ವಿಶ್ವದ ನವ ನಿರ್ಮಾಣಕ್ಕೆ ನಾಂದಿ ಹಾಡೋಣ

| Published : Oct 28 2024, 12:45 AM IST

ಸಾರಾಂಶ

ಚಾಮರಾಜನಗರ ತಾಲೂಕಿನ ಮಸಗಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಸತ್ಯ ಗೀತಾ ಜ್ಞಾನ ಪಾಠಶಾಲೆಯ ನೂತನ ಕಟ್ಟಡವನ್ನು ನಗರಸಭಾ ಅಧ್ಯಕ್ಷ ಸುರೇಶ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮೀಣ ಜನರಿಗೆ ಭಗವಂತನ ಸಂದೇಶವನ್ನು ತಲುಪಿಸುವ ಮೂಲಕ ವಿಶ್ವದ ನವ ನಿರ್ಮಾಣಕ್ಕೆ ನಾಂದಿ ಹಾಡೋಣ. ವಿಶ್ವದ ಜ್ಞಾನ ಜ್ಯೋತಿ ಬೆಳಗಿಸುವ ಮೂಲಕ ದೇವತಾ ಗುಣಗಳ ಚಿಂತನೆಗೆ ಅವಕಾಶ ಕಲ್ಪಿಸುವುದು ಆಧ್ಯಾತ್ಮಿಕ ಕೇಂದ್ರಗಳ ವೈಶಿಷ್ಟವಾಗಿದೆ ಎಂದು ಕೊಳ್ಳೇಗಾಲ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ಪ್ರಭಾಮಣಿಜಿಯವರು ತಿಳಿಸಿದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ತಾಲೂಕಿನ ಮಸಗಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಸತ್ಯ ಗೀತಾ ಜ್ಞಾನ ಪಾಠಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಸತ್ಯ ಗೀತಾ ಜ್ಞಾನ ಪಾಠಶಾಲೆ ನೂತನ ಕಟ್ಟಡವು ಧ್ಯಾನ , ಯೋಗ, ಸದ್ಭಾವದ ಮಂದಿರವಾಗಲಿ. ಜನರು ಸಂಪೂರ್ಣ ಸದುಪಯೋಗ ಪಡಿಸಿಕೊಂಡು ಆತ್ಮಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳೋಣ. ನೂತನ ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ಸರ್ವರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರ ಸಭೆಯ ಅಧ್ಯಕ್ಷ ಸುರೇಶ್ ನಾಯಕ ಮಾತನಾಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವಿಶ್ವದ ಎಲ್ಲೆಡೆ ಶಾಂತಿ, ಸನ್ಮಾರ್ಗದ ಬೋಧನೆ ಮಾಡುತ್ತಾ ಮಾನವರನ್ನು ಶ್ರೇಷ್ಠರನ್ನಾಗಿ ಮಾಡಲು ಕಾರ್ಯ ರೂಪಿಸುತ್ತಿದೆ. ಗ್ರಾಮೀಣ ಭಾಗದ ಹೊಸಗಾಪುರದಲ್ಲಿ ರೂಪಿಸಿರುವುದು ಬಹಳ ಸಂತೋಷವೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ, ಚಿಂತಕ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಸತ್ಯದ ಹಾದಿಯಲ್ಲಿ ಸಾಗಿ, ಸತ್ಯ ಮತ್ತು ಪ್ರಾಮಾಣಿಕತೆಯ ಮೂಲಕ ವಿಶ್ವದಲ್ಲಿ ಶಾಂತಿ ಸ್ಥಾಪಿಸುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಪರ್ಕವನ್ನು ಪ್ರತಿಯೊಬ್ಬರು ಹೊಂದಿ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ.ದಾನೇಶ್ವರಿ ಅವರು ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ತಾಲೂಕು ಮತ್ತು ಹಳ್ಳಿಗಳಲ್ಲಿ ಪ್ರಜಾಪಿತ ಬ್ರಹ್ಮಕುಮಾರಿಯ ಕೇಂದ್ರಗಳು ಸ್ಥಾಪನೆಯಾಗಿತ್ತಿರುವುದು ಸಂತೋಷ ತಂದಿದೆ. ಆಧ್ಯಾತ್ಮಿಕ ಕೇಂದ್ರಗಳಲ್ಲಿ ಮನುಷ್ಯನ ಪರಿಪೂರ್ಣತೆಯನ್ನು ಸಹಜ ರಾಜ ಯೋಗದ ಅಭ್ಯಾಸದ ಮೂಲಕ ಶಾಂತಿ ನೆಮ್ಮದಿ ದೊರಕಲು ಕಾರಣವಾಗಿದೆ. ನಾಗರಿಕರು ಸುತ್ತಮುತ್ತಲಿನ ಗ್ರಾಮದ ಜನರು ಈ ಆಧ್ಯಾತ್ಮಿಕ ಕೇಂದ್ರದ ಬೋಧನೆಗಳನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದರು.

ವೇದಿಕೆಯಲ್ಲಿ ಸಮಾಜ ಸೇವಕ ಪರಮೇಶ್ವರಪ್ಪ ಟಿ.ಜೆ ಸುರೇಶ್, ಬಿ.ಕೆ ಆರಾಧ್ಯ, ಮಹದೇವೇಗೌಡ ಮಂಜುನಾಥ್, ನಂದೀಶ್ ಪ್ರಮೀಳಾ, ಶಿವಕುಮಾರ್, ಶ್ರೀನಿವಾಸ್ ಶೆಟ್ಟಿ ಇತರರು ಇದ್ದರು. ನಾಟ್ಯ ಕಲಾವಿದೆ ಅಕ್ಷತಾ ಜೈನ್ ಶ್ರೀ ಸರಸ್ವತಿ ನಾಟ್ಯಕಲಾ ಸಂಸ್ಥೆಯ ಮಕ್ಕಳು ನೃತ್ಯರೂಪಕ ನೆರವೇರಿಸಿ ಗಮನ ಸೆಳೆದರು.