ಮಹಿಳೆಯರು ಆರ್ಥಿಕ ವ್ಯವಹಾರ ನಿಭಾಯಿಸಲಿ

| Published : Aug 09 2024, 12:31 AM IST

ಸಾರಾಂಶ

ಮಹಿಳೆ ಒಂದು ಕುಟುಂಬದಲ್ಲಿ ತಾಳ್ಮೆಯ ನೆಲೆಯಾಗಿದ್ದಾಳೆ ಎಂದು ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮಹಿಳೆ ಒಂದು ಕುಟುಂಬದಲ್ಲಿ ತಾಳ್ಮೆಯ ನೆಲೆಯಾಗಿದ್ದಾಳೆ ಎಂದು ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಕನಕ ಪುತ್ತಿನ ಸಹಕಾರ ಸಂಘ, ಕಾಗಿನೆಲೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಸ್ವಸಹಾಯ ಸಂಘ ಉದ್ಘಾಟನೆ ಹಾಗೂ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಜವಾಬ್ದಾರಿಯುತವಾಗಿ ಆರ್ಥಿಕ ವ್ಯವಹಾರವನ್ನು ನಿಭಾಯಿಸುವಂತಾಗಬೇಕು. ಸಮಾಜದಲ್ಲಿ ಈ ಹಿಂದೆ ಒಂದು ಕಾಲದಲ್ಲಿ ೧೦-೨೦ ರು. ಲೆಕ್ಕಾಚಾರ ಬಾರದಿದ್ದ ಮನೆ ಮಹಿಳೆ ಇಂದು ಬ್ಯಾಂಕಿಗೆ ಹೋಗಿ ವಾರದ ಉಳಿತಾಯದ ಹಣ ಪಾವತಿಸುವುದು, ಸಾಲ ಪಡೆಯುವುದು, ತಾನು ಪಾವತಿಸಬೇಕಾದ ಬಡ್ಡಿಯ ಕುರಿತು ಲೆಕ್ಕಾಚಾರ ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದರು.

ಶೇಖರ್ ಒಡೆಯರ್ ಮಾತನಾಡಿ, ಸಮುದಾಯದ ಮಹಿಳೆಯರಿಂದ ಪ್ರಾರಂಭವಾಗುತ್ತಿರುವ ಸ್ತ್ರೀ ಶಕ್ತಿ ಸಂಘಗಳು ಮುಂದಿನ ದಿನಗಳಲ್ಲಿ ಇಡೀ ಸಮಾಜದ ಧಿಕ್ಕನ್ನೇ ಬದಲಾಯಿಸುತ್ತವೆ ಎಂದರು.

ಕೊಪ್ಪಳ ವಿವಿ ಉಪಕುಲಪತಿ ಬಿ.ಕೆ. ರವಿ ಮಾತನಾಡಿ, ಸಾಮಾಜಿಕ, ಆರ್ಥಿಕ, ಬೌದ್ಧಿಕ, ರಾಜಕೀಯವಾಗಿ ಮಹಿಳಾ ಸಬಲೀಕರಣದಲ್ಲಿ ಸ್ತ್ರೀ ಶಕ್ತಿ ಪ್ರಮುಖ ಪಾತ್ರ ವಹಿಸಲಿದ್ದು, ಗ್ರಾಮೀಣ ಬದುಕಿನ ದಿಕ್ಕನ್ನು ಬದಲಾಯಿಸುವಲ್ಲಿ ಸರ್ಕಾರೇತರ ಸ್ವಸಹಾಯ ಸಂಘಗಳ ಪಾತ್ರವಿದೆ ಎಂದರು.

ಮಧುಗಿರಿ ತಾಲೂಕಿನ ಐಎಫ್ಎಸ್‌ಸಿ ೬೮ನೇ ಸ್ಥಾನ ಗಳಿಸಿದ ಶಶಿಧರ್‌, ನಾಗರಾಜು, ಯೋಗೇಶ್, ಈಶ್ವರ್, ಕೊಡ್ಲಹಳ್ಳಿ ರಂಗನಾಥ್ ಅವರನ್ನು ಸನ್ಮಾನಿಸಲಾಯಿತು. ತ್ರಿವೇಣಿ ರಘುನಾಥ್, ಮೈಲಾರಪ್ಪ, ಜಿಡಿ ನಾಗಭೂಷಣ್, ಡಾ. ಎಸ್ ಮಂಜುನಾಥ್, ಬಸವರಾಜು, ಡಿ ಶಿವಶಂಕರ್, ಭಾನುಪ್ರಕಾಶ್ , ಸುರೇಶ್ ಇದ್ದರು.