ಭಾರತವನ್ನು ತುಕಡೇ ಗ್ಯಾಂಗ್‌ನಿಂದ ರಕ್ಷಿಸಲು ಯುವಕರು ಜಾಗೃತರಾಗಬೇಕು. ಎಸ್ಐಆರ್ ಬಗ್ಗೆ ಯಾವುದೇ ಆರೋಪ ಇಲ್ಲದಿದ್ದರೂ ಕಾಂಗ್ರೆಸ್ ಎಸ್ಐಆರ್ ವಿರೋಧಿಸುವ ನೆಪದಲ್ಲಿ ದೇಶದಲ್ಲಿ ದಂಗೆ ಎಬ್ಬಿಸಿ ಗೌರವ ಹಾಳು ಮಾಡುತ್ತಿದೆ.

ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ನರಗುಂದ

ಭಾರತವನ್ನು ತುಕಡೇ ಗ್ಯಾಂಗ್‌ನಿಂದ ರಕ್ಷಿಸಲು ಯುವಕರು ಜಾಗೃತರಾಗಬೇಕು. ಎಸ್ಐಆರ್ ಬಗ್ಗೆ ಯಾವುದೇ ಆರೋಪ ಇಲ್ಲದಿದ್ದರೂ ಕಾಂಗ್ರೆಸ್ ಎಸ್ಐಆರ್ ವಿರೋಧಿಸುವ ನೆಪದಲ್ಲಿ ದೇಶದಲ್ಲಿ ದಂಗೆ ಎಬ್ಬಿಸಿ ಗೌರವ ಹಾಳು ಮಾಡುತ್ತಿದೆ. ಇಂತಹ ಪಕ್ಷಕ್ಕೆ ಬೆಂಬಲಿಸದೇ ವಿದ್ಯಾವಂತ ಯುವಕರು ಸಂಕನೂರ ಅವರನ್ನು ಬೆಂಬಲಿಸಿ ಮತ ನೀಡಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಭಾನುವಾರ ಪಟ್ಟಣದ ಕಸಬಾ ಓಣಿಯಲ್ಲಿ ನ್ಯಾಯವಾದಿ ಎಸ್.ಆರ್. ಪಾಟೀಲ ನಿವಾಸದಲ್ಲಿ ವಿಧಾನಪರಿಷತ್ ಚುನಾವಣೆಯ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿದರು.

4 ಜಿಲ್ಲೆ 23 ವಿಧಾನಸಭಾ ಮತಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 9 ಸಾವಿರ ಮತಗಳು ಕುಲಗೆಟ್ಟಿವೆ. ಆದರೆ ಈ ಬಾರಿ ವಿದ್ಯಾವಂತ ಮತದಾರರು ಎಚ್ಚರಿಕೆಯಿಂದ ಮೂರನೇ ಬಾರಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸಂಕನೂರ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ನ್ಯಾಯವಾದಿ ಎಸ್.ಆರ್. ಪಾಟೀಲ, ಮಂಜುನಾಥ ಆನೇಗುಂದಿ, ಶಿವಾನಂದ ಮುತ್ತವಾಡ, ಬಿ.ಬಿ. ಐನಾಪೂರ, ಚಂದ್ರಶೇಖರ ದಂಡಿನ, ಮಲ್ಲಪ್ಪ ಮೇಟಿ, ರಾಘವೇಂದ್ರ ಆನೇಗುಂದಿ, ಎಚ್.ಪಿ. ಮುದ್ದನಗೌಡ್ರ, ಮಂಜು ಗುಗ್ಗರಿ ಇದ್ದರು.