ಕನ್ನಡಪ್ರಭ ವಾರ್ತೆ ಶಿರಾ
ಮುಂದಿನ ದಿನಗಳಲ್ಲಿ ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಯ ಕೆರೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಶಾಶ್ವತ ನೀರಾವರಿ ಯೋಜನೆ ನಾವು ನೀವು ಎಲ್ಲರೂ ಸೇರಿ ರೂಪಿಸಿ ಹೋರಾಟ ನಡೆಸುವ ಮೂಲಕ ಈ ಭಾಗಕ್ಕೆ ನೀರು ತರುವಂತಹ ಕೆಲಸ ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಹೇಳಿದರು.ಅವರು ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮಸ್ಥರು ಈ ಹಿಂದೆ ಹೊನ್ನೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಪಡುತ್ತಿದ್ದ ಸಂದರ್ಭದಲ್ಲಿ ಗ್ರಾಮಕ್ಕೆ ನೀಡಿ ಸ್ವಂತ ಹಣದಲ್ಲಿ ನೂತನ ಕೊಳವೆ ಕೊರಸಿ, ಕುಡಿಯುವ ನೀರು ಕಲ್ಪಿಸಿದ ಕಾರಣ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗೌಡಗೆರೆ ಹೋಬಳಿಯಲ್ಲಿ ಅಂತರ್ಜಲ ಬತ್ತಿದ ಕಾರಣ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಆಹಾಕಾರ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನಲ್ಲಿ ಮಳೆಯ ಅಭಾವದಿಂದ ಅಂತರ್ಜಲ ಬತ್ತಿದ್ದು, ಗೌಡಗೆರೆ ಹೋಬಳಿಯ ಜನಸಾಮಾನ್ಯರು ಕುಡಿಯುವ ನೀರಿಗೆ ಆಹಾಕಾರ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಾಗಬೇಕು. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಹೊನ್ನೇನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಅವಶ್ಯಕತೆ ಇದ್ದು ನಮಗೆ ನೂತನ ಬೋರ್ ಹಾಕಿಸಿಕೊಡಿ ಎಂಬ ಗ್ರಾಮಸ್ಥರ ಒತ್ತಾಸೆಯಂತೆ, ಜನರ ಮನವಿಗೆ ಸ್ಪಂದಿಸಿದ ಸ್ವಂತ ಹಣ ಖರ್ಚು ಮಾಡಿ ಬೋರ್ ಕೊರಸಿ ನೀರು ಸಿಕ್ಕಿದ್ದು, ಕುಡಿವ ನೀರಿನ ಸಮಸ್ಯೆ ಬಗೆಹರಿಸಿದ್ದಕ್ಕೆ ಹರ್ಷಗೊಂಡು, ನಾನು ಮಾಡಿದ ಅಲ್ಪಸೇವೆಗೆ ಗ್ರಾಮಸ್ಥರು ಗ್ರಾಮಕ್ಕೆ ಬರಮಾಡಿಕೊಂಡು ಪ್ರೀತಿ, ವಿಶ್ವಾಸ ತೋರಿಸಿದ ರೀತಿ ನಾನು ಎಂದೂ ಮರೆಯಲು ಸಾಧ್ಯವಿಲ್ಲ. ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಶಿರಾಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿದರೆ, ಶಿರಾ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದು ಈ ನನ್ನ ಸಂಕಲ್ಪ ನೀವು ಅವಕಾಶ ನೀಡಿ ನನಗೆ ಶಾಸಕ ಸ್ಥಾನ ನೀಡಿದರೆ ನಿಮ್ಮ ಮನೆ ಮಗನಂತೆ ದುಡಿಯುತ್ತೇನೆ. ಶಿರಾ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ನೀರು ಕೊಡುವುದೇ ನನ್ನ ಪ್ರಥಮ ಆದ್ಯತೆ. ಹೊನ್ನೇನಹಳ್ಳಿ ಗ್ರಾಮದ ಗ್ರಾಮಸ್ಥರು ನನ್ನ ಸೇವೆಗೆ ನೀಡಿದ ಅಭಿನಂದನೆ ನಾನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮದ್ದೆವಳ್ಳಿ ರಾಮಕೃಷ್ಣಪ್ಪ ಮತ್ತು ಚಿಕ್ಕಣ್ಣ, ಗೌಡಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮದ್ದಕ್ಕನ ಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತ ರಾಜು, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಕರಿಯಪ್ಪ, ಪಾರ್ವತಮ್ಮ, ಮುಖಂಡರಾದ ಗುರುಮೂರ್ತಿ, ಬೋರ್ವೆಲ್ ಏಜೆನ್ಸಿ ಮಾಲೀಕ ಮುದ್ದರಾಜು, ಹಿರಿಯ ಮುಖಂಡರಾದ ಹಳ್ಳಪ್ಪ, ಶಿವಣ್ಣ, ಹುಣಸೇ ಹಳ್ಳಿ ನಾಗರಾಜ್, ಎಪಿಎಂಸಿ ಮಾಜಿ ಸದಸ್ಯ ಹನುಮಂತರಾಯಪ್ಪ, ಹೊಸಹಳ್ಳಿ ಸಿದ್ದಲಿಂಗಪ್ಪ, ದೊಡ್ಡಯ್ಯ, ತುಳಸಿ ರಾಮ್ ಸೇರಿದಂತೆ ಹಲವರು ಹಾಜರಿದ್ದರು.