಬೇಕು. ಅದು ಬಿಟ್ಟು ಕೆಲಸಕ್ಕೆ ಬಾರದ ವಿಚಾರಗಳನ್ನು "ಮನ್ ಕಿ ಬಾತ್ "ನಲ್ಲಿ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಡಿ.ಬಸವರಾಜ ದಾವಣಗೆರೆಯಲ್ಲಿ ಟೀಕಿಸಿದ್ದಾರೆ.

- ಕೆಲಸಕ್ಕೆ ಬಾರದ ವಿಚಾರ ಪ್ರಸ್ತಾಪ ಸರಿಯಲ್ಲ: ಡಿ.ಬಸವರಾಜ- - - ಕನ್ನಡಪ್ರಭ ವಾರ್ತೆ, ದಾವಣಗೆರೆ "ಮನ್ ಕಿ ಬಾತ್ " ಅಂದರೆ "ಮನದಾಳದ ಮಾತು ". ದೇಶದ ಜನರ ಹೃದಯಕ್ಕೆ ಹತ್ತಿರವಾದ, ಪ್ರಚಲಿತ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಬೇಕು. ಅದು ಬಿಟ್ಟು ಕೆಲಸಕ್ಕೆ ಬಾರದ ವಿಚಾರಗಳನ್ನು "ಮನ್ ಕಿ ಬಾತ್ "ನಲ್ಲಿ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಡಿ.ಬಸವರಾಜ ಟೀಕಿಸಿದ್ದಾರೆ.

ಸಮಾಜದ ಮೇಲೆ ಬೆಳುಕು ಚಲ್ಲುವಂತಹ ವಿಚಾರಗಳನ್ನು ಮಾತನಾಡುವುದನ್ನ ಪ್ರಧಾನಿ ಮೋದಿ ಕಲಿಯಬೇಕು. 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಸ್ನಾತಕೋತ್ತರ ನೀಟ್ ಸೋರಿಕೆ ಬಗ್ಗೆ ತಮ್ಮ ಸರ್ಕಾರದ ವ್ಯೆಫಲ್ಯದ ಬಗ್ಗೆ ಮಾತಾಡಬೇಕು. ಮೋದಿ ನಿರ್ಮಿತ ದೆಹಲಿ, ಗುಜರಾತ್ ಹಾಗೂ ಯುಪಿ ವಿಮಾನ ನಿಲ್ದಾಣಗಳ ಮೇಲ್ಚಾವಣಿ ಕುಸಿತ ಪ್ರಕರಣಗಳ ಬಗ್ಗೆ ಪ್ರಧಾನಿ ಉತ್ತರಿಸಲಿ ಎಂದಿದ್ದಾರೆ.

ಅಯೋಧ್ಯೆಯ ರಾಮಪಥದ 10 ರಸ್ತೆಗಳನ್ನು ₹850 ಕೋಟಿ ಮೊತ್ತದಲ್ಲಿ ನಿರ್ಮಾಣದ ಕುಸಿತದ ಬಗ್ಗೆ ಮಾತಾಡಲಿ. ಆದರ್ಶ ಪುರುಷ ಶ್ರೀ ರಾಮನ ಗರ್ಭಗುಡಿ ಸೋರಿಕೆ ಬಗ್ಗೆ ಯಾಕೆ ಮನ್ ಕೀ ಬಾತ್‌ನಲ್ಲಿ ಮಾತಾಡಲ್ಲ. ಪ್ರಧಾನಿ ಅವರು ತೋರಿಕೆಗಾಗಿ ತರಾತುರಿಯಲ್ಲಿ ಲೋಕಸಭಾ ಚುನಾವಣೆ ದೃಷ್ಟಿಯಿಂದ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಿ, ನಿರ್ಮಿಸಿದ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆ. ಅವರ ಆಡಳಿತವೂ ಕಳಪೆ ಆಗಿವೆ ಎಂದು ಬಸವರಾಜ ಕೇಂದ್ರ ಸರ್ಕಾರವನ್ನು ಜರಿದಿದ್ದಾರೆ.

- - - -30ಕೆಡಿವಿಜಿ35ಃ: ಡಿ.ಬಸವರಾಜ