ಸಾರಾಂಶ
ಇಂಗುಗುಂಡಿ, ಮಳೆಕೊಯ್ಲು ಮಾಡುವ ಮೂಲಕ ಅಂರ್ತಜಲ ವೃದ್ಧಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮಾರಬ್ಬ ಹೇಳಿದರು. ಸೂಲಿಬೆಲೆಯಲ್ಲಿ ಗಿಡಗಳ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಮುಂದಿನ ಪೀಳಿಗೆಗೆ ನೀರಿನ ಮೂಲಗಳನ್ನು ಉಳಿಸುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕು. ಇಂಗುಗುಂಡಿ, ಮಳೆಕೊಯ್ಲು ಮಾಡುವ ಮೂಲಕ ಅಂರ್ತಜಲ ವೃದ್ಧಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮಾರಬ್ಬ ಹೇಳಿದರು.ಹೋಬಳಿ ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಹಳ್ಳಿ ಕೆರೆ ಅಂಗಳದಲ್ಲಿ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಗುರುವಾರ ಸಾವಿರ ಗಿಡಗಳ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ೩ ಕೋಟಿ ರು. ವೆಚ್ಚದಲ್ಲಿ ೫೨ ಕರೆಗೆಳ ಹೂಳೆತ್ತುವ ಕೆಲಸ ಹಾಗೂ ಕೆರೆ ಕಟ್ಟೆ ಅಭಿವೃದ್ಧಿ ಗಿಡ ನೆಡುವ ಕಾರ್ಯಕ್ರಮ ಜಾರಿಯಲ್ಲಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಶುದ್ಧ ಗಾಳಿ, ನೀರು, ಬೆಳಕು, ಪರಿಸರ ಸಿಗುತ್ತದೆ ಎಂದರು.ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಠ್, ಸೇವಾ ಬಳಗದ ಯನಗುಂಟೆ ಆನಂದ್, ಗ್ರಾ.ಪಂ.ಅಧ್ಯಕ್ಷೆ ನವಿತಾ ಸುರೇಶ್, ನಿವೃತ್ತ ಪೋಲಿಸ್ ಅಧಿಕಾರಿ ಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ವೆಂಕಟೇಶ್, ಯೋಜನಾಧಿಕಾರಿ ಹರೀಶ್, ಸೂಲಿಬೆಲೆ ವಲಯ ಮೇಲ್ವಿಚಾರಕ ಚಂದನ್, ಕೃಷಿ ಮೇಲ್ವಿಚಾರಕ ಚೇತನ್, ಸಿದ್ದೇನಹಳ್ಳಿ ಪ್ರಕಾಶ್, ಸೇವಾ ಪ್ರತಿನಿಧಿಗಳಾದ ಯಶೋಧ, ಪವಿತ್ರ, ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಇದ್ದರು.