ಸಾಮಾಜಿಕ ಸಮಾನತೆ ಸಾರುವ ಕೆಲಸಕ್ಕೆ ನಾಂದಿಯಾಗಲಿ: ಸಿದ್ಧಗಂಗೆಯ ಸಿದ್ಧಲಿಂಗಶ್ರೀ

| Published : Apr 11 2025, 12:30 AM IST

ಸಾಮಾಜಿಕ ಸಮಾನತೆ ಸಾರುವ ಕೆಲಸಕ್ಕೆ ನಾಂದಿಯಾಗಲಿ: ಸಿದ್ಧಗಂಗೆಯ ಸಿದ್ಧಲಿಂಗಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಮುದಾಯದ ಏಳಿಗೆಗೆ ಶ್ರಮಿಸಲಾಗುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗುವುದು.

ಸೂಲಿಬೆಲೆ: ಸಮಾಜದಲ್ಲಿರುವ ಸ್ತ್ರೀ, ಪುರುಷ ಎಂಬ ಭೇದಭಾವವನ್ನು ತೊಳದು ಹಾಕುವ ಕೆಲಸವನ್ನು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಪ್ರಾರಂಭಿಸಿದರು. ಇದನ್ನು ಪಾಲಿಸುವ ಕೆಲಸವಾಗಬೇಕು ಎಂದು ಸಿದ್ಧಗಂಗಾ ಮಠದ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಸೂಲಿಬೆಲೆಯಲ್ಲಿ ಹಮ್ಮಿಕೊಂಡಿದ್ದ ಆಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಸಂಘ ಹಾಗೂ ನಗರ್ತ ಮಹಿಳಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ನಗರ್ತ ಸಮುದಾಯ ಜನತೆಯಲ್ಲಿ ನಿಷ್ಠೆ ಮತ್ತು ಶ್ರದ್ಧೆ ಹೆಚ್ಚಾಗಿದ್ದು ಕಾಯಕವೇ ಕೈಲಾಸ ಎಂಬ ನಾಣ್ಣುಡಿಯಂತೆ ಹೆಚ್ಚಿನ ಜನರು ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾರೆ ಹಾಗೂ ವಿಶೇಷ ಸಂಸ್ಕಾರವುಳ್ಳವರಾಗಿದ್ದಾರೆ ಎಂದರು.

ಸೂಲಿಬೆಲೆ ಘಟಕದ ಅಧ್ಯಕ್ಷರಾದ ಎಸ್.ಸಿ.ರವಿಕುಮಾರ್ ಮಾತನಾಡಿ, ಸಮುದಾಯದ ಏಳಿಗೆಗೆ ಶ್ರಮಿಸಲಾಗುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗುವುದು ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ರಾಜ್ಯ ಘಟಕದ ಆಧ್ಯಕ್ಷ ಪ್ರಕಾಶ್, ವಾಗ್ಮಿ ಸುಚೇಂದ್ರಪ್ರಸಾದ್‌, ಮಾಜಿ ಅಧ್ಯಕ್ಷ ಬಸವರಾಜ್, ಗೌ.ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಶಂಕರ್, ಜಯಕುಮಾರ್, ಅಂಬಿಕಾ, ಇಂದಿರಾ, ಶೋಭಾ, ಉದಯಶಂಕರ್, ಗಿರೀಶ್, ಶಿವರುದ್ರಪ್ಪ, ಜುಂಜಪ್ಪ, ರವಿಕುಮಾರ್, ನೇತ್ರಾನಾಗರಾಜ್, ಸೂ.ಚಿ.ಬಸವರಾಜ್, ಇತರರು ಇದ್ದರು.