ಯುವಕರು ರಕ್ತದಾನ ಮಾಡಿ ಜೀವ ಉಳಿಸಲು ಮುಂದಾಗಲಿ

| Published : Oct 03 2024, 01:30 AM IST

ಸಾರಾಂಶ

ರಾಮನಗರ: ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮತ್ತೊಂದು ಜೀವದ ಉಳಿವಿಗೆ ನೆರವಾಗಬೇಕು ಎಂದು ಲಯನೆಸ್ ಕ್ಲಬ್ ಅಧ್ಯಕ್ಷೆ ವಿಜಯಲಕ್ಷ್ಮಿ ಹೇಳಿದರು.

ರಾಮನಗರ: ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮತ್ತೊಂದು ಜೀವದ ಉಳಿವಿಗೆ ನೆರವಾಗಬೇಕು ಎಂದು ಲಯನೆಸ್ ಕ್ಲಬ್ ಅಧ್ಯಕ್ಷೆ ವಿಜಯಲಕ್ಷ್ಮಿ ಹೇಳಿದರು.

ನಗರದ ಬೆಳ್ಳಿ ರಕ್ತನಿಧಿ ಕೇಂದ್ರದಲ್ಲಿ ಲಯನೆಸ್ ಕ್ಲಬ್ ಮತ್ತು ಕಲಾಪ್ರಿಯ ಸಂಸ್ಥೆ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಅ.10ರವರೆಗೆ ಸಂಸ್ಥೆಯ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ರಕ್ತದಾನ, ಸ್ವಚ್ಛ ಭಾರತ್, ಕಣ್ಣಿನ ತಪಾಸಣಾ ಶಿಬಿರ, ಕಡು ಬಡವರಿಗೆ ಆಹಾರ ಪದಾರ್ಥ ಹಾಗೂ ವಸ್ತ್ರ ವಿತರಣೆ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಹಣ್ಣು ವಿತರಣೆ, ಸಕ್ಕರೆ ಕಾಯಿಲೆ ಬಗ್ಗೆ ಅರಿವುನಂತಹ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.ಕಲಾಪ್ರಿಯ ಸಂಸ್ಥೆಯ ಸಂಸ್ಥಾಪಕಿ ಲ.ಸುಧಾರಾಣಿ ಮಾತನಾಡಿ, ನಮ್ಮ ಎರಡು ಸಂಸ್ಥೆಗಳ ಸಹಕಾರದಲ್ಲಿ ನಡೆದ ಶಿಬಿರದಲ್ಲಿ ರಕ್ತದಾನ ನಡೆದಿದ್ದು, ಮತ್ತಷ್ಟು ಸಂಘ ಸಂಸ್ಥೆಗಳು ಸಾರ್ವಜನಿಕರು ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಮುಂದಾಗಬೇಕೆಂದು ಕರೆ ನೀಡಿದರು.ಬೆಳ್ಳಿ ರಕ್ತನಿಧಿ ಕೇಂದ್ರದ ರಂಜಿತ್ ಮಾತನಾಡಿ, ವಿವಿಧ ಕಾಯಿಲೆ ಮತ್ತು ಅಪಘಾತವಾದವರ ಜೀವ ಉಳಿಸಲು ರಕ್ತದ ಅವಶ್ಯಕತೆ ಕಂಡು ಬರುತ್ತದೆ. ಇದೀಗ ಡೆಂಘೀ ಪ್ರಕರಣ ಸಮಯದಲ್ಲಿ ಪ್ಲೇಟ್ಲೇಟ್ಸ್ ಅವಶ್ಯಕತೆ ಕಂಡು ಬರುತ್ತದೆ ಎಂದರು. ಚಂದ್ರಶೇಖರರೆಡ್ಡಿ, ಶರತ್, ಚಂದ್ರು, ಲಾವಣ್ಯ ಮತ್ತಿತರರು ರಕ್ತದಾನ ಮಾಡಿದರು. ಕಲಾಪ್ರಿಯ ಸಂಸ್ಥೆಯ ಕಾರ್ಯದರ್ಶಿ ಕೆ.ಅರುಣ್ , ಲಯನೆಸ್ ಕ್ಲಬ್ನ ಉಪಾಧ್ಯಕ್ಷೆ ಶಾರದಾ, ಕಾರ್ಯದರ್ಶಿ ಹೇಮಾವತಿ, ಖಜಾಂಚಿ ಲಾವಣ್ಯ, ಪದಾಧಿಕಾರಿಗಳಾದ ನಿರ್ಮಲಾ, ವಸಂತಾ, ಆಯುಷ್ ಇಲಾಖೆಯ ಪುಷ್ಪಲತಾ ಹಾಜರಿದ್ದರು.