ಗಾಂಧಿ ತತ್ವದಡಿ ದೇಶ ಕಟ್ಟೋಣ: ಮೆಹರೋಜ್ ಖಾನ್

| Published : Oct 03 2024, 01:31 AM IST

ಸಾರಾಂಶ

ಮಹಾತ್ಮಾ ಗಾಂಧಿ ಅವರ ಜೀವನ ತತ್ವವನ್ನು ಅಳವಡಿಸಿಕೊಂಡು ಪ್ರತಿಯೊಬ್ಬರು ದೇಶ ಕಟ್ಟಬೇಕಾಗಿದೆ.

ಗಾಂಧಿ ಭಾರತ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ

ಕನ್ನಡಪ್ರಭ ವಾರ್ತೆ ಕಾರಟಗಿ

ಮಹಾತ್ಮಾ ಗಾಂಧಿ ಅವರ ಜೀವನ ತತ್ವವನ್ನು ಅಳವಡಿಸಿಕೊಂಡು ಪ್ರತಿಯೊಬ್ಬರು ದೇಶ ಕಟ್ಟಬೇಕಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಮೆಹರೋಜ್ ಖಾನ್ ಹೇಳಿದರು.

ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ಗಾಂಧಿ ಭಾರತ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಗಾಂಧೀಜಿ ಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು.

ಆಗ ಹಿಂದೂ ಮುಸ್ಲಿಂ ಐಕ್ಯತೆಗೊಳ್ಳದಿದ್ದರೆ ದೇಶದಲ್ಲಿ ಏಕತೆ ಅಸಾಧ್ಯ ಎಂದಿದ್ದ ಬಾಪುವಿನ ಮಾತು ಇಂದಿಗೂ ಈಡೇರಿಲ್ಲ. ಗಾಂಧೀಜಿ ವಿದೇಶಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ. ಅನಕ್ಷಸ್ಥರಿಂದ ದೇಶ ಹಾಳಾಗಿಲ್ಲ ಬದಲಾಗಿ ನಾವು ವಿದ್ಯಾವಂತರಿಂದ ದೇಶದಲ್ಲಿ ಒಡಕುಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆಲ್ಲ ಗಾಂಧೀಜಿಯವರ ತತ್ವಗಳೇ ನಮಗೆ ದಾರಿದೀಪ. ಇಂದು ಗಾಂಧಿಯವರ ಜಯಂತಿ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಹೌದು. ಗಾಂಧಿ ನಡಿಗೆ ಮೂಲಕ ಗಾಂಧಿ ತತ್ವಾದರ್ಶಗಳು ಇವತ್ತಿನ ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.

ಗಾಂಧಿ ನಡೆಗೆ:ಗಾಂಧಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾ ಅಧಿವೇಶನದ ಅಧ್ಯಕ್ಷತೆ ವಹಿಸಿ ಜೊತೆಗೆ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು ೧೦೦ ವರ್ಷಗಳಾದ ಪ್ರಯುಕ್ತ ಕಾರಟಗಿ ಬ್ಲಾಕ್ ನೇತೃತ್ವದಲ್ಲಿ ಗಾಂಧಿ ಜಯಂತಿ ಆಚರಣೆ, ಗಾಂಧಿ ಭಾರತ, ಗಾಂಧಿ ನಡಿಗೆ ಕಾರ್ಯಕ್ರಮವು ನೇತೃತ್ವದಲ್ಲಿ ನಡೆಯಿತು.

ಪುರಸಭೆಯಿಂದ ನವಲಿ ವೃತ್ತದ ಮೂಲಕ ಸಾಗಿ, ಸಚಿವ ಶಿವರಾಜ ತಂಗಡಗಿಯವರ ಗೃಹ ಕಚೇರಿಯಲ್ಲಿ ಸಮಾವೇಶಗೊಂಡಿತು. ಪಾದಯಾತ್ರೆಯಲ್ಲಿ ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಛಲವಾದಿ, ಸದಸ್ಯರಾದ ಎಚ್.ಈಶಪ್ಪ, ಮಂಜುನಾಥ ಮೇಗೂರು, ಕೆ.ಎಚ್. ಸಂಗನಗೌಡ, ವೀರೇಶ ಮುದುಗಲ್, ಸಿದ್ದಪ್ಪ ಕಾಯಿಗಡ್ಡಿ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಶಿಧರ್‌ಗೌಡ ಪಾಟೀಲ್, ಶಿವರೆಡ್ಡಿ ನಾಯಕ, ರೆಡ್ಡಿ ಶ್ರೀನಿವಾಸ್, ನಾಗರಾಜ್ ಅರಳಿ, ದೇವರಾಜ್ ಬಾವಿಕಟ್ಟಿ, ಚನ್ನಬಸಪ್ಪ ಸುಂಕದ್, ಕೆ. ಸಿದ್ದನಗೌಡ, ರವಿ ನಂದಿಹಳ್ಳಿ, ಬಸವರಾಜ ತೊಂತನಾಳ, ಅಯ್ಯಪ್ಪ ಉಪ್ಪಾರ, ಶರಣಪ್ಪ ಪರಕಿ, ಶರಣಪ್ಪ ಕಾಯಿಗಡ್ಡಿ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.