ಶಾಸಕ ಮುನಿರತ್ನಂ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕುರಿತು ತನಿಖೆ ಆಗಬೇಕು : ಯತ್ನಾಳ

| Published : Sep 16 2024, 01:55 AM IST / Updated: Sep 16 2024, 12:05 PM IST

BasavanaGowda Patel Yatnal
ಶಾಸಕ ಮುನಿರತ್ನಂ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕುರಿತು ತನಿಖೆ ಆಗಬೇಕು : ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

 ಶಾಸಕ ಮುನಿರತ್ನಂ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕುರಿತು ತನಿಖೆ ಆಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 

 ವಿಜಯಪುರ :  ಶಾಸಕ ಮುನಿರತ್ನಂ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕುರಿತು ತನಿಖೆ ಆಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

 ನಗರದಲ್ಲಿ ಶಾಸಕ ಮುನಿರತ್ನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮಿಮಿಕ್ರಿ ಸಹ ಮಾಡುತ್ತಾರೆ. ಯಾರು ಬೇಕಾದವರದ್ದು ಮಿಮಿಕ್ರಿ ಮಾಡಲಾಗುತ್ತದೆ. ಶಿವರಾಜ್ ಕುಮಾರ್, ಸಿದ್ಧರಾಮಯ್ಯ ಅವರ ಮಿಮಿಕ್ರಿ ಮಾಡ್ತಾರೆ. ಮುನಿರತ್ನ ಧ್ವನಿಯ ಮಿಮಿಕ್ರಿ ಮಾಡೋದು ಏನ್ ದೊಡ್ಡದು? ಎಂದು ಪ್ರಶ್ನಿಸಿದರು. ಅದು ಏನಿದೆ ನನಗೆ ಗೊತ್ತಿಲ್ಲ, ನಕಲಿ ಆಡಿಯೋಗಳನ್ನ ಸೃಷ್ಟಿಸುತ್ತಾರೆ. ಹಾಸ್ಯ ಕಲಾವಿದ ಒಬ್ಬ ಇದ್ದಾನೆ, ಎಷ್ಟು ಚೆಂದ ಮಿಮಿಕ್ರಿ ಮಾಡುತ್ತಾರೆ. ಆ ಮೂಲಕ ಪರೋಕ್ಷವಾಗಿ ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದು ಹೇಳಿದ್ದು, ಆಡಿಯೋ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪೇಯ್ಡ್‌ ಸರ್ವೆಂಟ್‌ಗಳು:

ಕಾಂಗ್ರೆಸ್​ನವರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಂರು ಬೇಕಾಗಿದ್ದಾರೆ. ಹಿಂದೂಗಳಿಗೆ ಅಲ್ಲ. ಯಾದಗಿರಿಯಲ್ಲಿ ದಲಿತ ಪಿಎಸ್​ಐ ಆತ್ಮಹತ್ಯೆ ಮಾಡಿಕೊಂಡರು. ದಲಿತ ಸಂಘಟನೆಗಳು ಎಲ್ಲಿದ್ದಾವೆ ಅಂತಾ ನಾನು ಕೇಳುತ್ತೇನೆ. ಕೆಲವು ಮುಖಂಡರು ಪೇಯ್ಡ್ ಸರ್ವೆಂಟ್ ಇದ್ದಾರೆ, ಪೇಟಿಎಂ ಇದ್ದಂಗೆ, ಹಣ ಹಾಕಿದ ಕೂಡಲೇ ಕೆಲ ಸಂಘಟನೆಗಳು ಮಾತಾಡುತ್ತವೆ. ಹಣ ಕಡಿಮೆ ಆಯ್ತು ಅಂದರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಅಂತಾರೆ. ರಾತ್ರಿ ಪೇಮೆಂಟ್ ಆಯ್ತು ಅಂದರೆ ಹೋರಾಟ ಹಿಂಪಡೆಯಲಾಯಿತು ಅಂತಾರೆ. ಇಂತಹ ಸಂಘಟನೆಗಳಿಂದ ದಲಿತ ಸಮುದಾಯ ಉದ್ಧಾರ ಆಗುವುದಿಲ್ಲ ಎಂದು ಕಿಡಿಕಾರಿದರು.

ದಲಿತರು ಹೊಸ ನಾಯಕತ್ವದ ಚಿಂತನೆ ಮಾಡಬೇಕು. ಅಂಬೇಡ್ಕರ್​​ ಅವರ ನಿಜವಾದ ಅನುಯಾಯಿ ಆಗಿದ್ದರೆ ಕಾಂಗ್ರೆಸ್​ನಲ್ಲಿರಲ್ಲ. ಡಾ.ಅಂಬೇಡ್ಕರ್ ಬಗ್ಗೆ ದಲಿತ ಮುಖಂಡರು ಮೊದಲು ಓದಿಕೊಳ್ಳಲಿ. ಕಾಂಗ್ರೆಸ್​ಗೆ ಎಂದೂ ಸೇರಬೇಡಿ ಅಂತಾ ಅಂಬೇಡ್ಕರ್ ಕರೆ ಕೊಟ್ಟಿದ್ದರು. ಕಾಂಗ್ರೆಸ್​ನಲ್ಲಿರುವ ದಲಿತ ಮುಖಂಡರು ಅಂಬೇಡ್ಕರ್ ಅನುಯಾಯಿಗಳಲ್ಲ. ಅವರೆಲ್ಲ ಕಮರ್ಷಿಯಲ್ ಎಂದು ವಾಗ್ದಾಳಿ ನಡೆಸಿದರು.

ಭಾರತದಲ್ಲಿರುವ ಸನಾತನ ಧರ್ಮ ನಾಶ ಮಾಡುತ್ತೇವೆ. ಕಾಶ್ಮೀರ, ಪಂಜಾಬ್, ಪಶ್ಚಿಮ ಬಂಗಾಳ ಪ್ರತ್ಯೇಕ ರಾಷ್ಟ್ರ ಮಾಡುತ್ತೇವೆಂದು ಒಬ್ಬ ಕರೆ ಕೊಡುತ್ತಾನೆ. ಅಪ್ರಭುದ್ದ ರಾಹುಲ್ ಗಾಂಧಿ ಅಮೇರಿಕಾದಲ್ಲಿ ಮಾತನಾಡಿ ಮೀಸಲಾತಿ ತೆಗೆದು ಹಾಕುತ್ತೇನೆನ್ನುತ್ತಾರೆ. ಭಾರತ ರಾಷ್ಟ್ರವೇ ಅಲ್ಲ ಎನ್ನುತ್ತಾನೆ. ಇಂಥ ಮೂರ್ಖನಿಗೆ ದೇಶದ‌ ಜನ 99 ಸ್ಥಾನ‌ ಕೊಟ್ಟಿದ್ದೆ ತಪ್ಪು ಎಂದರು.

ಗಣೇಶನಿಂದ ದೇಶಕ್ಕೆ ಸ್ವಾತಂತ್ರ್ಯ

ಇವತ್ತು ಕಾಂಗ್ರೆಸ್ ಮತ್ತೇ ತನ್ನ ಅವನತಿ ಆರಂಭಿಸಿದೆ. ಗಣೇಶನ್ನೇ ಅರೆಸ್ಟ್ ಮಾಡುತ್ತಾರೆ. ದೇಶಕ್ಕೆ ಗಣೇಶನಿಂದಲೇ ಸ್ವಾತಂತ್ರ ಬಂದಿದೆ ಗಾಂಧೀಜಿಯಿಂದ ಅಲ್ಲ, ಲೋಕಮಾನ್ಯ ತಿಲಕತು ಆರಂಭಿಸಿದ ಗಣಪತಿಯಿಂದ ವಿಘ್ನಗಳು ದೂರವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಗಣಪತಿ ಬಂಧನದಿಂದ ಕಾಂಗ್ರೆಸ್ ಅವನತಿ ರಾಜ್ಯದಿಂದ ಆರಂಭವಾಗಿದೆ. ಹಿಂದೂಗಳು ಜಾಗೃತ ರಾಗದೇ ಇರೋದೇ ದೇಶದ ದುರಂತ. ಈಗ ನರೇಂದ್ರ ಮೋದಿ ಸೊಕ್ಕು ಕಡಿಮೆ ಆಯಿತು ಎಂದು ಖುಷಿ ಪಡುತ್ತಾರೆ. ಅವರ ಸೊಕ್ಕು ಕಡಿಮೆಯಾಗಲಿಲ್ಲ ದೇಶದಲ್ಲಿ ಹಿಂದೂಗಳ ಶಕ್ತಿ ಕಡಿಮೆ ಆಯಿತು. ಮೋದಿಯವರಿಗೆ 350 ಸ್ಥಾನಗಳನ್ನು ಕೊಟ್ಟಿದ್ದರೆ ಇವರು ಯಾರು ಸೌಂಡ್ ಮಾಡುತ್ತಿರಲಿಲ್ಲ. ದೇಶದ ಜನರು ಉಚಿತ ಯೋಜನೆ ಗ್ಯಾರಂಟಿ ಯೋಜನೆಗಳಿಗೆ ಬಲಿಯಾಗುತ್ತಾರೆ. ಇದರಿಂದ ದೇಶದಲ್ಲಿ ಹಿಂದೂಗಳು ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಕ್ಸ್‌ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಹಿಂದೆ ಸುಫಿ ಸಂತ ಓರ್ವ ಮಹಾನ್ ದಾರ್ಶನಿಕನಿದ್ದಾನೆ. ಲಿಂಗಾಯತರು ಮುಸ್ಲಿಂರು ಒಂದು. ಅವರು ನಮ್ಮ‌ ಅನುಚರಣೆಗಳು ಒಂದು. ಅಂದರೆ ದನದ ಮಾಂಸ ತಿಂತಾರಾ ಲಿಂಗಾಯತರು. ಮುಸ್ಲಿಂರಿಗೆ ಲಿಂಗಾಯತರಿಗೆ ಹೋಲಿಸುತ್ತಾರೆ ಇವರು. ಅಲ್ಲೋರ್ವ ದಾರ್ಶಕನಿದ್ದಾನೆ. ಹಿಂದೂ ಸಂಪ್ರದಾಯದಿಂದ ಲಿಂಗಾಯತರನ್ನ ಪ್ರತ್ಯೇಕ ಮಾಡುವುದು ಇದು ಎಂದಿದ್ದಾರೆ. ಸನಾತನ ಹಿಂದೂ ಧರ್ಮದ ಕಾವಿ ಬಟ್ಟೆಯನ್ನ ನಮ್ಮ ಸ್ವಾಮಿಜಿಗಳು ಹಾಕಿಕೊಳ್ಳುತ್ತಾರೆ. ಅವರೇನಾದರೂ ಹಸಿರು ಬಟ್ಟೆ, ಉದ್ದಗೆ ದಾಡಿ ಬಿಟ್ಟುಕೊಂಡು ಓಡಾಡುತ್ತಾರಾ. ಲಿಂಗಾಯತರು ಮತ್ತು ಮುಸ್ಲಿಂರು ಹೇಗೆ ಒಂದಾಗಲು ಸಾಧ್ಯ. ಲಿಂಗಾಯತರು ಇರಲಿ, ವೀರಶೈವರಿರಲಿ ಎಲ್ಲರು ಸನಾತನ ಹಿಂದೂ ಧರ್ಮದ ಭಾಗವೇ ಎಂದು ಯತ್ನಾಳ ಸ್ಪಷ್ಟಪಡಿಸಿದರು.

 ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದರೆ ಕೇಸ್ ಬಗ್ಗೆ ದಾಖಲಿಸುತ್ತಾರೆ. ಕೇಸ್ ಮಾಡಲಿ ಬಿಡಿ, ನಾನು ಯಾರಿಗೂ ಅಂಜಲ್ಲ. ನಮ್ಮ ಪಕ್ಷದ ಮಹಾನಾಯಕರಿಗೆ ಅಂಜಿಲ್ಲ, ಇವರ್‍ಯಾರು?. ಯಾವ ಮಹಾ ನಾಯಕರಿಗೂ ನಾನು ಅಂಜುವುದಿಲ್ಲ.

ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ