ಸಾರಾಂಶ
ಬೀದರ್‌ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ‘ಮನೆಯಂಗಳದಲ್ಲಿ ಮನದುಂಬಿ’ ಕಾರ್ಯಕ್ರಮದಡಿ ಬುಧವಾರ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಸತ್ಯ ಹಾಗೂ ಪ್ರಾಮಾಣಿಕತೆ ಪತ್ರಕರ್ತರ ನೈಜ ಜೀವಾಳವಾಗಬೇಕೆಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ತಿಳಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ‘ಮನೆಯಂಗಳದಲ್ಲಿ ಮನದುಂಬಿ’ ಕಾರ್ಯಕ್ರಮದಡಿ ಸನ್ಮಾನಿತರಾಗಿ ಮಾತನಾಡಿದ ಅವರು, ಪತ್ರಕರ್ತರಾದವರಿಗೆ ಯಾರು ಶತ್ರುಗಳು ಇಲ್ಲ ಯಾರು ಮಿತ್ರರೂ ಇಲ್ಲ. ಸಮಾಜಮುಖಿಯಾಗಿರುವ ನಮ್ಮ ಶತ್ರುವಿನ ಗುಣಗಾನ ಮಾಡುವುದು, ನಮ್ಮ ನೈಜ ಮಿತ್ರನಾಗಿದ್ದುಕೊಂಡು ಸಮಾಜ ಘಾತುಕ ವ್ಯಕ್ತಿಗಳನ್ನು ಧಿಕ್ಕರಿಸುವ ದಿಟ್ಟತನ ನಮ್ಮಲ್ಲಿ ಬಂದಾಗ ಮಾತ್ರ ಪತ್ರಿಕಾ ಧರ್ಮಪಾಲನೆಯಾಗುವುದು ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹುತೇಕ ಬೀದರ್ ಜಿಲ್ಲೆಯ ಪತ್ರಕರ್ತರಿಗೆ ಶಿವಶರಣಪ್ಪ ವಾಲಿಯವರೆ ಮುಖ್ಯ ಶಿಕ್ಷಕರಿದ್ದಂತೆ. ಸಮಯಕ್ಕೆ ಮಹತ್ವ ಕೊಡುವ ಪತ್ರಕರ್ತ ನಿಜವಾದ ಪತ್ರಕರ್ತನಾಗಲು ಸಾಧ್ಯ ಎಂಬುದಕ್ಕೆ ಅವರೆ ದೊಡ್ಡ ನಿದರ್ಶನವಾಗಿದ್ದಾರೆ ಎಂದರು.ಇಂದು ಅವರ ಅಗಣಿತ ಸೇವೆ ಗುರುತಿಸಿ ನಿನ್ನೆಯಷ್ಟೆ ಅವರಿಗೆ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ದೊರೆತಿರುವುದು ಅಭಿಮಾನದ ಸಂಗತಿ. ಇಂಥವರಿಗೆ ನಮ್ಮ ಸಂಘದಿಂದ ಸನ್ಮಾನಿಸುತ್ತಿರುವುದು ನಮಗೆ ಹೆಮ್ಮೆ ಇದೆ ಎಂದರು.
ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಸವರಾಜ ಕಾಮಶೆಟ್ಟಿ ಮಾತನಾಡಿ, ಪತ್ರಕರ್ತರೆಂದಾಕ್ಷಣ ಇಡಿ ಸಮಾಜ ನಮಗೆ ಗೌರವಿಸುವ ರೀತಿಯಲ್ಲಿ ನಡೆದುಕೊಳ್ಳಬೇಕಿದೆ. ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳ ಪಾಲಿಗೆ ಸದಾ ಸಿಂಹಸ್ವಪ್ನವಾಗಿ, ಜನ ಸಾಮಾನ್ಯರ ಪಾಲಿಗೆ ಸ್ನೇಹಜೀವಿಯಾಗಿ ಗುರ್ತಿಸಿಕೊಳ್ಳಬೇಕು. ಶಿವಶರಣಪ್ಪ ವಾಲಿ ಇದೆ ದಾರಿಯಲ್ಲಿ ನಡೆದುಕೊಂಡು ಬಂದ ಕಾರಣಕ್ಕೆ ಅವರು ಇಂದು ಪ್ರಬುದ್ಧ ಪತ್ರಕರ್ತರಾಗಿ ಗುರ್ತಿಸಿಕೊಂಡಿದ್ದಾರೆ ಎಂದರು.ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಚೌದ್ರಿ, ಕಾರ್ಯದರ್ಶಿ ಸುನಿಲಕುಮಾರ ಕುಲಕರ್ಣಿ, ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಯಾದುಲ್ಲಾ ಹುಸೇನಿ, ಮೌಲಾನಾ ಸಾಬ್, ಶಿವಕುಮಾರ ವಣಗೇರಿ, ಗೋಪಿಚಂದ್ ತಾಂದಳೆ, ಸಂತೋಷ ಚಟ್ಟಿ, ಹೈಕಶಿ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ.ರಜನಿಶ ವಾಲಿ, ಪತ್ರಕರ್ತರಾದ ದೀಪಕ ವಾಲಿ, ವಿವೇಕ ವಾಲಿ, ಆದಿಶ ವಾಲಿ, ಆನಿಲಕುಮಾರ ಕಮಠಾಣೆ, ಸೋಮನಾಥ ಬಿರಾದಾರ ಹಕ್ಯಾಳ, ಪಂಡಿತ, ಶ್ರೀಕಾಂತ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.