ಸಾರಾಂಶ
ವಿದ್ಯಾರ್ಥಿಗಳಿಗೆ ಭಾಷಾಂತರವನ್ನು ಪಠ್ಯಕ್ರಮವಾಗಿ ರೂಪಿಸಬೇಕಾಗಿದೆ. ಭಾಷೆ, ಭಾಷೆಗಳ ನಡುವೆ ಸಾಂಸ್ಕೃತಿಕ ಕೊಡು, ಕೊಳ್ಳುವಿಕೆ ನಡೆದಿದೆ.
ಹೊಸಪೇಟೆ:
ವಿದ್ಯಾರ್ಥಿಗಳಿಗೆ ಭಾಷಾಂತರವನ್ನು ಪಠ್ಯಕ್ರಮವಾಗಿ ರೂಪಿಸಬೇಕಾಗಿದೆ. ಭಾಷೆ, ಭಾಷೆಗಳ ನಡುವೆ ಸಾಂಸ್ಕೃತಿಕ ಕೊಡು, ಕೊಳ್ಳುವಿಕೆ ನಡೆದಿದೆ. ಭಾಷಾಂತರವನ್ನು ಉನ್ನತ ಶಿಕ್ಷಣದಲ್ಲಿ ಪಠ್ಯವಾಗಿ ಪರಿಚಯಿಸಿದಂತಹ ಮೊಟ್ಟಮೊದಲ ವಿಶ್ವವಿದ್ಯಾಲಯ ಕನ್ನಡ ವಿಶ್ವವಿದ್ಯಾಲಯವಾಗಿದೆ ಎಂದು ಭಾಷಾಂತರಕಾರರು ಹಾಗೂ ವಿಮರ್ಶಕ ಡಾ. ಜನಾರ್ದನ್ ಭಟ್ ಹೇಳಿದರು.ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ಜಂಟಿಯಾಗಿ ಆಯೋಜಿಸಿರುವ 3 ದಿನಗಳ ಭಾಷಾಂತರ ತರಬೇತಿ ಕಮ್ಮಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಅನುವಾದವೆಂಬುದು ಬಹಳ ದೊಡ್ಡ ಆದಾಯ ಬರುವ ಉದ್ಯೋಗವೂ ಆಗಿದೆ. ಹಾಗಾಗಿ ಇಂತಹ ಕಮ್ಮಟ್ಟಗಳಲ್ಲಿ ಭಾಗವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ. ಚಲುವರಾಜು, ಇಂತಹ ಕಮ್ಮಟಗಳಲ್ಲಿ ಭಾಗವಹಿಸುವ ಅವಕಾಶಗಳು ಲಭ್ಯವಾಗಿರುವುದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗಲಿದೆ. ಪ್ರವಾಸೋದ್ಯಮ ತಾಣವಾದ ಹಂಪಿಯಂತಹ ಸ್ಥಳಗಳಲ್ಲಿ ಬರುವ ದೇಶ-ವಿದೇಶಗಳ ಪ್ರವಾಸಿಗರೊಂದಿಗೆ ಸ್ಥಳೀಯ ಅನಕ್ಷರಸ್ಥ ಜನರೂ ದಿನನಿತ್ಯದ ವಹಿವಾಟುಗಳಿಗಾಗಿ ಬೇರೆ ಬೇರೆ ಭಾಷಿಕರೊಂದಿಗೆ ವ್ಯವಹರಿಸುವುದನ್ನು ಗಮನಿಸಿದರೆ ಭಾಷಾಂತರದ ವ್ಯಾಪ್ತಿ ಎಷ್ಟಿದೆ ಎಂಬುದು ಅರ್ಥವಾಗುತ್ತದೆ ಎಂದರು.ಕಮ್ಮಟದ ನಿರ್ದೇಶಕ ಡಾ. ಎ. ಮೋಹನ ಕುಂಟಾರ್ ಪ್ರಾಸ್ತಾವಿಕ ಮಾತನಾಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯುಎಸಿ)ದ ಸಹಾಯಕ ನಿರ್ದೇಶಕ ಹಾಗೂ ಕಮ್ಮಟದ ಸಂಚಾಲಕಿ ಡಿ. ಪ್ರಭಾ ನಿರ್ವಹಿಸಿದರು.