ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ತಾಯ ನಾಡ ರಕ್ಷಣೆಗಾಗಿ ಬೆಳವಡಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿನ ಯುವ ಸಮೂಹದಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಿ ೮೦೦ಕ್ಕೂ ಹೆಚ್ಚು ಸೈನಿಕರ ದಂಡನ್ನು ಕಟ್ಟಿಕೊಂಡು ಹೋರಾಟ ನಡೆಸಿದ ಅಪ್ರತಿಮ ವೀರ.
ಗಜೇಂದ್ರಗಡ: ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಮುಡುಪಾಗಿಟ್ಟಿದ್ದ ಕ್ರಾಂತಿವೀರ ಬೆಳವಡಿ ವೀರ ವಡ್ಡರ ಯಲ್ಲಣ್ಣ ಬಗ್ಗೆ ಸ್ಮರಣೆ ಇಲ್ಲದ್ದು ಬೇಸರದ ಸಂಗತಿ. ಇಂತಹ ದೇಶಭಕ್ತನ ಬಗ್ಗೆ ಸಂಶೋಧನೆಗಳು ನಡೆಯಬೇಕಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ಸೋಂಪುರ ತಿಳಿಸಿದರು.
ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಹಾಗೂ ಭೋವಿ ಸಮಾಜದ ವತಿಯಿಂದ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಬುಧವಾರ ನಡೆದ ಕ್ರಾಂತಿವೀರ ಬೆಳವಡಿ ವೀರ ವಡ್ಡರ ಯಲ್ಲಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ತಾಯ ನಾಡ ರಕ್ಷಣೆಗಾಗಿ ಬೆಳವಡಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿನ ಯುವ ಸಮೂಹದಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಿ ೮೦೦ಕ್ಕೂ ಹೆಚ್ಚು ಸೈನಿಕರ ದಂಡನ್ನು ಕಟ್ಟಿಕೊಂಡು ಹೋರಾಟ ನಡೆಸಿದ ಅಪ್ರತಿಮ ವೀರ. ಯಲ್ಲಣ್ಣ ಬಗ್ಗೆ ಹಲವಾರು ಸಂಶೋಧನೆಗಳು ನಡೆಯಬೇಕಿದೆ. ಇಂತಹ ದೇಶಭಕ್ತನ ಸ್ಮರಣೆ ಇಲ್ಲದಿರುವುದು ಬೇಸರ ತರಿಸಿದೆ. ಸರ್ಕಾರಗಳು ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಬಗ್ಗೆ ಹೆಚ್ಚಿನ ಸಂಶೋಧನೆಗೆ ಮುಂದಾಗುಬೇಕು ಎಂದು ಆಗ್ರಹಿಸಿದರು.ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಬಂಕದ, ಪುರಸಭೆ ಮಾಜಿ ಸದಸ್ಯ ರಾಜು ಸಾಂಗ್ಲೀಕರ ಹಾಗೂ ಯಲ್ಲಪ್ಪ ಬಂಕದ ಮಾತನಾಡಿದರು.ಸಮಾಜದ ಅಧ್ಯಕ್ಷ ಮಾರುತಿ ಕಲ್ಲೊಡ್ಡರ, ಪುರಸಭೆ ಮಾಜಿ ಅಧ್ಯಕ್ಷ ಸುಭಾಸ ಮ್ಯಾಗೆರಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಶರಣಪ್ಪ ರೇವಡಿ, ಮುದಿಯಪ್ಪ ಮುಧೋಳ ಹಾಗೂ ಶರಣಪ್ಪ ಚಳಗೇರಿ, ಮೂಕಪ್ಪ ಗುಡೂರ, ಗಿಡ್ಡಪ್ಪ ಪೂಜಾರ, ಕಳಕಪ್ಪ ಮನ್ನೇರಾಳ, ಸಣ್ಣೀರಪ್ಪ ಬಂಕದ, ನ್ಯಾಮಣ್ಣ ಉಳ್ಳಾಗಡ್ಡಿ, ಯಮನರೂಪ್ಪ ಲಕ್ಕಲಕಟ್ಟಿ, ವೆಂಕಟೇಶ ಬಂಕದ, ಅಲ್ಲಾಭಕ್ಷಿ ಮುಚ್ಚಾಲಿ, ಅಶೋಕ ವದೆಗೋಳ, ಷಣ್ಮುಖಪ್ಪ ನಿಡಗುಂದಿ, ರಾಮಣ್ಣ ಮನ್ನೇರಾಳ, ದುರಗಪ್ಪ ನಿಡಗುಂದಿ ಇತರರು ಇದ್ದರು.