ಗುಣಾತ್ಮಕ ಶಿಕ್ಷಣದಿಂದ ಜ್ಞಾನ ಹೆಚ್ಚಳ

| Published : Dec 26 2023, 01:32 AM IST

ಸಾರಾಂಶ

ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣದ ಪ್ರಗತಿಗಾಗಿ ಕಾಲೇಜು ಶಿಕ್ಷಣ ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಸದುಪಯೋಗ ಪಡೆಯಿರಿ .

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರಿಂದ ಅವರ ಜ್ಞಾನ, ಕೌಶಲ್ಯ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಧಾರವಾಡ ಜಂಟಿ ನಿರ್ದೇಶಕರ ಕಚೇರಿಯ ನ್ಯಾಕ್ ವಿಶೇಷ ಅಧಿಕಾರಿ ಪ್ರೊ.ಅಪ್ತಾಬ್ ಭಾಯಿ ಹೇಳಿದರು. ಅವರು ನೇಸರಗಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ವಿಭಾಗದಿಂದ ಹಮ್ಮಿಕೊಂಡ ಪ್ರೊಗ್ರಾಮ್ ಔಟಕಮ್ಸ ಆಂಡ್ ಕೋರ್ಸ್‌ ಔಟಕಮ್ಸ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಸಕ್ತಿ ವೃದ್ಧಿಸಲು ಪ್ರಾಧ್ಯಾಪಕರ ಪಾತ್ರ ಮುಖ್ಯವಾಗಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಕಾಲೇಜಿಗೆ ನ್ಯಾಕ್ ಪೀರ್ ತಂಡ ಭೇಟಿ ನೀಡಿ, ಮೌಲ್ಯಮಾಪನ ಕೈಗೊಳ್ಳುವುದರಿಂದ ನಂತರದ ಅವಧಿಗಳಲ್ಲಿ ನ್ಯಾಕ್ ಗ್ರೇಡ್ ಉನ್ನತೀಕರಣ ನಿಟ್ಟಿನಲ್ಲಿ ಕಾಲೇಜಿನ ಸಿಬ್ಬಂದಿ ಐಕ್ಯುಎಸಿ ಅಡಿಯಲ್ಲಿ ನಿರ್ವಹಿಸಬೇಕಾದ ಕಾರ್ಯಕಲಾಪ ಹಾಗೂ ಸಂಬಧಿಸಿದ ದಾಖಲೆಗಳ ನಿರ್ವಹಣೆಯ ಕುರಿತು ಮಾರ್ಗದರ್ಶನ ಮಾಡಿದರು.ಕಾಲೇಜಿನ ಪ್ರಾಚಾರ್ಯ ಡಾ.ಫಕೀರ ನಾಯ್ಕ ಗಡ್ಡಿಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣದ ಪ್ರಗತಿಗಾಗಿ ಕಾಲೇಜು ಶಿಕ್ಷಣ ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಸದುಪಯೋಗ ಪಡೆಯಿರಿ ಎಂದರು. ಐಕ್ಯುಎಸಿ ವಿಭಾಗದ ಸಂಚಾಲಕ ಶ್ರೀದೇವಿ ನರವಾಡೆ, ಸಹ ಸಂಯೋಜಕ ಪೃಥ್ವಿ ರಾಜ್.ಎನ್, ಪ್ರೊ.ಎಂ.ಬಿ.ಕೊಪ್ಪದ, ಪ್ರೊ.ವಿನಯ ಕುಲಕರ್ಣಿ, ಮಲ್ಲಿಕಾರ್ಜುನ ಕುಂಬಾರ, ಪ್ರೊ.ಶಿವಾನಂದ ಹಿರೇಮಠ, ಪ್ರೊ. ನೇಂದ್ರಪ್ಪ, ಸುರೇಖಾ ಶೆಟ್ಟಿ, ಡಾ.ಎನ್.ಟಿ.ರೇಣಕಿಗೌಡರ, ಎಸ್.ಎಂ.ಜಾದವ ಹಾಗೂ ವಿದ್ಯಾರ್ಥಿಗಳು ಇದ್ದರು.