ಒಕ್ಕಲಿಗರು ಒಗ್ಗಟ್ಟಾಗಲಿ: ಶಾಸಕ ನಂಜೇಗೌಡ

| Published : Feb 24 2025, 12:34 AM IST

ಸಾರಾಂಶ

ಒಕ್ಕಲಿಗರು ಒಗ್ಗಟ್ಟಾದರೆ ಆದರೆ ಮಾತ್ರ ಸಾಧನೆ

ಶಿರಸಿ: ಒಕ್ಕಲಿಗರು ಒಗ್ಗಟ್ಟಾದರೆ ಆದರೆ ಮಾತ್ರ ಸಾಧನೆ ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.

ಅವರು ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಗ್ರಾಮ ಒಕ್ಕಲಿಗರ ಅಭಿವೃದ್ಧಿ ಸಂಘದ ದಶಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಒಗ್ಗಟ್ಟಾದರೆ ಆರ್ಥಿಕ, ಶಿಕ್ಷಣ, ರಾಜಕೀಯದಲ್ಲೂ ಗೆಲ್ಲಲು ಸಾಧ್ಯ. ಆದರೆ ಇಂದು ಅನೇಕ ಕಡೆ ಒಕ್ಕಲಿಗ ಎಂದರೆ ಗ್ರಾಮ ಒಕ್ಕಲಿಗ, ಹಾಲಕ್ಕಿ ಒಕ್ಕಲಿಗ, ಕರಿ ಒಕ್ಕಲಿಗ ಎಂದು ಒಡೆದು ಹೋಗಿದ್ದಾರೆ. ಇದರಿಂದ ಬೇರೆಯವರಿಗೆ ಲಾಭ ಆಗುತ್ತದೆ. ಒಕ್ಕಲಿಗರ ಸಮದಾಯದ ಮನೆಗಳ ಇರುವ ಊರಿಗೆ ರಸ್ತೆ ಇಲ್ಲ, ಮನೆಗಳೂ ಸರಿ ಇಲ್ಲ. ಹಿಂದೆ ಇದನ್ನು ಸಿಎಂ ಗಮನಕ್ಕೂ ತಂದಿರುವೆ. ಕೆಲವು ಅಭಿವೃದ್ಧಿ ಕಾರ್ಯಗಳು ಆರಂಭವಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿಯ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಧರ್ಮ ಸಂರಕ್ಷಣೆ ಮಾಡಬೇಕು. ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದರು.

ಉದ್ಯಮಿ ಉಪೇಂದ್ರ ಪೈ ಮಾತನಾಡಿ, ಉತ್ತಮ ಶಿಕ್ಷಣ, ಸಂಸ್ಕಾರದ ಜೊತೆಗೆ ದೇವರನ್ನು, ಧರ್ಮವನ್ನು ನಂಬುವುದನ್ನು ಮಗುವಿಗೆ ಕಲಿಸಬೇಕು. ಅಂಥ ಮಗು ದೇಶ, ತಂದೆ ತಾಯಿಯನ್ನು ನಂಬುತ್ತದೆ. ಧರ್ಮ ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.

ಹೋರಾಟಗಾರ ಭಾಸ್ಕರ ಪಟಗಾರ ಮಾತನಾಡಿ, ಸಂಘಟನೆಯೇ ನಮ್ಮ ಬದುಕಿಗೆ ಬಲ ಎಂದರು.

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಪ್ರಮುಖರಾದ ಪ್ರಸಾದ ಪಟಗಾರ, ರಮೇಶ ಗೌಡ, ಎಚ್.ವೈ. ಗೌಡ, ಭುವನ್ ಭಾಗವತ್, ವಸಂತ ಪಟಗಾರ, ವಿಷ್ಣು ಪಟಗಾರ, ಪ್ರಶಾಂತ ಪಟಗಾರ, ವಿಷ್ಣು ಪಟಗಾರ ಇತರರು ಇದ್ದರು. ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.