ಯುವ ಪೀಳಿಗೆ ಜಾಗೃತಗೊಳ್ಳಲಿ

| Published : Aug 16 2024, 12:47 AM IST

ಸಾರಾಂಶ

ಯುವ ಪೀಳಿಗೆ ಜಾಗೃತಗೊಳ್ಳಲಿ

ಕನ್ನಡಪ್ರಭ ವಾರ್ತೆ ಕೊರಟಗೆರೆ

ನಮಗೆ ಭಾರತ ಒಂದು ಮಾತೃ ಭೂಮಿ, ಭಾವನ್ಮಾತಕ ಬೆಸುಗೆಯಿಂದ ಬೆಳೆದ ನಮಗೆ ದೇಶಭಕ್ತಿ ಎನ್ನುವುದು ಮಾತೃಪ್ರೇಮದಂತೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ಹೇಳಿದರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ೭೮ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾಧಿಸುವುದರ ಜೊತೆ ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಇರುವ ವಿಫುಲ ಅವಕಾಶ ಬಳಸಿಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಯತ್ತ ವಿಶೇಷ ಗಮನ ಹರಿಸಬೇಕಿದೆ. ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ, ದಿವ್ಯತೆ, ಭವ್ಯತೆಗಳ ಅರಿವಿನಿಂದ ನಮ್ಮ ಯುವ ಪೀಳಿಗೆ ಜಾಗೃತಗೊಳ್ಳಲಿ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಸಿಪಿಐ ಅನಿಲ್, ಚೇತನ್‌ಕುಮಾರ್, ರವಿ, ಶಿಲ್ಪ, ಅಂಬಿಕಾ, ಕೀರ್ತಿನಾಯ್ಕ್, ರುದ್ರಪ್ಪ, ಗ್ರೇಡ್-೨ ತಹಸೀಲ್ದಾರ್ ನರಸಿಂಹಮೂರ್ತಿ, ಪ.ಪಂ ಮುಖ್ಯಾಧಿಕಾರಿ ತುಳಸಿ ಕುಮಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮುಖಂಡರಾದ ಕೆ.ಆರ್.ಓಬಳರಾಜು, ಈರಣ್ಣ, ಮೈಲಾರಪ್ಪ, ಪುಟ್ಟನರಸಪ್ಪ, ಲಕ್ಷ್ಮೀನಾರಾಯಣ್, ಕೆ.ಎನ್ ನಟರಾಜು, ಬಲರಾಮಯ್ಯ, ನಾಗರಾಜು ಕವಿತಮ್ಮ, ಜಯಮ್ಮ ಮತ್ತಿತರರಿದ್ದರು.