ಕರಾವಳಿಯ ಸಹೋದರತೆ, ಸೌಹಾರ್ದತೆ ವಾತಾವರಣ ಬೆಳೆಸೋಣ: ದಿನೇಶ್ ಗುಂಡೂರಾವ್‌

| Published : Dec 22 2024, 01:30 AM IST

ಕರಾವಳಿಯ ಸಹೋದರತೆ, ಸೌಹಾರ್ದತೆ ವಾತಾವರಣ ಬೆಳೆಸೋಣ: ದಿನೇಶ್ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಗ್ಲೋಬಲ್‌ ವಿಲೇಜ್‌ ಪರಿಕಲ್ಪನೆಯಲ್ಲಿ ಹಮ್ಮಿಕೊಳ್ಳಲಾಗಿರುವ ಕರಾವಳಿ ಉತ್ಸವ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜ.19ರವರೆಗೆ ನಡೆಯಲಿದೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಹೊತ್ತಿನಲ್ಲೇ ಕರಾವಳಿ ಉತ್ಸವವೂ ಬಂದಿದ್ದು, ಜನರಿಗೆ ತಿಂಗಳ ಕಾಲ ಮನರಂಜನೆ ಒದಗಿಸಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೊರೋನಾ ಬಳಿಕ ಕರಾವಳಿ ಉತ್ಸವದ ಆಕರ್ಷಣೆ ಮತ್ತೆ ಆರಂಭಗೊಂಡಿದ್ದು, ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ ನೀಡಿದರು.

ಗ್ಲೋಬಲ್‌ ವಿಲೇಜ್‌ ಪರಿಕಲ್ಪನೆಯಲ್ಲಿ ಹಮ್ಮಿಕೊಳ್ಳಲಾಗಿರುವ ಕರಾವಳಿ ಉತ್ಸವ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜ.19ರವರೆಗೆ ನಡೆಯಲಿದೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಹೊತ್ತಿನಲ್ಲೇ ಕರಾವಳಿ ಉತ್ಸವವೂ ಬಂದಿದ್ದು, ಜನರಿಗೆ ತಿಂಗಳ ಕಾಲ ಮನರಂಜನೆ ಒದಗಿಸಲಿದೆ.ಸೌಹಾರ್ದತೆ ಬೆಳೆಸೋಣ: ಕರಾವಳಿ ಉತ್ಸವ ಮೈದಾನದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ವೈವಿಧ್ಯಮಯ ಸಂಸ್ಕೃತಿ- ಸಂಸ್ಕಾರವನ್ನು ಹೊಂದಿರುವ ದ.ಕ. ಜಿಲ್ಲೆಯಲ್ಲಿ ಕೊಂಕಣಿ, ಅರೆಭಾಷೆ, ಬ್ಯಾರಿ, ಹವ್ಯಕ, ಕನ್ನಡ ಸೇರಿದಂತೆ ಹಲವಾರು ಭಾಷೆಗಳನ್ನು ಮಾತನಾಡುವವರಿದ್ದಾರೆ. ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮದೇ ಸಾಂಸ್ಕೃತಿಕ ಪಾರಂಪರಿಕ ಪದ್ಧತಿಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಂಡಿದ್ದಾರೆ. ಕರಾವಳಿಯ ಸೌಹಾರ್ದತೆ ಮತ್ತು ಸಹೋದರತ್ವ ವಾತಾವರಣವನ್ನು ಇನ್ನಷ್ಟು ಬೆಳೆಸೋಣ ಎಂದು ಕರೆ ನೀಡಿದರು. ಕಾರಣಾಂತರಗಳಿಂದ ಮೂರು ವರ್ಷಗಳಿಂದ ನಿಂತು ಹೋಗಿದ್ದ ಕರಾವಳಿ ಉತ್ಸವವನ್ನು ಈ ವರ್ಷದಿಂದ ಪುನಾರಂಭಿಸಲಾಗಿದೆ. ಇಂತಹ ಉತ್ಸವಗಳನ್ನು ಮಾಡಿದಾಗ ಜನರಿಗೆ ತಮ್ಮ ಕಲೆ, ಪದ್ಧತಿ, ಆಚರಣೆಗಳನ್ನು ತೋರಿಸುವ ಅವಕಾಶ ಸಿಗುತ್ತದೆ ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಕುಟುಂಬ ಸಹಿತ ಭಾಗವಹಿಸುವ ಉತ್ಸವ ಇದಾಗಿದ್ದು, ಈ ಮೂಲಕ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸೋಣ ಎಂದರು.

ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಮೇಯರ್‌ ಮನೋಜ್‌ ಕುಮಾರ್‌, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್‌ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್‌ ಯು.ಎಚ್‌., ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್‌ ಮುಂಡೋಡಿ, ಪಾಲಿಕೆ ವಿಪಕ್ಷ ನಾಯಕ ಅನಿಲ್‌ ಕುಮಾರ್‌, ಎಂಆರ್‌ಪಿಎಲ್‌ ಎಂಡಿ ಶ್ಯಾಮ್‌ ಪ್ರಸಾದ್‌ ಕಾಮತ್‌, ಕ್ರೆಡೈ ಅಧ್ಯಕ್ಷ ವಿನೋದ್‌, ಕೆಸಿಸಿಐ ಅಧ್ಯಕ್ಷ ಆನಂದ್‌, ರೋಹನ್‌ ಕಾರ್ಪೊರೇಷನ್‌ ಮುಖ್ಯಸ್ಥ ರೋಹನ್‌ ಮೊಂತೆರೊ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌, ಜಿ.ಪಂ. ಸಿಇಒ ಡಾ. ಆನಂದ್‌, ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌ ಮತ್ತಿತರರಿದ್ದರು. ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್‌ ಸ್ವಾಗತಿಸಿದರು.ಆಕರ್ಷಕ ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಲಯೋಲಾ ಸಭಾಂಗಣ ಬಳಿಯಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಹುಲಿವೇಷ ಕುಣಿತ, ಡೊಳ್ಳುಕುಣಿತ, ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು.