ಸಾರಾಂಶ
ಚಿತ್ರದುರ್ಗ: ಶಿಕ್ಷಣ ಸಂಸ್ಥೆಗಳು ಯಾವ ಮಟ್ಟದಲ್ಲಿ ಹಾಳಾಗುತ್ತಿದೆ. ಹೇಗೆ ಬೆಳೆಯುತ್ತಿದೆ ಎನ್ನುವುದರ ಕಡೆ ನಿಗಾ ಇಡಲು ನ್ಯಾಕ್ ಕಮಿಟಿಯ ಪಾತ್ರ ದೊಡ್ಡದು ಎಂದು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.ನ್ಯಾಕ್-ಬೈನರಿ ಅಕ್ರಿಡೇಷನ್ ಫ್ರೇಂ ವರ್ಕ್ ಅಂಡ್ ರಿಫಾರಮ್ಸ್-2024 ಕುರಿತು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಗಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆ ಮಾನವೀಯತೆ, ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದರು.1983-84ರಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಆರಂಭಗೊಂಡಿತು. 42 ವರ್ಷಗಳಿಂದ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದರ ಹಿಂದೆ ಸಂಸ್ಥೆಯ ಸಂಸ್ಥಾಪಕರಾದ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರ ಪರಿಶ್ರಮ ಅಪಾರ. ಐದು ಸಾವಿರ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿದ್ದಾರೆ. ಬಿ.ಎ., ಬಿ.ಕಾಂ, ಬಿಸಿಎ. ಬಿಬಿಎ. ಫಾರ್ಮಸಿ, ಎಂ.ಫಾರ್ಮ, ನರ್ಸಿಂಗ್ ಆಯುರ್ವೇದಿಕ್ ಕಾಲೇಜು ನಮ್ಮ ಸಂಸ್ಥೆಯಡಿಯಲ್ಲಿ ನಡೆಸುತ್ತಿರುವುದು ಸುಲಭವಲ್ಲ ಎಂದರು.
ಕಾನೂನು ಸುಲಭವಾಗಿರಬೇಕು. ಕಠಿಣ, ದುರ್ಬಲವಾಗಿರಬಾರದು. 3600 ಶಿಕ್ಷಕರುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿರುವ ಕೀರ್ತಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗಿದೆ. ಇದಕ್ಕೆ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಪರಿಶ್ರಮ ಕಾರಣವೆಂದು ಸ್ಮರಿಸಿದ ಅವರು, ಇಲ್ಲಿ ಓದಿದವರಲ್ಲಿ ಕೆಲವರು ಜಿಲ್ಲಾಧಿಕಾರಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳಾಗಿದ್ದಾರೆ ಎಂದು ಸಂತಸ ಹಂಚಿಕೊಂಡರು.ನೋಡಲ್ ಅಧಿಕಾರಿ ಡಾ.ವಿಕ್ರಂ ಮಾತನಾಡಿ, ಪ್ರಸ್ತುತ ಶಿಕ್ಷಣ ರಂಗದಲ್ಲಿ ಸ್ಪರ್ಧೆ ಆರಂಭಗೊಂಡಿದೆ. ಪರೀಕ್ಷೆ, ಫಲಿತಾಂಶಕ್ಕಿಂತ ಮಿಗಿಲಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಪ್ರತಿ ರಂಗದಲ್ಲಿಯೂ ಡಾಕ್ಯುಮೆಂಟ್ ತುಂಬಾ ಮುಖ್ಯ. ನ್ಯಾಕ್ ಎನ್ನುವುದು ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲವನ್ನು ಹೇಳುತ್ತದೆ. ಹೊಸ ಮಾದರಿಯ ನ್ಯಾಕ್‍ಗೆ ಒಳಪಡುತ್ತಿದ್ದೇವೆ. ಇಂದಿಗೂ ನ್ಯಾಕ್‍ಗೆ ಒಳಪಡಬೇಕೋ ಬೇಡವೋ ಎನ್ನುವ ಗೊಂದಲ ಬಹಳಷ್ಟು ಶಿಕ್ಷಣ ಸಂಸ್ಥೆಗಳಲ್ಲಿದೆ ಎಂದರು.ಬೇರೆ ಕಾಲೇಜುಗಳಿಗೆ ಹೋಲಿಸಿದರೆ ಬಿ.ಇ.ಡಿ. ಕಾಲೇಜುಗಳಿಗೆ ನ್ಯಾಕ್ ತುಂಬಾ ಸುಲಭ. ಬೈನರಿ ಪದ್ಧತಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಬೆಳೆಯಲು ನ್ಯಾಕ್ ಬೇಕು ಎಂದರು.
ಮಕ್ಕಳಿಗೆ ಪಾಠ ಮಾಡುವಾಗ ಗುರಿ ತಲುಪುತ್ತಿದ್ದೇವೆಯೆ ಎನ್ನುವ ಕಡೆ ಶಿಕ್ಷಕರು ಯೋಚಿಸಬೇಕು. ಇಂದಿನ ಯುಗದಲ್ಲಿ ಮಕ್ಕಳಿಗೆ ಕೌಶಲ್ಯಯುತ ಶಿಕ್ಷಣ ಮುಖ್ಯ. ಬಿ.ಇ.ಡಿ. ಶಿಕ್ಷಣ ಮುಗಿಸಿ ಮಕ್ಕಳ ಎದುರು ನಿಲ್ಲದಿದ್ದರೆ ಅಂತಹ ಶಿಕ್ಷಣ ಪ್ರಯೋಜನವಿಲ್ಲ. ಶಿಕ್ಷಣಕ್ಕೂ ಕೌಶಲ್ಯಕ್ಕೂ ವ್ಯತ್ಯಾಸವಿದೆ. ಫೀಡ್ ಬ್ಯಾಕ್ ಪದ್ಧತಿ ಜಾರಿಯಲ್ಲಿರುವುದರಿಂದ ಕೆಲವು ಸಂಸ್ಥೆಗಳು ನ್ಯಾಕ್ ಪದ್ಧತಿಯನ್ನು ಗಂಭೀರವಾಗಿ ತೆಗೆದುಕೊಂಡಿವೆ ಎಂದು ತಿಳಿಸಿದರು.ದಾವಣಗೆರೆ ವಿಶ್ವವಿದ್ಯಾನಿಲಯದ ರಿಜಿಸ್ಟರ್ ಡಾ.ರಮೇಶ್.ಸಿ.ಕೆ. ಸಮ್ಮೇಳನದ ಸಂಯೋಜಕ ಪ್ರೊ.ಆರ್.ಎಸ್.ರಾಜು, ಐ.ಕ್ಯೂ.ಎ.ಸಿ.ಸಂಯೋಜಕರಾದ ಡಾ.ಎಚ್.ಎಸ್.ಬದ್ರಿ, ನ್ಯಾಕ್‍ನ್ ಫಾರ್ಮರ್ ಡೆಪ್ಯೂಟಿ ಸೆಕ್ರೆಟರಿ ಡಾ.ಎಸ್.ಶ್ರೀನಿವಾಸ್ ಮಾತನಾಡಿದರು.ಸಂಸ್ಥೆಯ ಪ್ರಾಂಶುಪಾಲರಾದ ಡಾ.ಬಿ.ಸಿ.ಅನಂತರಾಮು ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದ ಸಂಯೋಜಕರುಗಳಾದ ಡಾ.ಜಿ.ಇ.ಭೈರಸಿದ್ದಪ್ಪ ವೇದಿಕೆಯಲ್ಲಿದ್ದರು.ವಿವಿಧ ಕಾಲೇಜುಗಳು ಪ್ರಾಂಶುಪಾಲರು, ಐ.ಕ್ಯೂ.ಎ.ಸಿ. ಕೋ-ಆರ್ಡಿನೇಟರ್‌ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.