ಶಿಕ್ಷಣ, ಉದ್ಯೋಗ, ಆರೋಗ್ಯ, ಮೂಲ ಸೌಕರ್ಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ರಾಜ್ಯದ ಇತರೆ ಭಾಗಗಳೊಂದಿಗೆ ವಿಜಯಪುರ ಜಿಲ್ಲೆಯೂ ಸಂಪೂರ್ಣ ಅಭಿವೃದ್ಧಿಯಾಗಲು ಸರ್ಕಾರ ಮುಂದಾಗಬೇಕು ಎಂದು ರಾಷ್ಟ್ರೀಯ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಶಿಕ್ಷಣ, ಉದ್ಯೋಗ, ಆರೋಗ್ಯ, ಮೂಲ ಸೌಕರ್ಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ರಾಜ್ಯದ ಇತರೆ ಭಾಗಗಳೊಂದಿಗೆ ವಿಜಯಪುರ ಜಿಲ್ಲೆಯೂ ಸಂಪೂರ್ಣ ಅಭಿವೃದ್ಧಿಯಾಗಲು ಸರ್ಕಾರ ಮುಂದಾಗಬೇಕು ಎಂದು ರಾಷ್ಟ್ರೀಯ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಶ್ರೀ ರೇ.ಚ.ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ 37 ದಿನಗಳಿಂದ ನಡೆದ ಧರಣಿಯಲ್ಲಿ ವಿವಿಧ ಮಠಾಧೀಶರ ಭಾಗವಹಿಸಿ ಬೆಂಬಲ ನೀಡಿದರು. ಈ ವೇಳೆ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳಿಗೆ 371(ಜೆ) ಕಲಂ ಜಾರಿಯಾದರೆ ಅವರಿಗೆ ವೈದ್ಯಕೀಯ ಶಿಕ್ಷಣ ಹಾಗೂ ನೌಕರಿ ಪಡೆಯಲು ಸಹಕಾರಿಯಾಗುತ್ತದೆ. ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ, ನೀರಾವರಿ ಸೌಲಭ್ಯದಲ್ಲಿ ರೈತರ ಹಿತ ಕಾಯಲು ಹೋರಾಟ ಜನಾಂದೋಲನವಾಗಬೇಕು ಎಂದರು.ಅಲಮೇಲದ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, 371(ಜೆ) ಕಲ್ಯಾಣ ಕರ್ನಾಟಕದ ಜನರ ಆಶೋತ್ತರಗಳು ಈಡೇರಬೇಕಾದರೆ ಕ್ರಿಯಾತ್ಮಕ ಸಂಘಟನೆ ಮಾಡಿದಾಗ 371(ಜೆ) ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸರ್ಕಾರ ಮಧ್ಯ ಪ್ರವೇಶಿಸಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಮೀಸಲಾತಿ ಪಡೆಯಲು ಮೀಸಲಾತಿ ಪಡೆಯಲು ನಾವು ಸಿದ್ಧರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಣಗೇರಿ ವಿಶ್ವರಾಧ್ಯ ಶಿವಾಚಾರ್ಯರು, ಹತ್ತಿಳ್ಳಿ ಗುರುಪಾದ ಶಿವಾಚಾರ್ಯರು, ಯಂಕಂಚಿ ರುದ್ರಮುನಿ ಶಿವಾಚಾರ್ಯರು, ಹಿರೂರ ಜಯಸಿದ್ದೇಶ್ವರ ಶಿವಾಚಾರ್ಯರು, ತಡವಲಗ ರಾಚೋಟೇಶ್ವರ ಶಿವಾಚಾರ್ಯರು, ಕನ್ನೊಳ್ಳಿ ಸಿದ್ದಲಿಂಗ ಶಿವಾಚಾರ್ಯರು, ರೂಡಗಿ ಮಡಿವಾಳ ಸ್ವಾಮಿಗಳು, ಆಲಮೇಲ ಸಂಗನಬಸವ ಶಿವಾಚಾರ್ಯರು, ತಾರಪೂರ ಗುರುಲಿಂಗೇಶ್ವರ ಶಿವಾಚಾರ್ಯರು, ಚಡಚಣ ಷಡಕ್ಷರಿ ಸ್ವಾಮಿಗಳು, ಕಲಕೇರಿ ಮಡಿವಾಳೇಶ್ವರ ಶಿವಾಚಾರ್ಯರು, ಅಗರಖೇಡ ಪ್ರಭುಲಿಂಗ ಸ್ವಾಮಿಗಳು, ಜೈನಾಪುರ ರೇಣುಕ ಶಿವಾಚಾರ್ಯರು, ಹಾವಿನಾಳ ವಿಜಯಮಹಾಂತೇಶ್ವರ ಶಿವಾಚಾರ್ಯರು, ನೀಲೂರ ಶಿವರುದ್ರ ಶಿವಾಚಾರ್ಯರು, ಗೋಳಸಾರ ಅಭಿನವ ಪುಂಡಲಿಂಗ ಸ್ವಾಮಿಗಳು, ಭಂಥನಾಳ ಸಂಗನಬಸವ ದೇವರು, ಕಡಣಿ ರೇವಣಸಿದ್ದ ಶಿವಾಚಾರ್ಯರು, ಬೋರಗಿ-ಪುರದಾಳ ಮಹಾಲಿಂಗೇಶ್ವರ ಸ್ವಾಮಿಗಳು, ಕರಬಂಟನಾಳ ಶಿವಕುಮಾರ ಸ್ವಾಮಿಗಳು, ಮುಳವಾಡ ವಿರೂಪಾಕ್ಷ ಶಿವಾಚಾರ್ಯರು, ಢವಳಗಿ ಘನಮರೇಶ್ವರ ಸ್ವಾಮಿಗಳು, ಕುಂಟೋಜಿ ರುದ್ರಮುನಿ ಸ್ವಾಮಿಗಳು, ಹೋರಾಟ ಸಮಿತಿಯ ಅಶೋಕ ಅಲ್ಲಾಪೂರ, ವಕೀಲ ದಾನಪ್ಪಗೌಡ ಚನಗೊಂಡ, ಶೈಲಾಜ ಸ್ಥಾವರಮಠ, ಗುರುರಾಜ್ ಪಡಶೆಟ್ಟಿ, ಸಿದ್ದುಗೌಡ ಪಾಟೀಲ, ಸಾಯಬಣ್ಣ ದೇವರಮನಿ, ಪಂಡಿತ ಯಂಪುರೆ, ಎಂ.ಎಂ. ಹಂಗರಗಿ, ಸತೀಶ್ ಕವಲಗಿ, ಸಂಗಣ್ಣ ಬ್ಯಾಕೋಡ, ಆನಂದ ಶಾಬಾದಿ, ಶಂಕರ ಮಲ್ಲೇದ, ಸಿದ್ದು ಕಡಗಂಚಿ, ಅಂಬ್ರೀಶ ಸುಣಗಾರ, ಆರೀಫ ಅಂತರಗಂಗಿ, ಚಿಕ್ಕಸಿಂದಗಿ ಶಂಕರಲಿಂಗ ಹೆಬ್ಬಾಳ, ಪರಮಾನಂದ ಬಗಲಿ, ಬಾಬು ಓಲೇಕಾರ, ಸಂತೋಷ ಜೋಗೂರ ಇದ್ದರು.ಕನ್ನಡಪ್ರಭ ವಾರ್ತೆ ಸಿಂದಗಿ