ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಲಿ: ಲೇಖಕಿ ಸವಿತಾ ನಾಗಭೂಷಣ

| Published : Jul 09 2024, 12:54 AM IST

ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಲಿ: ಲೇಖಕಿ ಸವಿತಾ ನಾಗಭೂಷಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೊ. ಎಚ್‌.ಎಂ. ಮಹೇಶ್ವರಯ್ಯ ಅವರ ಪರಿಶ್ರಮ ಪ್ರಯತ್ನಗಳಿಂದಲೇ ಉನ್ನತವಾದದ್ದನ್ನು ಸಾಧಿಸಿದವರು. ಅವರದು ವೇಗದ ವ್ಯಕ್ತಿತ್ವ, ತಾವು ಅಂದುಕೊಂಡಿದ್ದನ್ನು ಛಲ ಬಿಡದೆ ಸಾಧಿಸಿದವರು.

ಧಾರವಾಡ:

ವಿದ್ಯಾರ್ಥಿಗಳು ಸಂವೇದನಾಶೀಲತೆ ಹೊಂದಿ, ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು ಎಂದು ಲೇಖಕಿ ಸವಿತಾ ನಾಗಭೂಷಣ ಹೇಳಿದರು.

ಇಲ್ಲಿನ ಯೂನಿವರ್ಸಿಟಿ ಪಬ್ಲಿಕ್ ಸ್ಕೂಲ್‌ನ ಪ್ರಾರ್ಥನಾ ಮಂದಿರದಲ್ಲಿ ನಡೆದ ಡಾ. ಎಚ್.ಎಫ್‌. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಹಾಗೂ ಜನಮುಖಿ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಡಾ. ಎಚ್.ಎಂ. ಮಹೇಶ್ವರಯ್ಯ ಸ್ಮರಣೆಯಲ್ಲಿ ಸದಭಿರುಚಿ ಶಾಲಾ ಚಟುವಟಿಕೆ ಪ್ರಾರಂಭೋತ್ಸವ ಹಾಗೂ ರಾಜೇಶ್ವರಿ ಮಹೇಶ್ವರಯ್ಯ ಅವರ ''''ಎದೆಯ ಹೊತ್ತಗೆ'''' ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎ. ಮುರಿಗೆಪ್ಪ ಮಾತನಾಡಿ, ಪ್ರೊ. ಎಚ್‌.ಎಂ. ಮಹೇಶ್ವರಯ್ಯ ಅವರ ಪರಿಶ್ರಮ ಪ್ರಯತ್ನಗಳಿಂದಲೇ ಉನ್ನತವಾದದ್ದನ್ನು ಸಾಧಿಸಿದವರು. ಅವರದು ವೇಗದ ವ್ಯಕ್ತಿತ್ವ, ತಾವು ಅಂದುಕೊಂಡಿದ್ದನ್ನು ಛಲ ಬಿಡದೆ ಸಾಧಿಸಿದವರು ಎಂದು ಹೇಳಿದರು.

ಇದೇ ವೇಳೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಅವರ ‘ಎದೆಯ ಹೊತ್ತಗೆ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ದತ್ತಿದಾನಿಗಳಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ಅವರು ತಮ್ಮ ದತ್ತಿಯ ಉದ್ದೇಶ ಮತ್ತು ದತ್ತು ತೆಗೆದುಕೊಂಡ ಬಾಲಕಿಯರಿಗೆ ಕಲಿಸಿಕೊಡುವ ಭಾಷಾ ಕೌಶಲ್ಯಗಳ ಬಗ್ಗೆ ತಿಳಿಸಿದರು. ನಿರ್ಮಲಾ ಮತ್ತು ಮಮತಾ ವಿದ್ಯಾರ್ಥಿನಿಯರಿಗೆ ವಿಶೇಷ ಬಹುಮಾನ ನೀಡಲಾಯಿತು. ೭ನೇ ತರಗತಿಯ ವಿದ್ಯಾರ್ಥಿನಿಯರಿಗೆ ರಾಜೇಶ್ವರಿ ಮಹೇಶ್ವರಯ್ಯ ಅವರು ಜಾಕೆಟ್‌ಗಳನ್ನು ಕೊಡುಗೆಯಾಗಿ ನೀಡಿದರು.

ಡಾ. ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ಗೌರವಾಧ್ಯಕ್ಷ ಎಸ್.ಬಿ. ಕೊಡ್ಲಿ ಅಧ್ಯಕ್ಷತೆ ವಹಿಸಿದ್ದರು. ಗೀತಾ ಬಾಗಲಕೋಟೆ ಹಾಗೂ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯ ಎ.ಬಿ. ನಾಯಕ, ಮೀನಾಕ್ಷಿ ಹಿರೇಮಠ, ವಿ.ಎಚ್. ಮುದುಕಂನವರ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.