ಅಂಗವಿಕಲರ ಅಭಿವೃದ್ಧಿಗೆ ಕೆಲಸ ಮಾಡೋಣ- ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ

| Published : Jan 02 2024, 02:15 AM IST

ಅಂಗವಿಕಲರ ಅಭಿವೃದ್ಧಿಗೆ ಕೆಲಸ ಮಾಡೋಣ- ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ
Share this Article
  • FB
  • TW
  • Linkdin
  • Email

ಸಾರಾಂಶ

ತಿವರ್ಷದಂತೆ ಗ್ರಾಪಂನಿಂದ ಶೇ.೫ ಅನುದಾನವನ್ನು ವಿಕಲಚೇತನರಿಗೆ ಕಾಯ್ದಿರಿಸಲಾಗುತ್ತಿತ್ತು. ಈ ಮೊದಲು ವೈಯಕ್ತಿಕ ವಸ್ತುಗಳನ್ನು ಹಾಗೂ ಹಣವನ್ನು ಕೊಡಲಾಗುತ್ತಿತ್ತು. ಆದರೆ ಈ ಬಾರಿ ಅವರ ಅಭಿವೃದ್ಧಿಯ ಕೆಲಸ ಮಾಡಬೇಕು ಎಂಬ ಸೂಚನೆ ಬಂದಿದೆ.

ಹನುಮಸಾಗರ: ಅಂಗವಿಕಲರ ಸಂಘಕ್ಕೆ ಕಾಮಗಾರಿ ಮಾಡಿಸಲು ಆದೇಶ ಬಂದಿದೆ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.ಇಲ್ಲಿನ ಗ್ರಾಪಂನಲ್ಲಿ ವಿಕಲಚೇತನರಿಗೆ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿವರ್ಷದಂತೆ ಗ್ರಾಪಂನಿಂದ ಶೇ.೫ ಅನುದಾನವನ್ನು ವಿಕಲಚೇತನರಿಗೆ ಕಾಯ್ದಿರಿಸಲಾಗುತ್ತಿತ್ತು. ಈ ಮೊದಲು ವೈಯಕ್ತಿಕ ವಸ್ತುಗಳನ್ನು ಹಾಗೂ ಹಣವನ್ನು ಕೊಡಲಾಗುತ್ತಿತ್ತು. ಆದರೆ ಈ ಬಾರಿ ಅವರ ಅಭಿವೃದ್ಧಿಯ ಕೆಲಸ ಮಾಡಬೇಕು ಎಂಬ ಸೂಚನೆ ಬಂದಿದೆ. ನಿಮಗೆ ಏನು ಬೇಕು ಎಂದು ತಿಳಿಸಬೇಕು ಎಂದರು.ವಿಕಲಚೇತರನು ಮಾತನಾಡಿ, ಮಹಾತ್ಮ ಗಾಂಧಿ ವೃತ್ತದಲ್ಲಿರುವ ಹಳೆಯ ಮಹಿಳಾ ಕಲ್ಯಾಣ ಕೇಂದ್ರವನ್ನು ನಮಗೆ ದುರಸ್ತಿಗೊಳಿಸಿ ಕಚೇರಿಯನ್ನು ಮಾಡಿ ಕೊಡಬೇಕು. ಈಗಾಗಲೇ ಇದರ ಬಗ್ಗೆ ೨೦೦೧ರಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಭೇಟಿಯಾಗಿ ಅರ್ಜಿ ಸಲ್ಲಿಸಲಾಗಿದೆ. ಅದು ಶಿಥಿಲಗೊಂಡಿರುವ ಬಗ್ಗೆ ತಿಳಿಸಿದ್ದಾರೆ. ಅದನ್ನು ಅಭಿವೃದ್ಧಿಗೊಳಿಸಿಕೊಡಬೇಕು. ಇದರಿಂದ ನಮ್ಮ ವಿಕಲಚೇತನರ ಸಭೆ, ಸಮಾರಂಭಗಳನ್ನು ಮಾಡಲಿಕ್ಕೆ ಅನುಕೂಲವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು.ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಪ್ರತಿಕ್ರಿಯಿಸಿ, ಇದರ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿ ವಿಷಯ ತಿಳಿಸಲಾಗುತ್ತದೆ ಎಂದರು.ಇದೇ ವೇಳೆ ಪ್ರಮುಖರಾದ ಪಿಡಿಒ ದೇವೇಂದ್ರಪ್ಪ ಕಮತರ, ಗ್ರಾಪಂ ಸದಸ್ಯರಾದ ರಮೇಶ ಬಡಿಗೇರ, ಬಸವರಾಜ ದ್ಯಾವಣ್ಣನವರ, ಚಂದ್ರು ಬೆಳಗಲ್, ವಿಕಲಚೇತನರಾದ ಮಂಜುನಾಥ ಕೊಪ್ಪಳ, ಪ್ರಭು ಅಂಗಡಿ, ಮರಿಯಪ್ಪ ಅಕ್ಕಿ, ಶರಣಪ್ಪ ಹಡಪದ, ಹನುಮಂತ ಮಾದರ, ಅಕ್ಷತಾ ಹೂಗಾರ, ಜಗನ್ನಾಥ ಕಾಟ್ವಾ, ಹುಲಿಗೆಮ್ಮ ಕಲಬುರ್ಗಿ, ಚಂದ್ರಶೇಖರ, ಪರಮೇಶ ಸೇರಿದಂತೆ ಇತರರು ಇದ್ದರು.