ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ನಾವು ಹೇಗಾದರೂ ಬದುಕುವ ಬದಲಾಗಿ ನಮ್ಮ ಗುರು- ಹಿರಿಯರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಭಗವಂತನು ನೀಡಿರುವ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ಮುಂಡರಗಿ: ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಸೇವೆ ಮಾಡುವ ಮೂಲಕ ಬಲಾಢ್ಯರಾಗಿದ್ದು, ಅವರು ಮನಸ್ಸು ಮಾಡಿದರೆ ನಮ್ಮ ಕುಟುಂಬಗಳು ಹಾಗೂ ಸಮಾಜ ಎರಡನ್ನೂ ಸುಧಾರಿಸುತ್ತಾರೆ ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.ಸೋಮವಾರ ಸಂಜೆ ತಾಲೂಕಿನ ಸಿಂಗಟಾಲೂರು ಗ್ರಾಮದ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಇಂದು ಹಲವಾರು ಕಾರಣಗಳಿಂದ ಯುವಕರು ದುಶ್ಚಟಗಳಿಗೆ ಬಲಿಯಾಗುವ ಮೂಲಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೇವಲ ಜಾತ್ರೆ ಹಬ್ಬ, ಹರಿದಿನಗಳಲ್ಲಿ ಮಾತ್ರ ದುಶ್ಚಟಗಳಿಂದ ದೂರವಿರುವುದರ ಬದಲಾಗಿ ಜೀವನದುದ್ದಕ್ಕೂ ಅವುಗಳಿಂದ ದೂರವಿರಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ನಾವು ಹೇಗಾದರೂ ಬದುಕುವ ಬದಲಾಗಿ ನಮ್ಮ ಗುರು- ಹಿರಿಯರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಭಗವಂತನು ನೀಡಿರುವ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮಾಚಾರದಲ್ಲಿ ನಡೆಯುವವರಿಗೆ ಎಂದಿಗೂ ಕೆಡಾಗುವುದಿಲ್ಲ. ಆದ್ದರಿಂದ ನಾವೆಲ್ಲ ಜೀವನದಲ್ಲಿ ಸದಾ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.ಕಲಕೇರಿ- ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಪುರದ ಅಭಿನವ ಸಿದ್ದವೀರ ಶಿವಾಚಾರ್ಯ ಸ್ವಾಮಿಜಿ, ಅಭಿನವ ಶ್ರೀಗುರು ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿದರು.ವೀರಪ್ಪ ಶೆಟ್ಟರ, ದ್ಯಾಮಣ್ಣ ದೋಶಿಗೇರ, ಈರಪ್ಪ ಮುಂಡವಾಡ, ಬಸವರಾಜ ಬಿಳಿಮಗ್ಗದ, ಸುನೀಲರಡ್ಡಿ ನೀರಲಗಿ, ರಾಮಣ್ಣ ಮಲ್ಲಾಪೂರ, ವಿರುಪಾಕ್ಷಯ್ಯ ಹಿರೇಮಠ, ದುರುಗಪ್ಪ ಡಂಬಳ, ರೇಣುಕಪ್ಪ ಬೆಟ್ಟಣ್ಣವರ, ಹುಚ್ಚೀರಪ್ಪ ಅಂಗಡಿ, ನಿಂಗಪ್ಪ ಹೊನ್ನನಾಯಕನಹಳ್ಳಿ, ವಿರೂಪಾಕ್ಷಪ್ಪ ಗುಡ್ಲಾನೂರ, ಬಸವರಾಜ ಸದಾಶಿವಪ್ಪನವರ, ಈರಪ್ಪ ತಳವಾರ, ಶೇಖಪ್ಪ ಮಡಿವಾಳರ, ಲಕ್ಷ್ಮಣ ಗಾಜಿ, ಹಾಲಪ್ಪ ಹಡಪದ, ಹುಸೇನಸಾಬ್ ನಾಗರಳ್ಳಿ, ರಾಮಸ್ವಾಮಿ ದೋಶಿಗೇರ, ವೀರಪ ಭಜಂತ್ರಿ, ಈಶಪ್ಪ ಭಜಂತ್ರಿ, ವಿರುಪಾಕ್ಷಪ್ಪ ಜಾಡರ, ಮೈಲಾರೆಪ್ಪ ಹಡಪದ ಉಪಸ್ಥಿತರಿದ್ದರು.ರಾಜೇಂದ್ರ ಶೆಟ್ಟಿ ಸರ್ವರನ್ನು ಸ್ವಾಗತಿಸಿದರು. ರುದ್ರಪ್ಪ ಹುಲವತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಹಲವಾಗಲಿ ನಿರೂಪಿಸಿದರು. ಶಂಕರಗುರು ಬಿಳಿಮಗ್ಗದ ವಂದಿಸಿದರು.