ಯುವ ಸಮೂಹ ಸಮಾಜಮುಖಿ ಕೆಲಸ ಮಾಡಲಿ

| Published : Dec 29 2023, 01:32 AM IST

ಸಾರಾಂಶ

ಮಾನವೀಯ ಹಾಗೂ ಸಮಾಜಮುಖಿ ಕೆಲಸ ಮಾಡಲು ಯುವ ಸಮೂಹ ಸದಾ ಸಿದ್ಧರಾಗಿರಬೇಕು. ಸೇವಾ ಮನೋಭಾವನೆಯೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸಹಕಾರ ನೀಡಲು ಮುಂದಾಗಬೇಕು

ಕನ್ನಡಪ್ರಭ ವಾರ್ತೆ ಹಾವೇರಿ

ಮಾನವೀಯ ಹಾಗೂ ಸಮಾಜಮುಖಿ ಕೆಲಸ ಮಾಡಲು ಯುವ ಸಮೂಹ ಸದಾ ಸಿದ್ಧರಾಗಿರಬೇಕು. ಸೇವಾ ಮನೋಭಾವನೆಯೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸಹಕಾರ ನೀಡಲು ಮುಂದಾಗಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ನಗರದ ಟಿ.ಎಂ.ಎ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್ ಕ್ರಾಸ್ ಸಂಸ್ಥೆ ಅಪಘಾತ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವಾಗ ರಕ್ತದಾನ, ಉತ್ತಮ ಕೆಲಸ ಮಾಡುವ ಸಮಾಜ ಸೇವಾ ಸಂಸ್ಥೆಯಾಗಿದೆ. ಅಪಘಾತ ನಡೆದಾಗ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು ಹಾಗೂ ವಿಪತ್ತು ಒದಗಿದಾಗ ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಈ ದಿನ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಪ್ರಶಿಕ್ಷಣಾರ್ಧಿಗಳು ಪಡೆದು ಅಂತಹ ಘಟನೆ ನಡೆದಾಗ ತಾವುಗಳು ಮತ್ತೊಬ್ಬರಿಗೆ ಸಹಾಯ ಮಾಡಿದರೆ ಈ ತರಬೇತಿ ಮಾಡಿದ್ದಕ್ಕೂ ಸಾರ್ಥಕವಾಗಲಿದೆ ಎಂದರು.

ಅಥಿತಿಗಳಾಗಿ ಆಗಮಿಸಿದ ಟಿಎಂಎಇಎಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಜಿ. ಪೂಜಾರ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕಾರ್ಯ ಮಾಡುವ ಸೇವಾ ಸಂಸ್ಥೆಯಾಗಿದೆ. ಪ್ರಶಿಕ್ಷಣಾರ್ಥಿಗಳಿಗೆ ಈ ತರಬೇತಿ ನೀಡುತ್ತಿರುವುದು ಸೂಕ್ತವಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಸಹಾಯ-ಸಹಕಾರ ಮಾಡಿ ಅವರಿಗೆ ಆತ್ಮಧೈರ್ಯ ತುಂಬವ ಕೆಲಸಕ್ಕೆ ಸಹಕಾರ ನೀಡೋಣ ಎಂದರು.

ಹಿರಿಯ ಉಪನ್ಯಾಸಕ ಐ.ಆರ್. ಹರವಿ ಮಾತನಾಡಿ, ಬದುಕಿನ ಮೌಲ್ಯಗಳನ್ನು ಸೇವಾ ಸಂಸ್ಥೆಗಳ ಕಾರ್ಯದಲ್ಲಿ ಕಾಣಬಹುದು. ಸಮಾಜದಲ್ಲಿ ಬದುಕುವ ವ್ಯಕ್ತಿ ಮತ್ತೊಬ್ಬರಿಗೆ ಸಹಾಯ ಸಹಕಾರ ನೀಡಿದಾಗ ಬದುಕಿಗೆ ಅರ್ಥ ಬರುತ್ತದೆ. ಈ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಪ್ರಶಿಕ್ಷಣಾರ್ಥಿಗಳು ಪಡೆದುಕೊಂಡು ಮುಂದಿನ ರೆಡ್ ಕ್ರಾಸ್ ಸಂಸ್ಥೆಯ ಉತ್ತಮ ಕೆಲಸಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಡಾ. ನೀಲೇಶ ಎಂ.ಎನ್., ಡಾ. ಅಂಕಿತ ಆನಂದ ಹಾಗೂ ಇರ್ಶಾದಅಲಿ ದುಂಡಸಿ ಅವರು ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣಾ ತರಬೇತಿ ನೀಡಿದರು.

ಮಹಾವಿದ್ಯಾಲಯದ ಸಂಚಾಲಕ ಜಿ.ಟಿ. ಮಹೇಂದ್ರಪ್ಪ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಖಜಾಂಚಿ ಪ್ರಭು ಹಿಟ್ನಳ್ಳಿ, ಗೌರವ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ಜಿಲ್ಲಾ ಸಮಿತಿ ಸದಸ್ಯ ಡಾ. ಪ್ರದೀಪ ದೊಡ್ಡಗೌಡ್ರ, ಹನಮಂತಗೌಡ ಗೊಲ್ಲರ, ರವಿ ಇಂಚಿಗೇರಿ, ಫಕ್ಕೀರೇಶ ಬಾರ್ಕಿ, ಜಗದೀಶ ಬೇಟಗೇರಿ ಇತರರು ಇದ್ದರು.