ಸಾರಾಂಶ
ಶಿಕ್ಷಕರು ತಮ್ಮ ಕೆಲಸದಲ್ಲಿ ಶ್ರದ್ಧೆಯಿಂದ ಸೇವೆ ಮಾಡಿದಲ್ಲಿ ಮಕ್ಕಳ ಭವಿಷ್ಯದಲ್ಲಿ ಬೆಳಕು ಮೂಡಲು ಸಾಧ್ಯ
ಲಕ್ಷ್ಮೇಶ್ವರ: ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಮೂಲಕ ಅವರಲ್ಲಿ ಜ್ಞಾನ ಬಿತ್ತುವ ಕಾರ್ಯ ಮಾಡಬೇಕು ಎಂದು ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ಪಟ್ಟಣದ ಶಂಕರ ಭಾರತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಡಿ.ಎಫ್.ಪಾಟೀಲ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಡಿ.ಎಫ್. ಪಾಟೀಲ ಇಲಾಖೆಗೆ ಗೌರವ ತರುವ ಕಾರ್ಯ ಮಾಡಿದ್ದಾರೆ. ಶಿಕ್ಷಕ ಕ್ಷೇತ್ರದಲ್ಲಿ ಬದ್ಧತೆಯಿಂದ ಕೆಲಸ ಮಾಡಿದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಅಕ್ಷರ ಜ್ಞಾನವನ್ನು ಬಿತ್ತುವ ಕಾರ್ಯ ಶ್ಲಾಘನೀಯ. ಶಿಕ್ಷಣ ಕ್ಷೇತ್ರದಲ್ಲಿ ಮಾಡುವ ಕಾರ್ಯ ಸೃಜನಶೀಲತೆಯಿಂದ ಕೂಡಿರಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅವರ ಪ್ರಗತಿಗೆ ಕಾರಣವಾಗಿದೆ. ಶಿಕ್ಷಕರು ತಮ್ಮ ಕೆಲಸದಲ್ಲಿ ಶ್ರದ್ಧೆಯಿಂದ ಸೇವೆ ಮಾಡಿದಲ್ಲಿ ಮಕ್ಕಳ ಭವಿಷ್ಯದಲ್ಲಿ ಬೆಳಕು ಮೂಡಲು ಸಾಧ್ಯ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಹೇಳಿದರು.ಸಮಾರಂಭದಲ್ಲಿ ಹಾನಗಲ್ಲ ತಾಲೂಕಿನ ಬಿಇಓ ವಿ.ವಿ. ಸಾಲಿಮಠ, ಗದಗ ಡೈಯಟ್ ಉಪನ್ಯಾಸಕ ಆರ್.ಎಸ್.ಬುರಡಿ, ಕೆ.ಎ.ಬಳಿಗಾರ, ಶಿಕ್ಷಣ ಇಲಾಖೆಯ ಹರೀಶ್ , ಶರಣಪ್ಪ ಹವಾಲ್ದಾರ್, ಡಿ.ಎಚ್.ಪಾಟೀಲ, ಬಿ.ಎಸ್.ಹರ್ಲಾಪೂರ, ಆರ್.ಎನ್.ಪಾಟೀಲ, ಕಗ್ಗಲಗೌಡರ, ಲಲಿತಾ ಕೆರಿಮನಿ, ಕೆ.ಎಸ್.ಕೊಡ್ಲಿವಾಡ ಹಾಗೂ ದೇವಕ್ಕ ಪಾಟೀಲ ಮಾತನಾಡಿದರು.
ಸಭೆಯಲ್ಲಿ ಎಂ.ಎಂ. ಹವಳದ, ಈರಣ್ಣ ಅಳ್ಳಳ್ಳಿ ಇದ್ದರು. ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರ್ವಹಿಸಿದರು.