ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿಶೇಷ ಉಪನ್ಯಾಸ, ಕಾರ್ಯಾಗಾರ ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿಗಳಾದ ಅಗ್ನಿಶಾಮಕ ಇಲಾಖೆಯ ಚೆನ್ನೇಗೌಡ, ರೇವಣ್ಣ ಮತ್ತು ತಂಡ, ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ರವಿ ಕೀರ್ತಿ, ಪರಿಸರವಾದಿ ರಾಮಚಂದ್ರ, ನೀತಿ ಕಥೆ ತಿಳಿಸಿದ ಪಾರ್ವತಿ ಅವರಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯದರ್ಶಿ ಕುಮುದ ರಂಗನಾಥ್ ಕೃತಜ್ಞತೆ ಸಲ್ಲಿಸಿ, ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮಕ್ಕಳು ಹಾಗೂ ಪೋಷಕರನ್ನು ಪಿಡುಗಾಗಿ ಕಾಡುತ್ತಿರುವ ಮೊಬೈಲ್‌ನಿಂದ ಹೊರಬರಲು ಬೇಸಿಗೆ ಶಿಬಿರಗಳು ಸಹಕಾರಿ. ಜತೆಗೆ ಮಕ್ಕಳಲ್ಲಿ ದೇಶಪ್ರೇಮ, ಪರಿಸರ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ಕಲೆ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಾಗಾರ ಆಗಬೇಕು ಎಂದು ಸೋಶಿಯಲ್ ಕ್ಲಬ್ ಕಾರ್ಯದರ್ಶಿ ಕೆ. ಆರ್. ಸುದರ್ಶನ ಕುಮಾರ್ ತಿಳಿಸಿದರು.ಪಟ್ಟಣದ ಸೋಶಿಯಲ್ ಕ್ಲಬ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಮಕ್ಕಳಿಗೆ ಆಯೋಜಿಸಲಾಗಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬೇಸಿಗೆ ಶಿಬಿರಗಳು ಮಕ್ಕಳಿಗೆ ರಜೆಯ ಅವಧಿಯಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು, ಸೃಜನಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗಿವೆ, ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅವರಲ್ಲಿ ಸ್ವಾವಲಂಬನೆ ಮೂಡಿಸುತ್ತವೆ. ದೇಶಿಯ ಕ್ರೀಡೆಗಳು, ಕಲಾ ಪ್ರಕಾರಗಳು, ಯೋಗ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಹಾಡು, ಚಿತ್ರಕಲೆ, ಇನ್ನಿತರೆ ಚಟುವಟಿಕೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ವತಿಯಿಂದ 6 ದಿನಗಳ ಕಲಾ ೧೫೦ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದ್ದು ಅಭಿನಂದನೀಯ ಮತ್ತು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಈ ಶಿಬಿರದಲ್ಲಿ ನಿವೃತ್ತ ಯೋಧರಾದ ಸುಭಾಷ್ ಬಾಬು ಅವರನ್ನು ಸನ್ಮಾನಿಸಿದ್ದು ಅರ್ಥಪೂರ್ಣವಾಗಿದೆ ಜತೆಗೆ ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿ ಮಕ್ಕಳಿಗೆ ಶುಭಕೋರಿದರು.ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಬಗ್ಗೆ ಮಾಹಿತಿ, ಶ್ಲೋಕ ಪಠಣ, ನೀತಿ ಕಥೆಗಳು, ಒಳಾಂಗಣ ಮತ್ತು ಹೊರಾಂಗಣ ಸಾಂಪ್ರದಾಯಿಕ ಆಟಗಳು, ನೃತ್ಯ, ಸಂಗೀತ, ಚಿತ್ರಕಲೆ, ವ್ಯಕ್ತಿತ್ವ ವಿಕಸನ, ಪಿಪಿಟಿ ಪ್ರಸೆಂಟೇಷನ್, ವೇದಿಕ್ ಗಣಿತ, ಅಗ್ನಿಶಾಮಕ ಇಲಾಖೆಯ ವತಿಯಿಂದ ಅಗ್ನಿ ಅವಘಡ ಕುರಿತ ಪ್ರಾತ್ಯಕ್ಷಿಕೆ, ಪರಿಸರ ಸಂರಕ್ಷಣೆ ಮತ್ತು ಜಾಗೃತಿ, ಇನ್ನಿತರ ಅತ್ಯವಶ್ಯಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿಶೇಷ ಉಪನ್ಯಾಸ, ಕಾರ್ಯಾಗಾರ ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿಗಳಾದ ಅಗ್ನಿಶಾಮಕ ಇಲಾಖೆಯ ಚೆನ್ನೇಗೌಡ, ರೇವಣ್ಣ ಮತ್ತು ತಂಡ, ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ರವಿ ಕೀರ್ತಿ, ಪರಿಸರವಾದಿ ರಾಮಚಂದ್ರ, ನೀತಿ ಕಥೆ ತಿಳಿಸಿದ ಪಾರ್ವತಿ ಅವರಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯದರ್ಶಿ ಕುಮುದ ರಂಗನಾಥ್ ಕೃತಜ್ಞತೆ ಸಲ್ಲಿಸಿ, ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಿದರು.ತಾಲೂಕು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಧ್ಯಕ್ಷ ಮುರಳೀಧರ ಗುಪ್ತ, ನಿಕಟ ಪೂರ್ವ ಅಧ್ಯಕ್ಷ ಶಂಕರ ನಾರಾಯಣ ಐತಾಳ್, ನಿ. ಸೈನಿಕ ಈಶ್ವರ್, ದಿವಾಕರ್, ರಾಮದಾಸ್, ನಾಗೇಶ್, ನಾಗೇಂದ್ರ, ಲಕ್ಷ್ಮೀ, ವಿಕಾಸ್, ಮೇಘನ, ರಂಗನಾಥ್ ಶೆಟ್ಟಿ, ವಿಜಯ ಕುಮಾರಿ, ರಂಗಮ್ಮ, ವೆಂಕಟೇಶ್ ಮತ್ತು ಇತರರು ಇದ್ದರು.