ಬಹುಮಾನದ ಬರಹಗಳು ಸಾಹಿತ್ಯ ಕೃಷಿಗೆ ಮೂಲವಾಗಲಿ: ಪ್ರೊ.ರಹಮತ್ ತರೀಕೆರೆ

| Published : Jul 21 2025, 12:00 AM IST

ಬಹುಮಾನದ ಬರಹಗಳು ಸಾಹಿತ್ಯ ಕೃಷಿಗೆ ಮೂಲವಾಗಲಿ: ಪ್ರೊ.ರಹಮತ್ ತರೀಕೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ತುಂಬೆಲ್ಲಾ ಸಾಹಿತ್ಯ ಸ್ಪರ್ಧೆಗಳು ನಡೆಯುತ್ತವೆ. ಅದರಲ್ಲಿ ಬಹುಮಾನ ಪಡೆದವರು ಅಲ್ಲಿಯೇ ನಿಂತೆರೆ, ಅದು ಸಾಹಿತ್ಯಲೋಕಕ್ಕೆ ನಷ್ಟ. ನಂತರವೂ ನಿರಂತರತೆ ಕಾಪಾಡಿಕೊಂಡರೆ ಹೊಸ ಸಾಹಿತ್ಯ ಸೃಷ್ಟಿಗೆ ಮೂಲವಾಗುತ್ತದೆ ಎಂದು ಸಂಸ್ಕೃತಿ ಚಿಂತಕ, ಲೇಖಕ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ.

- ''''''''ಸಾಹಿತ್ಯ- ಸಂಸ್ಕೃತಿ- ಚಿಂತನ ಸಂವಾದ'''''''' ಕಾರ್ಯಕ್ರಮ

- - -

ದಾವಣಗೆರೆ: ಕರ್ನಾಟಕದ ತುಂಬೆಲ್ಲಾ ಸಾಹಿತ್ಯ ಸ್ಪರ್ಧೆಗಳು ನಡೆಯುತ್ತವೆ. ಅದರಲ್ಲಿ ಬಹುಮಾನ ಪಡೆದವರು ಅಲ್ಲಿಯೇ ನಿಂತೆರೆ, ಅದು ಸಾಹಿತ್ಯಲೋಕಕ್ಕೆ ನಷ್ಟ. ನಂತರವೂ ನಿರಂತರತೆ ಕಾಪಾಡಿಕೊಂಡರೆ ಹೊಸ ಸಾಹಿತ್ಯ ಸೃಷ್ಟಿಗೆ ಮೂಲವಾಗುತ್ತದೆ ಎಂದು ಸಂಸ್ಕೃತಿ ಚಿಂತಕ, ಲೇಖಕ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ನಗರದ ಶಾಂತಿ ಪಾರ್ಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ''''ಸಾಹಿತ್ಯ- ಸಂಸ್ಕೃತಿ- ಚಿಂತನ ಸಂವಾದ'''' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಈ ಹಿಂದೆ ನವ್ಯ ಮತ್ತು ನವೋದಯ ಸಾಹಿತ್ಯದ ಭರಾಟೆಯಲ್ಲಿ ಅ.ನ.ಕೃ. ಅವರ ಸಾಹಿತ್ಯ ಗೌಣವಾಯ್ತು. ಒಂದು ರೀತಿ ಅವರಿಗೆ ಅನ್ಯಾಯ ಆಯಿತೇನೋ ಎನ್ನುವುದು ನನ್ನ ಭಾವನೆ. ಇತ್ತೀಚೆಗೆ ಕನ್ನಡಕ್ಕೆ ಬುಕರ್ ಗೌರವ ಸಿಕ್ಕ ನಂತರ ಕನ್ನಡ ಪುಸ್ತಕ ವಹಿವಾಟು ಹೆಚ್ಚಾಗಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದು ಆರೋಗ್ಯಕರ ಬೆಳವಣಿಗೆ ಹೌದಾದರೂ, ಖರೀದಿಸಿದ ಓದುಗ ಆ ಪುಸ್ತಕ ಓದದೇ ಅಲಂಕಾರಿಕ ಕಪಾಟಿನಲ್ಲಿಟ್ಟರೆ ಲೇಖಕನಿಗಷ್ಟೇ ಅಲ್ಲ ಕನ್ನಡ ಸಾಹಿತ್ಯಕ್ಕೆ ಆಗುವ ದೊಡ್ಡ ನಷ್ಟ ಎಂದರು.

ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಸೀಮಿತ ಪದಗಳಲ್ಲಿ ಕತೆ ಬರೆಯೋದು ಒಂದು ಸವಾಲು. ಇಂದಿನ ಯುವಪೀಳಿಗೆ ಅದನ್ನು ಸ್ವೀಕರಿಸಿ ಸದಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಗುವುದು ಸಾಹಿತ್ಯಕ್ಕೆ ಲಾಭವಾಗವುದು. ಇದನ್ನು ಅಲ್ಲಗಳೆದು ರಾಗ ಎಳೆಯುವ ಮನಸುಗಳು ಬರೆದು, ಗೆದ್ದು ತೋರಿಸಲಿ ಎಂದರು.

ಮಾನವ ಬಂಧುತ್ವ ವೇದಿಕೆಯ ಎ.ಬಿ. ರಾಮಚಂದ್ರಪ್ಪ, ನಿವೃತ್ತ ಪ್ರಾಚಾರ್ಯ ದಾದಾಪೀರ್ ಸಂವಾದ ನಡೆಸಿಕೊಟ್ಟರು. ಬಾ.ಮ. ಬಸವರಾಜಯ್ಯ ಲಂಕೇಶ, ತೇಜಸ್ವಿ ಅವರ ಸಾಹಿತ್ಯ ಚಿಂತನೆ ಹಂಚಿಕೊಂಡರು.ಹಿರಿಯ ಪತ್ರಕರ್ತರಾದ ಸದಾನಂದ ಹೆಗಡೆ, ಅಂಜಿನಪ್ಪ, ಕೊಟ್ರೇಶ್, ನಾಗರಾಜ್, ಲಿಂಗರಾಜ್ ಬಿದರಕುಂದಿ, ಮಹಾಂತೇಶ್ ನಿಟ್ಟೂರು ಸಂವಾದದಲ್ಲಿ ಭಾಗವಹಿಸಿದ್ದರು. ಕತೆಗಾರರಾದ ಸಂತೆಬೆನ್ನೂರು ಫೈಜ್ನಟ್ರಾಜ್ ಮತ್ತು ಕಾದಂಬರಿಕಾರ ಪಾಪುಗುರು ಕಾರ್ಯಕ್ರಮ ಆಯೋಜಿಸಿ ನಿರ್ವಹಣೆ ಮಾಡಿದರು.

- - -

-19ಕೆಡಿವಿಜಿ35.ಜೆಪಿಜಿ:

ದಾವಣಗೆರೆಯಲ್ಲಿ ನಡೆದ ಸಾಹಿತ್ಯ- ಸಂಸ್ಕೃತಿ- ಚಿಂತನ ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ರಹಮತ್ ತರೀಕೆರೆ , ಬಿ.ಎನ್.ಮಲ್ಲೇಶ್ ಇತರರು ಭಾಗವಹಿಸಿದ್ದರು.