371ಜೆ ಜಾರಿಯಾಗಬೇಕೆಂದು ಅ.3 ರಿಂದ ಪ್ರಾರಂಭವಾದ ಹೋರಾಟದ ಕಿಚ್ಚು ಅದು ಜಾರಿಯಾಗುವರೆಗೂ ನಿಲ್ಲುವುದಿಲ್ಲ. ಈ ಹೋರಾಟಕ್ಕೆ ಸಂಪೂರ್ಣ ಎಲ್ಲ ರೀತಿಯ ಬೆಂಬಲವಿದೆ ಎಂದು ಶಾಸಕ ಅಶೋಕ ಮನಗೂಳಿ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

371ಜೆ ಜಾರಿಯಾಗಬೇಕೆಂದು ಅ.3 ರಿಂದ ಪ್ರಾರಂಭವಾದ ಹೋರಾಟದ ಕಿಚ್ಚು ಅದು ಜಾರಿಯಾಗುವರೆಗೂ ನಿಲ್ಲುವುದಿಲ್ಲ. ಈ ಹೋರಾಟಕ್ಕೆ ಸಂಪೂರ್ಣ ಎಲ್ಲ ರೀತಿಯ ಬೆಂಬಲವಿದೆ ಎಂದು ಶಾಸಕ ಅಶೋಕ ಮನಗೂಳಿ ಬೆಂಬಲ ಸೂಚಿಸಿದರು.

ನಗರದ ಬಸವೇಶ್ವರ ಸರ್ಕಲ್ ಹತ್ತಿರ ಗೋಕಾಕ ಚಳವಳಿಯ ರೂವಾರಿ ರೇ.ಜೆ.ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ 11 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸಿಂದಗಿ ಮತ್ತು ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಾವಿರಾರು ಕಾರ್ಯಕರ್ತರೊಂದಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಈ ಸೌಲಭ್ಯ ನೀಡುವ ಸಂದರ್ಭದಲ್ಲಿ ಸಂಸದರು ಅಧಿಕಾರದಲ್ಲಿದ್ದರೂ 371ಜೆ ನನ್ನ ಗಮನಕ್ಕಿಲ್ಲ ಎಂದರೇ ಆಗಿದ್ದ ಶಾಸಕರು, ನಾವು ಮಲಗಿದ್ದೇವು. ಆದರೆ, ನಾವು ದಿನದ 24 ಗಂಟೆ ಎಚ್ಚರದಲ್ಲಿದ್ದು ಕೆಲಸ ಮಾಡುತ್ತೇವೆ. ಸಂಸದರು ತಮ್ಮ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವರಲ್ಲಿ ಸಮಯ ನಿಗದಿಗೊಳಿಸಿ ಜಿಲ್ಲೆಯ ಶಾಸಕರಿಗೆ ಭೇಟಿ ಮಾಡಿಸಿದ್ದಾದರೇ ಈ ವಿಷಯದ ಕುರಿತು ಚರ್ಚೆ ನಡೆಸಲು ಸಿದ್ಧರಿದ್ದೇವೆ. ಕೇಂದ್ರದಿಂದ ಇದರ ಮರು ಪರಿಶೀಲನೆಗೆ ಆದೇಶ ನೀಡಿದರೇ ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳುವ ಜವಾಬ್ದಾರಿ ನಮ್ಮಲ್ಲಿದೆ ಎಂದರು.ಸಿಂದಗಿ, ಇಂಡಿ, ಮುದ್ದೇಬಿಹಾಳ, ಬಾಗೇವಾಡಿ ತಾಲೂಕುಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಅತೀ ಹಿಂದೂಳಿದ ಪ್ರದೇಶಗಳಾಗಿವೆ. ಪ್ರತಿಯೊಂದು ಹೋಬಳಿ ಮಟ್ಟದವರೆಗೂ ಜನಾಂದೋಲನ ನಡೆಯಬೇಕು. ಅಂದಾಗ ಮಾತ್ರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಜಯಪುರ ಜಿಲ್ಲೆಯನ್ನು 371(ಜೆ) ಕಲಂಗೆ ಸೇರಿಸಲು ಕಣ್ಣತೆರೆಯಬಹುದು. ಇದರಿಂದ ಈ ಭಾಗದ ಜನರಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ನ್ಯಾಯ ದೊರಕಿಸಿದಂತಾಗುತ್ತದೆ ಎಂದರು.371ಜೆ ಹೋರಾಟದ ಮುಖಂಡರಾದ ರಂಗನಾಥ ತೋರ್ಫೆ, ದಾನಪ್ಪಗೌಡ ಚನ್ನಗೊಂಡ ವಕೀಲರು, ಎಂ.ಎಂ.ಹಂಗರಗಿ, ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಡಾ.ಸಮೀರ್‌ ಹಾದಿಮನಿ, ಸಾಯಬಣ್ಣ ಪುರದಾಳ, ರಮೇಶ ನಡುವಿನಕೇರಿ, ರಾಹುಲ ಗುಬ್ಬೇವಾಡ, ಸಂಗಣ್ಣ ಬ್ಯಾಕೋಡ, ಗುರುರಾಜ ಪಡಶೆಟ್ಟಿ ಸೇರಿದಂತೆ ಮಾತನಾಡಿದರು.ಈ ಸಂದರ್ಭದಲ್ಲಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಶಿವು ಹತ್ತಿ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ಬಿಸನಾಳ, ಗ್ಯಾರಂಟಿ ಸಮಿತಿ ಅದ್ಯಕ್ಷ ಸಂತೋಷ ಸಾಲಿ, ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಸಿದ್ದರಾಮ ಪಾಟೀಲ, ಭೀಮಣ್ಣ ಬಿರಾದಾರ, ಎಂ.ಎ.ಖತೀಬ್‌, ಬಸವರಾಜ ಮಾರಲಬಾವಿ, ಸಂದೀಪ ಚೌರ, ಮಹ್ಮದಪಟೇಲ ಬಿರಾದಾರ, ಹಾಸೀಂ ಆಳಂದ, ಜಯಶ್ರೀ ಹದನೂರ, ಪ್ರತಿಬಾ ಚಳ್ಳಗಿ, ಮಡ್ಡಪ್ಪ ಪೂಜಾರಿ, ರಾಮಚಂದ್ರ ಕಲಬುರ್ಗಿ, ಬಾಷಾಸಾಬ್ ತಾಂಬೋಳಿ, ಸುರೇಶ ಚೌಧರಿ, ಕುಮಾರ ದೇಸಾಯಿ, ವರ್ಷಾ ಪಾಟೀಲ, ಸಲೀಂ ಕಣ್ಣಿ, ಸೇರಿದಂತೆ ಸಾವಿರಾರು ಕಾರ್ಯಕರ್ತರ ಭಾಗವಹಿಸಿದ್ದರು.