ಹಾನಗಲ್ಲ: ಪುರಸಭೆಗೆ ಪಾವತಿಸಬೇಕಾಗಿದ್ದ ನಳ ಬಿಲ್ ಫೇಕ್ ನೀಡಿದ್ದು, ಪುರಸಭೆ ಇಂತಹ ಹತ್ತು ಹಲವು ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದು ಪುರಸಭೆ ಮಾಜಿ ಸದಸ್ಯರಾದ ಜಮೀರಅಹಮ್ಮದ್ ಶೇಖ್ ಹಾಗೂ ಶೋಭಾ ಉಗ್ರಣ್ಣನವರ ಆಪಾದಿಸಿ ಪುರಸಭೆ ಎದುರು ಪ್ರತಿಭಟನೆ ನಡೆಸಿದರು. ಸೋಮವಾರ ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2025ರ ನವೆಂಬರ್ ತಿಂಗಳಿನಲ್ಲಿಯೇ ನಳದ ಬಿಲ್‌ಗೆ ಸಂಬಂಧಿಸಿದ 9400 ರು.ಗಳನ್ನು ಗ್ರಾಹಕರೊಬ್ಬರು ಸಂಬಂಧಿಸಿದ ಪುರಸಭೆ ನೌಕರರಿಗೆ ನೀಡಿದ್ದಾರೆ. ನೌಕರರು 1400 ರು.ಗಳ ಒಂದು ಪಾವತಿಸಿದ ಬಿಲ್ ಹಾಗೂ ಇನ್ನೊಂದು 8040 ರು.ಗಳ ಖೊಟ್ಟಿ ಬಿಲ್ ನೀಡಿದ್ದಾರೆ. ಮತ್ತೆ ಇದೇ ಫೆಬ್ರವರಿ ತಿಂಗಳಿನಲ್ಲಿ ನಳದ ಬಿಲ್‌ಗಾಗಿ ನೌಕರರು ಮನೆಗೆ ಬಂದಾಗ ಪಾವತಿಸಿದ್ದೇನೆ ಎಂದು ಗ್ರಾಹಕರು ತಿಳಿಸಿದ್ದಾರೆ. ಆಗ ಈ ಪ್ರಕರಣವನ್ನು ಪರಿಶೀಲಿಸಲಾಗಿ 8040 ರು.ಗಳ ಬಿಲ್ ಫೇಕ್ ಬಿಲ್ ಎಂದು ತಿಳಿದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆ ಹಣವನ್ನು ನೌಕರರು ಬ್ಯಾಂಕ್‌ಗೆ ಪಾವತಿದ್ದಾರೆ ಎಂದು ಅವರು ತಿಳಿಸಿದರು. ಹಾನಗಲ್ಲ ಪುರಸಭೆಯಲ್ಲಿ ಇಂತಹ ಹಲವು ಪ್ರಕರಣಗಳಿವೆ. ನಳದ ಬಿಲ್ ಬಗ್ಗೆ ನಾವು ಪುರಸಭೆ ಸದಸ್ಯರಿರುವಾಗಲೆ ಮಾಹಿತಿ ಕೇಳಿದರೆ ನಿರಾಕರಿಸಿದ್ದರು. ಬಹುಶಃ ನಿರಾಕರಣೆಗೆ ಕಾರಣ ಇಂತಹ ಪ್ರಕರಣಗಳೇ ಎಂದು ಸಾಬೀತಾಗುತ್ತಿದೆ ಎಂದರು. ಪುರಸಭೆಯಲ್ಲಿ ಹತ್ತಾರು ವರ್ಷಗಳಿಂದ ನೌಕರರು ಕಾಯಂ ಇರುವುದು ಕೂಡ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು. ಇಂತಹ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಪುರಸಭೆಯ ಆದಾಯ ಪೋಲಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತವೆ ಎಂದು ದೂರಿದ ಅವರು, ಪುರಸಭೆಯ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳು ಟೆಂಡರ್ ಆಗಿ ವರ್ಷಗಳೇ ಗತಿಸಿವೆ. ಆದರೆ ಕಾಮಗಾರಿ ನಡೆದಿಲ್ಲ. ಮುಂದೊಂದು ದಿನ ಕಾಮಗಾರಿ ಆಗದೆ ಬಿಲ್ ತೆಗೆಯುವ ಭ್ರಷ್ಟಾಚಾರಕ್ಕೂ ಇದು ಅವಕಾಶವಾದೀತು. ಕೂಡಲೇ ಜಿಲ್ಲಾಧಿಕಾರಿಗಳು ಇಂತಹ ಪ್ರಕರಣಗಳ ಬಗೆಗೆ ಗಮನ ಹರಿಸಿ ಹಾನಗಲ್ಲ ಪುರಸಭೆಯನ್ನು ಭ್ರಷ್ಟಾಚಾರ ಮುಕ್ತ ಮಾಡಬೇಕೆಂದು ಪುರಸಭೆ ಮಾಜಿ ಸದಸ್ಯರಾದ ನಿಯಾಜಅಹಮ್ಮದ್ ಶೇಖ್ ಹಾಗೂ ಶೋಭಾ ಉಗ್ರಣ್ಣನವರ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಚಂದ್ರು ಉಗ್ರಣ್ಣನವರ ಸೇರಿದಂತೆ ಹಲವರು ಇದ್ದರು.
ಪುರಸಭೆ ನೌಕರರ ಭ್ರಷ್ಟಾಚಾರ ಖಂಡಿಸಿ ಸದಸ್ಯರ ಪ್ರತಿಭಟನೆ
ಪುರಸಭೆಗೆ ಪಾವತಿಸಬೇಕಾಗಿದ್ದ ನಳ ಬಿಲ್ ಫೇಕ್ ನೀಡಿದ್ದು, ಪುರಸಭೆ ಇಂತಹ ಹತ್ತು ಹಲವು ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದು ಪುರಸಭೆ ಮಾಜಿ ಸದಸ್ಯರಾದ ಜಮೀರಅಹಮ್ಮದ್ ಶೇಖ್ ಹಾಗೂ ಶೋಭಾ ಉಗ್ರಣ್ಣನವರ ಆಪಾದಿಸಿ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.