ದೇಶದ ಪ್ರಗತಿಗೆ ಯುವಶಕ್ತಿ ರಾಜಕೀಯ ಕ್ಷೇತ್ರ ಪ್ರವೇಶಿಸಲಿ: ಎನ್.ಕೆ. ಭಟ್ಟ

| Published : Feb 12 2025, 12:33 AM IST

ಸಾರಾಂಶ

ಕಾಂಗ್ರೆಸ್ಸಿನಲ್ಲಿ ಮಾತ್ರ ಓರ್ವ ಸಾಮಾನ್ಯ ಯುವಕ ಮತ್ತು ಯುವತಿಗೆ ಅಧ್ಯಕ್ಷ ಸ್ಥಾನ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಯಲ್ಲಾಪುರ: ದೇಶದ ಬಲವರ್ಧನೆಗಾಗಿ ಯುವಕರು ಅಧಿಕ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಅಗತ್ಯವಿದೆ. ಯುವಕರೇ ಭಾರತದ ಭವ್ಯ ಭವಿಷ್ಯದ ಶಕ್ತಿ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಹೇಳಿದರು.

ಮಂಗಳವಾರ ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಚುನಾಯಿತ ಅಭ್ಯರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ನಮ್ಮ ಪಕ್ಷದಲ್ಲಿ ಮಾತ್ರ ಓರ್ವ ಸಾಮಾನ್ಯ ಯುವಕ ಮತ್ತು ಯುವತಿಗೆ ಅಧ್ಯಕ್ಷ ಸ್ಥಾನ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಹಳ್ಳಿ ಹಳ್ಳಿಗೆ ಭೇಟಿ ನೀಡಿ, ಚುನಾವಣೆಯಲ್ಲಿ ಪಾಲ್ಗೊಂಡಿದ್ದರ ಪ್ರತಿಫಲ ಆಶಾದಾಯಕವಾಗಿದೆ ಎಂದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ನಾಯ್ಕ, ಯಲ್ಲಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗಣೇಶ ಹೆಗಡೆ, ಉಪಾಧ್ಯಕ್ಷ ಮಹೇಶ್ ನಾಯ್ಕ ಅವರನ್ನು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಸನ್ಮಾನಿಸಿದರು. ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಸಮಿತಿಯ ತಾಲೂಕಾಧ್ಯಕ್ಷ ಉಲ್ಲಾಸ್ ಶಾನಭಾಗ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಎಸ್. ಭಟ್ಟ, ಡಾ. ರವಿ ಭಟ್ಟ ಬರಗದ್ದೆ, ಸೇವಾದಳದ ಜಿಲ್ಲಾಧ್ಯಕ್ಷ ಪ್ರಶಾಂತ ಸಭಾಹಿತ, ಬ್ಲಾಕ್ ಕಾರ್ಯದರ್ಶಿ ಅನಿಲ ಮರಾಠಿ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈರೋಜ್ ಶೇಖ್, ಮಹಿಳಾ ಕಾಂಗ್ರೆಸ್ ಮೋರ್ಚಾ ಅಧ್ಯಕ್ಷೆ ಪೂಜಾ ನೇತ್ರೆಕರ್, ತಾಪಂ ಮಾಜಿ ಸದಸ್ಯರಾದ ರಾಧಾ ಹೆಗಡೆ, ಸುಜಾತಾ ಸಿದ್ಧಿ ಸೇರಿದಂತೆ ಗ್ಯಾರಂಟಿ ಯೋಜನೆ ಸಮಿತಿಯ ಸದಸ್ಯರು, ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಲ್ತರಗದ್ದೆಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಯಕ್ಷಗಾನ

ಯಲ್ಲಾಪುರ: ತಾಲೂಕಿನ ಆನಗೋಡ ಸಮೀಪದ ಬೆಲ್ತರಗದ್ದೆಯಲ್ಲಿ ದಿ. ಮಹಾಬಲೇಶ್ವರ ಗಾಂವ್ಕರ ಸ್ಮರಣಾರ್ಥ ಯಕ್ಷಗಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಪ್ರಸಿದ್ಧ ಭಾಗವತ ಸರ್ವೇಶ್ವರ ಹೆಗಡೆ ಮೂರೂರು, ಪ್ರಸಿದ್ಧ ಚಂಡೆವಾದಕ ಗಣೇಶ ಗಾಂವ್ಕರ ಕನಕನಹಳ್ಳಿ, ನಿವೃತ್ತ ಶಿಕ್ಷಕಿ ಗಂಗಾ ಖಾಂಡೇಕರ್ ಹಾಗೂ ಹೈನೋದ್ಯಮ ಸಹಕಾರಿ ವಿಶ್ವೇಶ್ವರ ಹೆಗಡೆ ಅವರನ್ನು ಸನ್ಮಾನಿಸಲಾಯಿತು.ಭರತನಾಟ್ಯ ಪ್ರದರ್ಶನ ನೀಡಿದ ವೈಷ್ಣವಿ ದುಂಡಿ ಹಾಗೂ ರಾಜ್ಯಮಟ್ಟದ ಪ್ರತಿಭಾ ಕಲೋತ್ಸವದಲ್ಲಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಯಾ ಶ್ರೀಧರ ಭಟ್ಟ ಅವರನ್ನು ಪುರಸ್ಕರಿಸಲಾಯಿತು.

ಆನಗೋಡ ಸುದರ್ಶನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ, ಕಲಾವಿದ ಸತೀಶ ಯಲ್ಲಾಪುರ, ಸಂಘಟಕರಾದ ಲಕ್ಷ್ಮೀ ಗಾಂವ್ಕರ, ನಾಗರಾಜ ಗಾಂವ್ಕರ ಬೆಲ್ತರಗದ್ದೆ ಉಪಸ್ಥಿತರಿದ್ದರು. ಶಿಕ್ಷಕ ಸದಾನಂದ ದಬಗಾರ ನಿರ್ವಹಿಸಿದರು. ಶ್ರೀಧರ ಭಟ್ಟ ಬೆಳಖಂಡ ವಂದಿಸಿದರು.ನಂತರ ಪ್ರಸಿದ್ಧ ಕಲಾವಿದರಿಂದ ನಡೆದ ಚಂದ್ರಾವಳಿ ವಿಲಾಸ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ, ಮದ್ದಲೆ ವಾದಕರಾಗಿ ಪರಮೇಶ್ವರ ಭಂಡಾರಿ, ಚಂಡೆವಾದಕರಾಗಿ ಗಣೇಶ ಗಾಂವ್ಕರ ಭಾಗವಹಿಸಿದ್ದರು.

ಶ್ರೀಧರ ಭಟ್ಟ ಕಾಸರಕೋಡ, ಪ್ರವೀಣ ತಟ್ಟೀಸರ, ಮಾರುತಿ ನಾಯ್ಕ ಬೈಲಗದ್ದೆ, ದೀಪಕ ಭಟ್ಟ ಕುಂಕಿ, ಗುರು ಭಟ್ಟ ಜಂಬೆಸಾಲ, ಸುಭಾಸ ಭಟ್ಟ ಕಾಸರಕೋಡ ಪಾತ್ರ ನಿರ್ವಹಿಸಿದರು.