ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಜೀವನ ಗೌರವ ಘನತೆ ಹೊಂದಿರುತ್ತದೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿ ಹಾಗೂ ಕಲಾವಿದರನ್ನು ಗೌರವಿಸುವಂಥ ಕೆಲಸ ಸಮಾಜದಲ್ಲಿ ಹೆಚ್ಚಾಗಬೇಕು. ಈ ದಿಸೆಯಲ್ಲಿ ಸರಕಾರ ಹಾಗೂ ಅಕಾಡೆಮಿಗಳು ಮುತುರ್ವಜಿ ವಹಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಮ್ಮ ಸಾಂಸ್ಕೃತಿಕ ಜೀವನ ಹೆಚ್ಚಿಸುವಂಥ ಕನ್ನಡ ಸಾಹಿತ್ಯ ಮತ್ತು ಪರಂಪರೆಗಳನ್ನು ಗೌರವಿಸುವಂಥ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ರವಿವಾರ ಆಯೋಜಿಸಿದ್ದ ವಿವಿಧ ಅಕಾಡೆಮಿಗಳಿಗೆ ನಾಮನಿರ್ದೇಶನಗೊಂಡಿರುವ ಸದಸ್ಯರಿಗೆ ಸತ್ಕಾರ ಸಮಾರಂಭ ಹಾಗೂ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಜೀವನ ಗೌರವ ಘನತೆ ಹೊಂದಿರುತ್ತದೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿ ಹಾಗೂ ಕಲಾವಿದರನ್ನು ಗೌರವಿಸುವಂಥ ಕೆಲಸ ಸಮಾಜದಲ್ಲಿ ಹೆಚ್ಚಾಗಬೇಕು. ಈ ದಿಸೆಯಲ್ಲಿ ಸರಕಾರ ಹಾಗೂ ಅಕಾಡೆಮಿಗಳು ಮುತುರ್ವಜಿ ವಹಿಸಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಕಟ್ಟುವ ಮನಸ್ಸುಗಳು ಗಟ್ಟಿಗೊಳ್ಳಬೇಕು ಮತ್ತು ಈ ಭಾಗದ ಸಾಹಿತಿ-ಕಲಾವಿದರಿಗೆ ಅವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಕನ್ನಡ ಕಟ್ಟುವ ಕಾಯಕದಲ್ಲಿ ನಿರತವಾಗಿದೆ. ಕಲಬುರಗಿ ನೆಲ ಸಾಂಸ್ಕøತಿಕವಾಗಿ ಸಂಪದ್ಭರಿತವಾದ ಪ್ರದೇಶ. ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವುಗಳಿಂದಲೂ ಈ ಪ್ರದೇಶ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ. ಇದರ ಘನತೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಪರಿಷತ್ತು ಕಾರ್ಯೋನ್ಮುಖವಾಗಿದೆ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕವಿತಾ ಸಂಗೋಳಗಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ ಮಾತನಾಡಿದರು. ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಶಿವಾನಂದ ಪೂಜಾರಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ವಿನೋದಕುಮಾರ ಜೇನವೇರಿ, ಬಾಬುರಾವ ಪಾಟೀಲ, ಸುರೇಖಾ ಜೇವರ್ಗಿ ವೇದಿಕೆ ಮೇಲಿದ್ದರು.

ವಿವಿಧ ಅಕಾಡೆಮಿಗಳ ಸದಸ್ಯರಾದ ಡಾ. ಚಂದ್ರಕಲಾ ಬಿದರಿ, ಡಾ. ಬಸವರಾಜ ಎಲ್ ಜಾನೆ, ಬಿ.ಎಚ್. ನಿರಗುಡಿ, ಸಂಜೀವಕುಮಾರ ಅತಿವಾಳೆ, ಶಂಕರ ಹೂಗಾರ ದೇಸಾಯಿ ಕಲ್ಲೂರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಪರಿಷತ್ತಿನ ಸಲಹಾ ಸಮಿತಿಯ ನೂತನ ಸದಸ್ಯರಾದ ರೇವಣಸಿದ್ದಪ್ಪ ಜೀವಣಗಿ, ಎಂ.ಎನ್. ಸುಗಂಧಿ, ಹಣಮಂತಪ್ರಭು, ಪದ್ಮಾವತಿ ಮಾಲಿಪಾಟೀಲ, ಜಗದೀಶ ಮರಪಳ್ಳಿ, ಮನೋಹರ ಪೊದ್ದಾರ, ಸೈಯದ್ ನಜೀರುದ್ದೀನ್ ಮುತ್ತವಲಿ, ಧರ್ಮರಾಜ ಜವಳಿ, ಡಾ. ಎಸ್.ಎಸ್. ಗುಬ್ಬಿ, ಸುರೇಶ ದೇಶಪಾಂಡೆ, ಪ್ರಭು ಫುಲಾರಿ, ನಾಗಪ್ಪ ಎಂ. ಸಜ್ಜನ್, ಸಂತೋಷ ಕುಡಳ್ಳಿ, ಎಸ್.ಕೆ. ಬಿರಾದಾರ, ಅನುಸೂಯಾ ನಾಗನಳ್ಳಿ, ಎಸ್.ಎಂ. ಪಟ್ಟಣಕರ್, ಎಚ್.ಎಸ್. ಬರಗಾಲಿ, ವಿಶ್ವನಾಥ ತೊಟ್ನಳ್ಳಿ, ಸಿದ್ಧರಾಮ ಸಿ ಸರಸಂಬಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.