ಶಾಲೆಗಳು ಸಬಲವಾಗಲು ಗ್ರಾಮಸ್ಥರು ದೇಣಿಗೆ ನೀಡಲಿ: ಸಂಸದೆ ಡಾ.ಪ್ರಭಾ

| Published : Oct 01 2024, 01:15 AM IST

ಶಾಲೆಗಳು ಸಬಲವಾಗಲು ಗ್ರಾಮಸ್ಥರು ದೇಣಿಗೆ ನೀಡಲಿ: ಸಂಸದೆ ಡಾ.ಪ್ರಭಾ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ತಾಲೂಕು ಅಭಿವೃದ್ಧಿಗೆ ಶಾಸಕ ಹರೀಶ್ ಜತೆಗೂಡಿ ಪಕ್ಷಾತೀತವಾಗಿ ಕೈ ಜೋಡಿಸುತ್ತೇನೆ ಎಂದು ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಲೇಬೆನ್ನೂರಿನಲ್ಲಿ ಭರವಸೆ ನೀಡಿದ್ದಾರೆ.

- ಹರಳಹಳ್ಳಿ ಸರ್ಕಾರಿ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನೆ - - - ಮಲೇಬೆನ್ನೂರು: ಹರಿಹರ ತಾಲೂಕು ಅಭಿವೃದ್ಧಿಗೆ ಶಾಸಕ ಹರೀಶ್ ಜತೆಗೂಡಿ ಪಕ್ಷಾತೀತವಾಗಿ ಕೈ ಜೋಡಿಸುತ್ತೇನೆ ಎಂದು ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು. ಇಲ್ಲಿಗೆ ಸಮೀಪದ ಹರಳಹಳ್ಳಿಯ ಸರ್ಕಾರಿ ಶಾಲೆ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ಶಾಲೆಗೆ ದೇಣಿಗೆ ನೀಡಬೇಕು. ಸರ್ಕಾರಿ ಶಾಲೆಗಳು ಸಬಲವಾಗಲು ಎಸ್‌ಡಿಎಂಸಿ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗಬೇಕು. ಶಿಕ್ಷಕರಿಗೆ ಡಯಟ್ ಕಾರ್ಯಕ್ರಮಗಳು ನಡೆಯಬೇಕು. ಆ ಹಂತದಲ್ಲಿ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.

ಪ್ರತಿ ಬಾರಿ ಚುನಾವಣೆಯಲ್ಲಿ ಬೇರೆ ಪಕ್ಷದ ಶಾಸಕರು ಆಯ್ಕೆಯಾಗುತ್ತಿದ್ದಾರೆ. ಆಡಳಿತ ಪಕ್ಷ ಬೇರೆಯಾಗಿರುವ ಕಾರಣ ಹರಿಹರ ತಾಲೂಕು ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಸದರು ಶಾಲಾ ಮಕ್ಕಳಿಗೆ ನೀಡುವ ಹಾಲು, ಬಿಸಿಯೂಟ, ಮೊಟ್ಟೆ, ಹಣ್ಣು, ಕ್ರೀಡೆಗಳು, ಆಟೋಟಗಳು, ಸ್ವಚ್ಛತೆ ಬಗ್ಗೆ ಮಕ್ಕಳ ಜತೆ ಸಂವಾದ ನಡೆಸಿದರು.

ಕೊಠಡಿ ಉದ್ಘಾಟಿಸಿದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಆಗುತ್ತದೆ ಎಂದು ಹರಿಹರದ ಉತ್ತರ ಕರ್ನಾಟಕ ಮತ್ತು ದಕ್ಷಿಣ ಭಾಗದ ರಸ್ತೆಯನ್ನು ದುರಸ್ತಿ ಮಾಡದ ಪರಿಸ್ಥಿತಿ ಇದೆ. ಹರಿಹರ ತಾಲೂಕಿನ ಶೇ.೭೦ ಭಾಗದ ರಸ್ತೆಗಳು ನದಿ ಪಾತ್ರದಲ್ಲಿದ್ದು, ಮರಳು ಸಾಗಣೆ ಮತ್ತು ಇಟ್ಟಿಗೆ ಭಟ್ಟಿಗಳಿಂದಾಗಿ ರಸ್ತೆಗಳು ಹದಗೆಡುತ್ತವೆ. ಸಂಸದರ ಜತೆ ಸೇರಿ ಅಭಿವೃದ್ಧಿಗೆ ಅನುದಾನ ನೀಡಲು ಸಹಕರಿಸೋಣ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಮಾತನಾಡಿ, ೧೫೦ ಮಕ್ಕಳಿರುವ ಶಾಲೆಯಲ್ಲಿ ಅಡುಗೆ ಕೋಣೆ, ಶಾಲಾ ಸುತ್ತ ಗೋಡೆ ಮತ್ತು ಶೌಚಾಲಯವನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷರು, ಎಸ್‌ಡಿಎಂಸಿ ಅಧ್ಯಕ್ಷರು, ಸಿಆರ್‌ಪಿ, ಶಿಕ್ಷಕರು ಹಾಗೂ ಸದಸ್ಯರು ಇದ್ದರು.

- - - -೩೦-ಎಂಬಿಆರ್೧: ಶಾಲಾ ಕೊಠಡಿಯನ್ನು ಸಂಸದೆ ಡಾ.ಪ್ರಭಾ ಉದ್ಘಾಟಿಸಿದರು.