ಸಾರಾಂಶ
ಭಾರತದ ಪ್ರಗತಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಉಪ ತಹಸೀಲ್ದಾರ್ ಶಶಿಧರ್ ತಿಳಿಸಿದರು.
ದಾಬಸ್‌ಪೇಟೆ: ಭಾರತದ ಪ್ರಗತಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಉಪ ತಹಸೀಲ್ದಾರ್ ಶಶಿಧರ್ ತಿಳಿಸಿದರು.
ಪಟ್ಟಣದ ನಾಡಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತ್ರಂತ್ರ್ಯ ಬಂದು 78 ವರ್ಷಗಳಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತವರನ್ನು ಸ್ಮರಣಿಸಬೇಕು ಎಂದರು.ರಾಜಸ್ವ ನಿರೀಕ್ಷಕ ಕುಮಾರಸ್ವಾಮಿ ಹಾಗೂ ಮುನಿರಾಜು ಮಾತನಾಡಿ, ಭಾರತ ದೇಶ ಪ್ರಜಾಸತಾತ್ಮಕ ರಾಷ್ಟ್ರವಾಗಿದ್ದು, ಬ್ರೀಟಿಷರ ದುರಾಡಳಿತದಿಂದ ಹೊರಬಂದು ನಮ್ಮದೇ ಆದ ರಾಷ್ಟ್ರಿಯತೆಯನ್ನು ರಚಿಸಿಕೊಂಡಿದ್ದೇವೆ. ದೇಶದಲ್ಲಿ ಶಾಂತಿ ನೆಮ್ಮದಿ, ಸಹೋದರತ್ವದಿಂದ ಸುಂದರ ಸಮಾಜವನ್ನು ಕಟ್ಟೋಣ ಹಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು.
ಗ್ರಾಮಲೆಕ್ಕಿಗರಾದ ಬಾಲಕೃಷ್ಣ, ಲೋಕೇಶ್, ಮಾದವರಾವ್, ಕಿರಣ್ ಪ್ರಕಾಶ್, ರೋಹಿತ್, ಗೋಪಾಲ್, ವರ್ಷಿತ, ಶಾನಭೋಗರಾದ ತಟ್ಟೆಕೆರೆ ನಾಗರಾಜು, ಸಿಬ್ಬಂದಿ ವರ್ಗದವರಾದ ಹನುಮಂತರಾಜು, ಗಂಗಾಧರ್, ಗ್ರಾಮ ಸಹಾಯಕರಾದ ಮಂಜುನಾಥ್, ಪ್ರಕಾಶ್ ನಾಗರಾಜು, ರಾಜು, ಕೆಂಪಣ್ಣ, ಮತ್ತೀತ್ತರಿದ್ದರು.