ಓಬವ್ವಳ ಜನ್ಮವೃತ್ತಾಂತ ಕುರಿತ ಅಧ್ಯಯನ ಮೂಲಕ ಇತಿಹಾಸ ಕಟ್ಟಿಕೊಡುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮತ್ತು ಸಂಶೋಧಕರು ಮಾಡಬೇಕು.

ಕೂಡ್ಲಿಗಿ: ಒನಕೆ ಓಬವ್ವಳ ಹೆಸರಿನಲ್ಲಿ ಅನುದಾನ ಪಡೆಯುವ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಹೆಚ್ಚಾಗಿವೆ. ಆದರೆ ಓಬವ್ವಳ ಜನ್ಮವೃತ್ತಾಂತ ಕುರಿತ ಅಧ್ಯಯನ ಮೂಲಕ ಇತಿಹಾಸ ಕಟ್ಟಿಕೊಡುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮತ್ತು ಸಂಶೋಧಕರು ಮಾಡಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಅವರು ತಾಲೂಕಿನ ಗುಡೇಕೋಟೆಯ ಕೆಪಿಎಸ್ ಶಾಲಾವಾರಣದಲ್ಲಿ ಭಾನುವಾರ ನಡೆದ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.

ಕೆಲ ಸಂಶೋಧಕರು ಓಬವ್ವ ಜಾನಪದ ಮಹಿಳೆಯೋ ಅಥವಾ ಐತಿಹಾಸಿಕ ಮಹಿಳೆಯೋ ಎಂಬ ದ್ವಂದ್ವ ನೀತಿಗಳನ್ನು ಸಮಾಜದಲ್ಲಿ ಹರಡುತ್ತಿರುವುದು ನೋವಿನ ಸಂಗತಿಗೆ ಪ್ರೊ.ಲಕ್ಷ್ಮಣ ತೆಲಗಾವಿ ಸಂಶೋಧನೆಯಿಂದ ಉತ್ತರ ನೀಡಿದ್ದಾರೆ ಎಂದರು.

ಇತಿಹಾಸ ಪ್ರಾಧ್ಯಾಪಕ ಡಾ.ಓಬಯ್ಯ ಮಾತನಾಡಿ, ಗುಡೇಕೋಟೆ ಪಾಳೇಗಾರ ಕೊಡುಗೆ ಅಪಾರವಾಗಿದೆ. ಇತಿಹಾಸದಲ್ಲಿ ದೊಡ್ಡ ನಾಯಕರ ಅಧ್ಯಯನ ಮಾಡಲು ಶಾಸನ ಆಧಾರ ಲಭ್ಯವಾಗುತ್ತವೆ. ಜನಸಾಮನ್ಯರ ಇತಿಹಾಸ ದಾಖಲಿಸಲು ಜಾನಪದ ಹಾಡು ಸಿಗುತ್ತವೆ. ಓಬವ್ವ ಇತಿಹಾಸದಲ್ಲಿ ಸ್ಥಾನ ಪಡೆಯಲು ಸ್ವಾಮಿನಿಷ್ಠೆ, ಸಮಯಪ್ರಜ್ಙೆ ಮತ್ತು ಚಾಕಚಕ್ಯತೆ, ತ್ಯಾಗವೇ ಕಾರಣವಾಗಿದೆ, ಅವಳ ರೋಚಕ ಇತಿಹಾಸ ಮುಂದಿನ ಯುವಪೀಳಿಗೆ ತಿಳಿಸಲು ಪಠ್ಯಕ್ರಮದಲ್ಲಿ ಬರಬೇಕೆಂದರು.

ಕಾರ್ಯಕ್ರಮದಲ್ಲಿ ಟಿ.ಎಚ್.ಎಂ ಶೇಖರಯ್ಯ,ರಾಮಾಂಜೇಯ್ಯ, ಪ್ರಾಚಾರ್ಯ ಗೀರೇಶ್ ಮಾತನಾಡಿದರು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ವಹಿಸಿದ್ದರು. ನಾಗರಾಜ ಕೊಟ್ಟಪ್ಪಗಳ, ಶಿವ ಪ್ರಸಾದ ಗೌಡ, ಉಪನ್ಯಾಸಕರಾದ ಕುಮಾರಸ್ವಾಮಿ, ಚದಾನಂದಪ್ಪ, ರಾಜೇಶ್, ಬಸವರಾಜ್, ವೆಂಕಟೇಶ್ ಇದ್ದರು.

ಗುಡೇಕೋಟೆ ಪರಿಸರದಲ್ಲಿ ಸೂಕ್ಷ್ಮ, ನವ ಮತ್ತು ಬೃಹತ್ ಶಿಲಾಯುಗದ ನೆಲೆಯಾಗಿದೆ. ೧೦ನೇ ಶತಮಾನದ ಸ್ಮಾರಕಗಳು ಇವೆ. ಇಲ್ಲಿನ ಸ್ಮಾರಕಗಳು ಧಾರ್ಮಿಕ ಮತ್ತು ಲೌಖಿಕ ಸ್ಮಾರಕಗಳಾಗಿ ವರ್ಗಕರೀಸಬೇಕು ಅಧ್ಯಯನ ಮಾಡಬೇಕು ಅವುಗಳ ಸಂರಕ್ಷಣೆಯ ಅಗತ್ಯವಿದೆ ಎನ್ನುತ್ತಾರೆ ಸಂಶೋಧಕ ಡಾ.ಓಬಣ್ಣ.