ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ನಿಲ್ಲಲಿ

| Published : Aug 13 2024, 01:01 AM IST

ಸಾರಾಂಶ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳ್ಳಬೇಕು ಎಂದು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳ್ಳಬೇಕು ಎಂದು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದರು.

ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸಂಜೆ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಜರಂಗದಳದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತೀಯರು, ಶಾಂತಿ, ಸಹಿಷ್ಣುತೆ, ಭ್ರಾತೃತ್ವವನ್ನು ನಂಬಿದವರು. ಬಾಂಗ್ಲಾ ದೇಶದಲ್ಲಿ ನೆಲೆಸಿರುವ ಹಿಂದೂಗಳ ಹತ್ಯೆಗೆ ಮುಂದಾಗಿರುವುದು ಅವರ ಉದ್ಧಟತನ ತೋರಿಸುತ್ತದೆ. ಈ ಸಂದರ್ಭದಲ್ಲಿ ವಿಶ್ವಸಂಸ್ಥೆ ಅಲ್ಲಿನ ಹಿಂದೂಗಳ ರಕ್ಷಣೆಗೆ ನಿಂತು ತನ್ನ ಜವಾಬ್ದಾರಿ ತೋರಬೇಕು. ಬಾಂಗ್ಲಾದೇಶದ ಸೇನೆ ಮತ್ತು ಆರಕ್ಷಕ ಠಾಣೆಗಳ ಮೇಲಿನ ದಾಳಿ ಕೂಡ ಆಘಾತಕಾರಿ ಬೆಳವಣಿಗೆಯಾಗಿದ್ದು ಅಲ್ಲಿನ ಅಮಾಯಕ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯ ಹಿಂಸಾಚಾರ ಈ ಕೂಡಲೇ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕ್ರಮ ಕೈಗೊಳ್ಳಬೇಕು ಎಂದರು.ಬಾಂಗ್ಲಾದಲ್ಲಿ ನಡೆಯುತ್ತಿರುವ ಜನಾಂಗೀಯ ದಾಳಿ ಬಗ್ಗೆ ಕೇಂದ್ರ ಮಾನವ ಹಕ್ಕುಗಳ ಆಯೋಗ ಕೂಡಲೇ ಅಲ್ಲಿಗೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಬೇಕು ಎಂದು ಸ್ವಾಮೀಜಿ ಹೇಳಿದರು.

ಈ ವೇಳೆ ತವಂದಿ ಶ್ರೀಶೈಲ ಶಾಖಾ ಮಠದ ಶ್ರೀ ರೇಣುಕಾ ಸ್ವಾಮೀಜಿ, ಕುಸುಮ ದೇಸಾಯಿ, ಹರೀಶ್, ಎಚ್.ಎಂ ಪ್ರಭಾಕರ್, ಶ್ರವಣ ಸಿಂಗ್, ಗೋವಿಂದ ಸಿಂಗ್ ರವಿಚಂದ್ರನ್, ರಾಜೇಂದ್ರ ದೇಸಾಯಿ, ಪ್ರಶಾಂತ, ಗೋವಿಂದಚಾರ್, ವೆಂಕಟೇಶ್, ಗೋವರ್ಧನ್, ವಿನಯ್, ನಾಮದೇವ ಮೂರ್ತಿ, ನಾಗೇಂದ್ರ ಯಾದವ್, ವೇದ ಮೂರ್ತಿ ಯಾದವ್, ವಕೀಲ ರಂಗನಾಥ, ರಾಘವೇಂದ್ರ, ಪಾರ್ಥ ಯಾದವ್, ಚೇತನ, ಯೋಗೇಶ, ಎನ್.ಆರ್. ಲಕ್ಷ್ಮಿಕಾಂತ್, ವಿಶ್ವನಾಥ್ ,ಎಂಎಸ್. ರಾಘವೇಂದ್ರ, ಕೇಶವ ಮೂರ್ತಿ, ಚಂದ್ರ ಹಾಸ, ರಘು, ಹರ್ಷ ಮೊದಲಾದವರು ಹಾಜರಿದ್ದರು.