ಸಾರಾಂಶ
ಗಣೇಶ ಹಬ್ಬವನ್ನು ವಿಜೃಂಭಣೆ, ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ. ಪೊಲೀಸರೊಂದಿಗೆ ಸ್ಪಂದಿಸುವ ಮೂಲಕ ಗಣೇಶನ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸೇರಿ ಆಚರಿಸುವ ಕಾರ್ಯ ಮಾಡೋಣ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹೇಳಿದರು.
ಲಕ್ಷ್ಮೇಶ್ವರ: ಗಣೇಶ ಹಬ್ಬವನ್ನು ವಿಜೃಂಭಣೆ, ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ. ಪೊಲೀಸರೊಂದಿಗೆ ಸ್ಪಂದಿಸುವ ಮೂಲಕ ಗಣೇಶನ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸೇರಿ ಆಚರಿಸುವ ಕಾರ್ಯ ಮಾಡೋಣ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹೇಳಿದರು.ಭಾನುವಾರ ಪಟ್ಟಣದ ತಾಪಂ ಸಭಾ ಭವನದಲ್ಲಿ ನಡೆದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯುವಕರು ಗದ್ದಲ ಮಾಡುವ ಮನೋಭಾವ ಬಿಡಬೇಕು, ಯುವಕರು ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವ ಕಾರ್ಯ ಮಾಡಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಯುವಕರು ಸಮಾಜದ ಶಾಂತಿ ಕಾಪಾಡುವ ಕಾರ್ಯ ಮಾಡಬೇಕು. ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸೋಣ. ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವ ಕಾರ್ಯ ಮಾಡೋಣ. ಗಣೇಶ ಹಬ್ಬದಲ್ಲಿ ಮಧ್ಯೆ ಮಾರಾಟ ಮಾಡುವುದನ್ನು ಬಂದ್ ಮಾಡುತ್ತೇವೆ ಎಂದರು.
ಡಿಜೆ ಸೌಂಡ್ ಸಿಸ್ಟಮ್‌ನ್ನು ಸುಪ್ರೀಂ ಕೋರ್ಟ್ ಬ್ಯಾನ್ ಮಾಡಿದೆ. ಡಿಜೆ ಸೌಂಡ್ ಸಿಸ್ಟಮ್‌ನಿಂದ ಕಿವುಡುತನ, ಹೃದಯಾಘಾತ ಹಾಗೂ ಮಕ್ಕಳಿಗೆ, ವೃದ್ಧರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಗಣೇಶ ಹಬ್ಬದಲ್ಲಿ ಪೆಂಡಾಲ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪಟಾಕಿ ಅಂಗಡಿಗಳಲ್ಲಿ ಹಸಿರು ಪಟಾಕಿ ಮಾರಾಟ ಮಾಡುವುದು ಸೂಕ್ತ, ಕಾನೂನು ಸುವ್ಯವಸ್ಥೆ ಹದಗೆಡಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ, ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ನಾಗರಾಜ ಮಾಡಳ್ಳಿ, ವಿದ್ಯಾನಂದ ನಾಯಕ್, ಪಿಎಸೈ ನಾಗರಾಜ ಗಡದ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ಸೋಮಣ್ಣ ಉಪನಾಳ, ಸಾಹೀಬ್ ಜಾನ್ ಹವಾಲ್ದಾರ, ಪೂರ್ಣಾಜಿ ಕರಾಟೆ, ಕರೀಮಸಾಬ್ ಕರೀಮಖಾನವರ, ಮಂಜುನಾಥ ಮಾಗಡಿ, ಜಯಕ್ಕ ಕಳ್ಳಿ, ಚಂಬಣ್ಣ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ತಿಪ್ಪಣ್ಣ ಸಂಶಿ ಬಸವರಾಜ ಹೊಗೆಸೊಪ್ಪಿನ, ಶರಣು ಗೋಡಿ. ಇಸ್ಮಾಯಿಲ್ ಆಡೂರ ಶಾಂತಿ ಸಭೆಯಲ್ಲಿ ಮಾತನಾಡಿದರು.ಪ್ರಕಾಶ ಮ್ಯಾಗೇರಿ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ ಪಟ್ಟಣದ ಗಣ್ಯರು ಹಾಗೂ ವಿವಿಧ ಗ್ರಾಮಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.