ಸಾರಾಂಶ
ಇನ್ನೂ ಸಹ ಕಾಲ ಮಿಂಚಿಲ್ಲ. ಸಮಯ ವ್ಯರ್ಥ ಮಾಡದೇ ಜಿ.ಬಿ.ವಿನಯಕುಮಾರ ನಾಮಪತ್ರ ಹಿಂಪಡೆಯಬೇಕು. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲ್ಲಿಸಲು ಕೈ ಜೋಡಿಸಲಿ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ದಾವಣಗೆರೆಯಲ್ಲಿ ಸಲಹೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಇನ್ನೂ ಸಹ ಕಾಲ ಮಿಂಚಿಲ್ಲ. ಸಮಯ ವ್ಯರ್ಥ ಮಾಡದೇ ಜಿ.ಬಿ.ವಿನಯಕುಮಾರ ನಾಮಪತ್ರ ಹಿಂಪಡೆಯಬೇಕು. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲ್ಲಿಸಲು ಕೈ ಜೋಡಿಸಲಿ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಸಲಹೆ ನೀಡಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕುರುಬ ಸಮುದಾಯದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಸಹ ಮನವೊಲಿಸಲು ಯತ್ನಿಸಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿ.ಬಿ.ವಿನಯಕುಮಾರಗೆ ಭೇಟಿಯಾಗಿ, ಮನವೊಲಿಸುವ ಯತ್ನ ಮಾಡಿದ್ದಾರೆ. ಈ ಯಾರ ಮಾತನ್ನೂ ವಿನಯ್ ಕೇಳಿಲ್ಲ ಎಂದರು.
ಅಹಿಂದ ವರ್ಗವು ಸಿಎಂ ಸಿದ್ದರಾಮಯ್ಯ 5 ವರ್ಷ ಅಧಿಕಾರಾವಧಿ ಪೂರ್ಣಗೊಳಿಸಬೇಕೆಂಬ ಸಂಕಲ್ಪ ಮಾಡಿವೆ. ಹಾಗಾಗಿ ಅಹಿಂದ ವರ್ಗಗಳ ಮತಗಳಂತೂ ವಿಭಜನೆಯಾಗುವುದಿಲ್ಲ. ದಾವಣಗೆರೆ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಡಾ.ಪ್ರಭಾ ಪರ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ವಿನಯಕುಮಾರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್.ಬಿ.ಮಂಜಪ್ಪ ಹೇಳಿದರು.- - - ಬಾಕ್ಸ್ ಯಶವಂತ ರಾವ್ ಹೇಳಿಕೆಗೆ ತಿರುಗೇಟು ಲೋಕಸಭೆ 2019ರ ಚುನಾವಣೆಯಲ್ಲಿ ಎಚ್.ಬಿ.ಮಂಜಪ್ಪಗೆ ಹರಕೆ ಕುರಿ ಮಾಡಿದರೆಂಬ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಟೀಕೆ ಹಾಸ್ಯಾಸ್ಪದ ಎಂದು ಮಂಜಪ್ಪ ಹೇಳಿದರು.
ಹರಕೆ ಕುರಿಯಾಗಿದ್ದರೆ, 4.80 ಲಕ್ಷ ಮತ ನನಗೆ ಬರುತ್ತಿದ್ದವಾ? ಪುಲ್ವಾಮಾ ದಾಳಿ ಅಂತ ಕಳೆದ ಸಲ ಬಿಜೆಪಿ ಗೆದ್ದಿತ್ತು. ಮಂಜಪ್ಪಗೆ ಹರಕೆ ಕುರಿ ಮಾಡಿದರೆಂದರೆ ಅಂತಹದ್ದಕ್ಕೆಲ್ಲಾ ಚುನಾವಣೆ ಸಂದರ್ಭದಲ್ಲಿ ಉತ್ತರಿಸುವ, ಪ್ರತಿಕ್ರಿಯಿಸುವುದಿಲ್ಲ. ನಮ್ಮ ಗುರಿ, ಉದ್ದೇಶ ಸ್ಪಷ್ಟವಾಗಿದೆ. ದಾವಣಗೆರೆ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸುವುದಷ್ಟೇ ನಮ್ಮ ಗುರಿ. ಯಶವಂತ ರಾವ್ ಸೇರಿದಂತೆ ಬಿಜೆಪಿಯವರ ಟೀಕೆ, ಆರೋಪಗಳೆಲ್ಲಾ ಈಗ ಅಪ್ರಸ್ತುತ ಎಂದರು.- - - -17ಕೆಡಿವಿಜಿ3: ಎಚ್.ಬಿ.ಮಂಜಪ್ಪ