ಸಾರಾಂಶ
ವಿದ್ಯಾರ್ಥಿಗಳು ಪಠ್ಯದ ಅಧ್ಯಯನದೊಂದಿಗೆ ಕಾನೂನುಗಳ ಬಗ್ಗೆ ತಿಳಿದುಕೊಂಡು ಕುಟುಂಬ ಸದಸ್ಯರಿಗೆ ಹಾಗೂ ಇತರರಿಗೆ ಕಾನೂನಿನ ಮಹತ್ವ ತಿಳಿಸಿಕೊಡಬೇಕು ಎಂದು ವಕೀಲ ವಿ.ಬಿ. ಮರ್ತೂರ ಹೇಳಿದರು.
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ವಿದ್ಯಾರ್ಥಿಗಳು ಪಠ್ಯದ ಅಧ್ಯಯನದೊಂದಿಗೆ ಕಾನೂನುಗಳ ಬಗ್ಗೆ ತಿಳಿದುಕೊಂಡು ಕುಟುಂಬ ಸದಸ್ಯರಿಗೆ ಹಾಗೂ ಇತರರಿಗೆ ಕಾನೂನಿನ ಮಹತ್ವ ತಿಳಿಸಿಕೊಡಬೇಕು ಎಂದು ವಕೀಲ ವಿ.ಬಿ. ಮರ್ತೂರ ಹೇಳಿದರು.ಪಟ್ಟಣದ ಸಮೀಪವಿರುವ ಜೈನಾಪುರ ಗ್ರಾಮದಲ್ಲಿ ಬುಧವಾರ ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ನಿಯಮ ಪಾಲಿಸಬೇಕು. ಬೈಕ್ ಸವಾರಿ ಮಾಡುವ ವೇಳೆ ಹೆಲ್ಮೆಟ್ ಕಡ್ಡಾಯವಾಗಿ ಬಳಸುವುದು ಸೇರಿದಂತೆ ವಿವಿಧ ನಿಯಮಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಸ್.ವಿ. ಅಗಸರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸ್ವಚ್ಛತೆ, ಪರಿಸರ, ಆರೋಗ್ಯದ ಮಹತ್ವ ಅರಿತುಕೊಂಡವರು ಭವಿಷ್ಯತ್ತಿನಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಾರೆ ಎಂದು ಹೇಳಿದರು.ಮುಖಂಡ ಶಂಕ್ರೆಪ್ಪ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಹಣಮಂತ ಗೊಳಸಂಗಿ, ಮಲ್ಲು.ಎಸ್. ಗೊಳಸಂಗಿ, ಶಾಂತಪ್ಪ ಜಾಧವ, ಪರಶುರಾಮ ಹೊಸಮನಿ ಇದ್ದರು.
ರೇಖಾ ಪೂಜಾರಿ, ಸವಿತಾ ಪೂಜಾರಿ ಪ್ರಾರ್ಥಿಸಿದರು. ಉಪನ್ಯಾಸಕ ಚೇತನ ಬಾಗೇವಾಡಿ ಸ್ವಾಗತಿಸಿದರು. ಎಚ್.ಡಿ. ಬಿರಾದಾರ ವಂದಿಸಿದರು. ಮುನ್ನ ವಿದ್ಯಾರ್ಥಿಗಳು ಗ್ರಾಮದಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆಯ ಮಹತ್ವ ಕುರಿತು ಜಾಗೃತಿ ಮೂಡಿಸಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ವಿದ್ಯಾರ್ಥಿಗಳು ಪಠ್ಯದ ಅಧ್ಯಯನದೊಂದಿಗೆ ಕಾನೂನುಗಳ ಬಗ್ಗೆ ತಿಳಿದುಕೊಂಡು ಕುಟುಂಬ ಸದಸ್ಯರಿಗೆ ಹಾಗೂ ಇತರರಿಗೆ ಕಾನೂನಿನ ಮಹತ್ವ ತಿಳಿಸಿಕೊಡಬೇಕು ಎಂದು ವಕೀಲ ವಿ.ಬಿ. ಮರ್ತೂರ