ಜಗತ್ತಿಗೆ ಶಾಂತಿ ಸಂದೇಶ ನೀಡಿದ ಕ್ರಿಸ್ತನ ಸ್ಮರಿಸೋಣ: ಸತ್ಯಮಿತ್ರ

| Published : Mar 30 2024, 12:53 AM IST

ಜಗತ್ತಿಗೆ ಶಾಂತಿ ಸಂದೇಶ ನೀಡಿದ ಕ್ರಿಸ್ತನ ಸ್ಮರಿಸೋಣ: ಸತ್ಯಮಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಗುಡ್ ಫ್ರೈಡೇ ಆಚರಿಸಲಾಯಿತು. ಈ ವೇಳೆ ಸಪ್ತವಾಕ್ಯಗಳಲ್ಲಿ ಒಂದಾದ ‘ತಂದೆಯೇ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿ ಕೊಡುತ್ತೇನೆ’ ಕುರಿತು ಅವರು ದೈವ ಸಂದೇಶವನ್ನು ರೆವರೆಂಡ್ ಎಸ್. ಸತ್ಯಮಿತ್ರ ಅವರು ನೀಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ಜಗತ್ತಿನಲ್ಲಿ ಶಾಂತಿ ನೆಲೆಸಲು ಯೇಸುಕ್ರಿಸ್ತನು ಸಾರಿದ ಶಾಂತಿ ಸಂದೇಶ ಅವರ ತ್ಯಾಗ, ಪ್ರೀತಿ ಹಾಗೂ ಆದರ್ಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿದೆ ನಾವೆಲ್ಲರೂ ಆತನ ತ್ಯಾಗವನ್ನು ಸ್ಮರಿಸೋಣ ಎಂದು ಜಿಲ್ಲಾ ಮೇಲ್ವಿಚಾರಕರಾದ ರೆವರೆಂಡ್ ಎಸ್. ಸತ್ಯಮಿತ್ರ ಹೇಳಿದರು.

ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಯೇಸುಕ್ರಿಸ್ತ ಅವರನ್ನು ಶಿಲುಬೆಗೇರಿಸಿದ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೇ)ಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.

ಈ ವೇಳೆ ಅವರು ಮಾತನಾಡಿ, ಸಪ್ತವಾಕ್ಯಗಳಲ್ಲಿ ಒಂದಾದ ‘ತಂದೆಯೇ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿ ಕೊಡುತ್ತೇನೆ’ ಕುರಿತು ಅವರು ದೈವ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಯೇಸುಕ್ರಿಸ್ತನು ಶಿಲುಬೆಯ ಮೇಲೆ ನುಡಿದ ಸಪ್ತವಾಕ್ಯಗಳಾದ ‘ತಂದೆಯೇ ಅವರಿಗೆ ಕ್ಷಮಿಸು’ ಕುರಿತು ಸಾಮುವೇಲ್ ಮ್ಯಾಥ್ಯೂ, ‘ಈ ಹೊತ್ತೆ ನನ್ನ ಸಂಗಡ ಪರದೈಸಿನಲ್ಲಿರುವೆ’ ಕುರಿತು ಪ್ರಭು ಕುಮಾರಿ, ‘ಅಮ್ಮಾ ಇಗೋ ನಿನ್ನ ಮಗ ನಿನ್ನ ತಾಯಿ’ ಕುರಿತು ಮನೋರಮ್ಮ ಸತ್ಯಮಿತ್ರ, ‘ನನ್ನ ದೇವರೆ ಯಾಕೆ ನನ್ನ ಕೈ ಬಿಟ್ಟಿದ್ದಿ’ ಕುರಿತು ಲಲಿತಾ ದೇವಪುತ್ರ, ‘ನನಗೆ ನೀರಡಿಕೆಯಾಗಿದೆ’ ಕುರಿತು ಸುನಿಲಾ ಶಾಂತಕುಮಾರ, ‘ತೀರಿತು’ ಕುರಿತು ಪಾಲ್ ನಾಯ್ಕ್ ಅವರು ಉಪನ್ಯಾಸ ನೀಡಿದರು.

ವಿಶೇಷ ಪ್ರಾರ್ಥನೆಗಳು ಹಾಗೂ ಭಕ್ತಿ ಪೂರ್ವಕವಾಗಿ ಆರಾಧನೆಗಳು ಜರುಗಿದವು.

ಈ ಆರಾಧನೆಯಲ್ಲಿ ಸಭೆಯವರಾದ ವಸಂತಕುಮಾರ, ದೇವಪುತ್ರ, ಜಯಪ್ಪ, ಅಮಿತ್ ಪಾಲ್, ಧರ್ಮಣ್ಣ, ಮಾನುವೆಲರಾಜ್, ಜೈರಾಜ್, ರಮೇಶಪಾಲ್, ಇಮಾನುವೆಲ್, ವಿಜಯಕುಮಾರ, ಜಸ್ಟೀನ್ ಜಿಮ್ಮಿ, ಥಾಮಸ ಮ್ಯಾಥ್ಯೂ, ಡೇವಿಡ್ ಸಿಮಿಯೋನ್, ಸೋನಸುಕುಮಾರಿ, ಸುಕುಮಾರಿ, ಸುಮತಿ, ಚಂದ್ರಮ್ಯಾಥ್ಯೂ, ಸಾಗರಿಕ, ಸುಜಾತ, ಅನಿತಾ, ಜೋವಿತಾ, ಶಾಲಿನಿ, ಶೋಭಾ, ಸುನೀತಾ, ಸ್ಟೆಲ್ಲಾ, ಸರಿತಾ, ರೆಬೆಕ್ಕಾ, ಶೋಭಾ, ರತ್ನಮ್ಮ, ಪವಿತ್ರ ಇತರರಿದ್ದರು.