ಸಾರಾಂಶ
ಹರಪನಹಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಆಹ್ವಾನ ಅಕ್ಷತೆ ಕೊಡುವ ಮೂಲಕ ತಾಲೂಕಿನ ಪ್ರತಿ ಮನೆ ಮನೆಗೂ ತಲುಪಿಸಬೇಕು ಎಂದು ಆರ್‌ಎಸ್‌ಎಸ್‌ನ ಗ್ರಾಮ ವಿಕಾಸ ಪ್ರಾಂತ ಸಂಯೋಜಕ, ಪ್ರಚಾರಕ ಜಿ. ರಾಜಶೇಖರ್ ತಿಳಿಸಿದರು.
ಸೋಮವಾರ ಪಟ್ಟಣದ ತರಳಬಾಳು ಕಲ್ಯಾಣಮಂಟಪದಲ್ಲಿ ಆಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾನ ಸಂಬಂಧ ಆಯೋಧ್ಯೆಯಿಂದ ಬಂದ ಅಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಜ. 22ಕ್ಕೆ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಿರಿ ಸಂಭ್ರಮ ದೇಶವ್ಯಾಪ್ತಿಯಾಗಬೇಕು. ಆ ನಿಟ್ಟಿನಲ್ಲಿ ಆಯೋಧ್ಯೆಯಿಂದ ಬಂದಿರುವ ಸಾವಯವ ಅಕ್ಕಿ, ದೇಶಿಯ ತುಪ್ಪ, ಅರಿಶಿಣ ಹಾಕಿ ತಯಾರಿಸಿದ ಅಕ್ಷತೆ ಕಾಳುಗಳನ್ನು ಪ್ರತಿ ಮನೆ ಮನೆಗೂ ತಲುಪಬೇಕಾಗಿದೆ ಎಂದರು.
5೦೦ ವರ್ಷಗಳ ಹೋರಾಟದ ಸಾಫಲ್ಯತೆ ಅಂದು ಸಿಗುತ್ತದೆ. ದೇಶದ ಜನರ ಶ್ರದ್ಧೆಯ ಬಿಂದು ಶ್ರೀರಾಮವಾಗಿದ್ದು, ಈ ಕಾರ್ಯಕ್ರಮ ಕೇವಲ ಶ್ರೀರಾಮನಮೂರ್ತಿ ಪ್ರತಿಪ್ರಷ್ಠಾಪನೆ ಅಲ್ಲ, ದೇಶದ ಸ್ವಾಭಿಮಾನ ನಿರ್ಮಾಣ ಕಾರ್ಯಕ್ರಮ ಎಂದರು.ಜ. 22ರಂದು ಮಧ್ಯಾಹ್ನ 12.16ಕ್ಕೆ ಆಯಾ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ಕೈಗೊಳ್ಳಬೇಕು. ಪ್ರತಿಯೊಬ್ಬರೂ ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮವನ್ನು ದೃಶ್ಯಮಾಧ್ಯಮಗಳಲ್ಲಿ ವೀಕ್ಷಣೆ ಮಾಡಬೇಕು ಎಂದರು.
ಇದಕ್ಕೂ ಪೂರ್ವದಲ್ಲಿ ಹಳೇ ಬಸ್‌ನಿಲ್ದಾಣದಲ್ಲಿನ ಸಾರಿ ಬಯಲು ವೀರಭದ್ರೇಶ್ವರ ದೇವಸ್ಥಾನದಿಂದ ಅಯೋಧ್ಯೆಯಿಂದ ಬಂದಿರುವ ಅಕ್ಷತೆಯ ಕಾಳುಗಳುಳ್ಳ ಚೀಲಗಳನ್ನು ಮೆರವಣಿಗೆ ಮೂಲಕ ಹೊಸಪೇಟೆ ರಸ್ತೆಯ ಮಾರ್ಗವಾಗಿ ತರಳಬಾಳು ಕಲ್ಯಾಣಮಂಟಪಕ್ಕೆ ತರಲಾಯಿತು.ಈ ಸಂದರ್ಭದಲ್ಲಿ ಸಂಯೋಜಕ ಜಿ. ಪಶುಪತಿ, ತಾಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಎಚ್.ಎಂ. ಜಗದೀಶ್, ಬಿಜೆಪಿ ಮುಖಂಡರಾದ ಜಿ. ನಂಜುನಗೌಡ, ಅರುಂಡಿ ನಾಗರಾಜ, ಎಚ್.ಎಂ. ಅಶೋಕ, ಸುವರ್ಣ ಅರುಂಡಿ, ಮುದುಕ್ಕವ್ವನವರ ಶಂಕರ, ಕುಸುಮಾ ಜಗದೀಶ, ಹರಾಳ ಪ್ರಭ ಅಶೋಕ, ಚಂದ್ರಶೇಖರ ಪೂಜಾರ, ಆರ್‌ಎಸ್‌ಎಸ್ ಮುಖಂಡ ಸತ್ಯನಾರಾಯಣ, ಬಿ.ವೈ. ವೆಂಕಟೇಶನಾಯ್ಕ, ನಾಗರಾಜ, ಮನೋಜ ತಳವಾರ, ಶಿವಾನಂದ ದಾದಾಪುರ, ಕಡತಿ ರಮೇಶ್ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))