ಸಂವಿಧಾನದ ಆಶಯದಂತೆ ನಡೆಯೋಣ: ಶಾಸಕಿ ಎಂ.ಪಿ. ಲತಾ

| Published : Apr 15 2025, 12:45 AM IST

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್‌ ಅವರು ನೀಡಿದ ಸಂ‍ವಿಧಾನದಂತೆ ನಾವು ನಡೆಯೋಣ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಡಾ. ಬಿ.ಆರ್. ಅಂಬೇಡ್ಕರ್‌ ಅವರು ನೀಡಿದ ಸಂ‍ವಿಧಾನದಂತೆ ನಾವು ನಡೆಯೋಣ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಡಾ. ಬಾಬು ಜಗಜೀವನರಾಂ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್‌ ಹಾಗೂ ಡಾ. ಬಾಬು ಜಗಜೀವನ ರಾಂ ಅವರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಮೇಲು ಕೀಳು ಎಂಬುದಿಲ್ಲ, ಹೆಚ್ಚು ತುಳಿತಕ್ಕೊಳಪಟ್ಟ ಮಹಿಳೆಯರು ಮೇಲೆ ಬರಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ಬಾಬುಜಗಜೀವನ ರಾಂ ಭವನಕ್ಕೆ ₹1 ಕೋಟಿ:

ಪಟ್ಟಣದ ಹೊಸಪೇಟೆ ರಸ್ತೆಯ ಅಪ್ಪಣ್ಣೇಶ್ವರ ದೇವಸ್ಥಾನದ ಬಳಿ ಇರುವ ಡಾ.ಬಾಬು ಜಗಜೀವನರಾಂ ಭವನಕ್ಕೆ ಮೂಲ ಸೌಕರ್ಯ ಒದಗಿಸಲು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ₹1 ಕೋಟಿ ಮಂಜೂರಾಗಿದೆ ಎಂದು ಶಾಸಕರು ತಿಳಿಸಿದರು.

ಪಟ್ಟಣದಲ್ಲಿ ₹6.50 ಕೋಟಿ ವೆಚ್ಚದ ಎಸ್ಸಿ-ಎಸ್ಟಿ ಹಾಸ್ಟೆಲ್‌ ಕಟ್ಟಡ ಸಿದ್ದವಾಗಿದ್ದು, ಶೀಘ್ರ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಭಾಬು ಜಗಜೀವನ ರಾಂ ಆಹಾರ ಭದ್ರತೆ ಒದಗಿಸಿಕೊಟ್ಟರು ಎಂದು ಸ್ಮರಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ, ಡಾ. ಬಿ.ಆರ್. ಅಂಬೇಡ್ಕರ್‌ ಅವರು ನಡೆದು ಬಂದ ದಾರಿ ಕೇಳುವುದೇ ಒಂದು ರೋಮಾಂಚನ. ಅಸಮಾನತೆ ಹೋಗಲಾಡಿಸಲು ಜೀವನವನ್ನೆ ಮುಡುಪಾಗಿಟ್ಟ ಮಹಾ ಚೇತನ ಎಂದು ಹೇಳಿದರು.

ಅರಸೀಕೆರೆಯ ಪ್ರಾಚಾರ್ಯ ಪಿ.ದುರುಗೇಶ ಹಾಗೂ ಶಿಕ್ಷಕ ಶೇಖರನಾಯ್ಕ ವಿಶೇಷ ಉಪನ್ಯಾಸ ನೀಡಿದರು.

ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬಿ, ಪುರಸಭಾ ಸದಸ್ಯರಾದ ಎಂ.ವಿ.ಅಂಜಿನಪ್ಪ, ಲಾಟಿದಾದಾಪೀರ, ಜಾಕೀರ ಹುಸೇನ್, ತಹಶೀಲ್ದಾರ ಬಿ.ವಿ. ಗಿರೀಶಬಾಬು, ಸಿಪಿಐ ನಾಗರಾಜ ಎಂ.ಕಮ್ಮಾರ, ತಾಪಂ ಇಒ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಎಸ್.ಆರ್. ಗಂಗಪ್ಪ, ಬಿಇಒ ಲೇಪಾಕ್ಷಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ತಾಪಂ ಮಾಜಿ ಸದಸ್ಯರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ನಿಚ್ಚವನಹಳ್ಳಿ ಭೀಮಪ್ಪ, ಕಬ್ಬಳ್ಳಿ ಪರಸಪ್ಪ, ಕಬ್ಬಳ್ಳಿ ಮೈಲಪ್ಪ, ಹಂಚಿನಮನೆ ಕೆಂಚಪ್ಪ, ಗುಂಡಗತ್ತಿ ಕೊಟ್ರಪ್ಪ, ಪಿ.ರಾಮಣ್ಣ, ಛಲವಾದಿ ಪ್ರತಾಪ, ಬಂಡ್ರಿ ಗೋಣಿಬಸಪ್ಪ, ಬಿಸಿಎಂ ಇಲಾಖೆಯ ಭೀಮಪ್ಪ, ಕೆ.ಸುಭಾಷ್, ಮತ್ತೂರು ಬಸವರಾಜ, ಒ.ಮಹಾಂತೇಶ, ಇಸಿಒ ಗಿರಜ್ಜಿ ಮಂಜುನಾಥ, ಎನ್.ಜಿ. ಬಸವರಾಜ ಇತರರಿದ್ದರು.