ಸಾರಾಂಶ
ಗಜೇಂದ್ರಗಡ: ಕನ್ನಡವೇ ನಿತ್ಯ, ಕನ್ನಡವೇ ಸತ್ಯ ಎಂಬ ಆಶಯದಡಿ ನಾವೆಲ್ಲರೂ ಒಂದಾಗಿ ಬಾಳುವ ಮೂಲಕ ಕನ್ನಡ ಝೇಂಕಾರ ಮೊಳಗಿಸೋಣ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.
ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕ ವಿಶಾಲ ಹೃದಯವಂತರ ಬೀಡಾಗಿದೆ. ಕರ್ನಾಟಕದ ಪ್ರಾಂತಗಳು ಹರಿದು ಹಂಚಿ ಹೋಗಿದ್ದನ್ನು ಒಗ್ಗೂಡಿಸಲು ಶ್ರಮಿಸಿದ ಮಹಾನ್ ಹೋರಾಟಗಾರರ ಫಲವಾಗಿ ಕನ್ನಡ ರಾಜ್ಯ ಏಕೀಕರಣಗೊಂಡಿದೆ. ಆದರ್ಶಮಯ ಜೀವನ ಹಾಗೂ ಅವರ ಕನ್ನಡಪರ ಹೋರಾಟಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.ಈ ವೇಳೆ ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ, ಪುರಸಭೆ ಸದಸ್ಯ ರಾಜು ಸಾಂಗ್ಲೀಕರ, ಕರವೇ ಮುಖಂಡ, ವಕೀಲ ಎಚ್.ಎಸ್. ಸೋಂಪುರ, ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ರವಿ ಗಡೇದವರ, ವೀರೇಶ ಸಂಗಮದ, ಗಣೇಶ ಕೊಡಕೇರಿ, ಶರಣು ಗೌಡರ, ರಂಗನಾಥ ಹನುಮಸಾಗರ, ಮೌನೇಶ ಪತ್ತಾರ ಇದ್ದರು.
ಕರವೇಯಿಂದ ರಾಜ್ಯೋತ್ಸವ: ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣದಿಂದ) ೭೦ನೇ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಕರವೇ ಮುಖಂಡ ಎಚ್.ಎಸ್. ಸೋಂಪೂರ ಮಾತನಾಡಿ, ನಾಡು, ನುಡಿ ಹಾಗೂ ಗಡಿ ವಿಷಯದಲ್ಲಿ ರಾಜಿ ಇಲ್ಲದ ಹೋರಾಟವನ್ನು ನಡೆಸುತ್ತಾ ಕರವೇ ಬಂದಿದೆ. ಅಂದಾನಪ್ಪ ದೊಡ್ಡಮೇಟಿ ಸೇರಿ ಅನೇಕರು ಕನ್ನಡದ ಧ್ವನಿಯನ್ನು ದಿಲ್ಲಿವರೆಗೆ ಮುಟ್ಟಿಸಿದ್ದಾರೆ. ಹೀಗಾಗಿ ಭಾಷೆಯ ಹಿರಿಮೆ ಜತೆಗೆ ಸರ್ವ ಜನಾಂಗದ ತೋಟವಾಗಿರುವ ಕರ್ನಾಟಕವು ದೇಶದಲ್ಲಿ ವಿಭಿನ್ನ. ಕನ್ನಡಿಗರ ಶಕ್ತಿ, ಶೌರ್ಯ ಹಾಗೂ ತಾಳ್ಮೆ ದೇಶದ ಇತಿಹಾಸದ ಪುಟದಲ್ಲಿ ರಾರಾಜಿಸುತ್ತಿದೆ ಎಂದರು.ಈ ವೇಳೆ ಕನ್ನಡ ಬಾವುಟ ಹಿಡಿದು ತಾಯಿ ಭುವನೇಶ್ವರಿಗೆ ಜೈಕಾರ ಘೋಷಣೆ ಕೂಗಿದರು. ಎಸ್‌ಎಂ ಭೂಮರಡ್ಡಿ ಕಾಲೇಜು ವಿದ್ಯಾರ್ಥಿನಿಯರ ವೇಷಭೂಷಣ ಹಾಗೂ ನೃತ್ಯ ಜನಮನ ಸೆಳೆಯಿತು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರ್‌ಮನ್ ಮುದಿಯಪ್ಪ ಮುಧೋಳ, ರಾಜು ಸಾಂಗ್ಲೀಕರ, ಬಸವರಾಜ ಕೊಟಗಿ, ಶಶಿಧರ ಹೂಗಾರ, ವೀರೇಶ ಸಂಗಮದ, ಗುಲಾಂ ಹುನಗುಂದ, ಅಶೋಕ ವದೇಗೋಳ ಇದ್ದರು.ಜಯ ಕರ್ನಾಟಕ ಸಂಘಟನೆ: ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ ವಿಜೃಂಭಣೆಯಿಂದ ನಡೆಯಿತು. ಪಿಎಸ್‌ಐ ಪ್ರಕಾಶ ಡಿ. ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ರಫೀಕ್ ತೋರಗಲ್ ಮಾತನಾಡಿದರು. ಮುಖಂಡರಾದ ಶರಣಪ್ಪ ಚಳಗೇರಿ, ಮಹ್ಮದಸಾಬ ಅಕ್ಕಿ, ಲಾಡಸಾಬ್ ದೊಡ್ಡಮನಿ, ಆನಂದ ಸೂಡಿ, ಮಂಜು ಹೂಗಾರ ಹಾಗೂ ಆಟೋ ಚಾಲಕರು ಭಾಗವಹಿಸಿದ್ದರು.
;Resize=(128,128))
;Resize=(128,128))