Letter campaign demanding implementation of revised minimum wages

-ತಡೆಹಿಡಿದ ಮಾಸಿಕ ವೇತನ ಪಾವತಿಗೆ ಸರ್ಕಾರಕ್ಕೆ ಒತ್ತಾಯ

--

ಕನ್ನಡಪ್ರಭ ವಾರ್ತೆ ಯಾದಗಿರಿ

ರಿಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಎಐಯುಟಿಯುಸಿ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಯಾದಗಿರಿಯಲ್ಲಿ ಶನಿವಾರ ಮುಖ್ಯಮಂತ್ರಿಗಳಿಗೆ ನೂರಾರು ಪತ್ರಗಳನ್ನು ಬರೆದು ಪೋಸ್ಟ್ ಮಾಡುವ ಮೂಲಕ ಪತ್ರ ಚಳವಳಿಯನ್ನು ನಡೆಸಿದರು.

ಕಾರ್ಮಿಕರ ಸುದೀರ್ಘ ಹೋರಾಟದ ಫಲವಾಗಿ ಹೊರಡಿಸಲಾದ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ಉದ್ಯಮಪತಿಗಳ ಒತ್ತಡಕ್ಕೆ ಮಣಿದು ಜುಲೈ ನಂತರ ವೇತನ ತಡೆ ಹಿಡಿದಿರುವ ಸರ್ಕಾರದ ವಿವಿಧ ಇಲಾಖೆಗಳ ಸುತ್ತೋಲೆಗಳಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಮತ್ತು ವೇತನ ಪಾವತಿ ಮಾಡಲು ಅವಕಾಶ ನೀಡಿದೆ. ಆದ್ದರಿಂದ ಅನ್ಯಾಯವಾಗಿ ರಾಜ್ಯದ ಲಕ್ಷಾಂತರ ಕಾರ್ಮಿಕ ತಡೆಹಿಡಿಯಲಾಗಿರುವ ಮಾಸಿಕ ವೇತನ ಈ ಕೂಡಲೇ ಪಾವತಿ ಮಾಡಬೇಕು ಎಂದು ಸರ್ಕಾರ ವನ್ನು ಒತ್ತಾಯಿಸಿದರು.

ಪತ್ರ ಚಳುವಳಿ ಪ್ರಮುಖ ಆಗ್ರಹಗಳು:

೨೨.೦೫.೨೦೨೬ರ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಜಾರಿಗೊಳಿಸಬೇಕು. ಕೇವಲ ಜಾರಿಯನ್ನು ತಡೆಹಿಡಿಯುವ ಉದ್ದೇಶದಿಂದ ರಚಿಸಲಾದ ಸಚಿವ ಸಂಪುಟ ಸಮಿತಿಯನ್ನು ತಕ್ಷಣವೇ ರದ್ದುಗೊಳಿಸಬೇಕು. ಬಾಕಿ ಇರುವ ವೇತನ ವ್ಯತ್ಯಾಸವನ್ನು (ಅರಿಯರ್ಸ್ )ತಕ್ಷಣವೇ ಕಾರ್ಮಿಕರಿಗೆ ಪಾವತಿಸಬೇಕು ಎಂದು ಆಗ್ರಹಿಸಿಲಾಯಿತು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಡಿ. ಉಮಾದೇವಿ ಯವರ ನೇತೃತ್ವದಲ್ಲಿ ಉಪಾಧ್ಯಕ್ಷ ಶರಣಪ್ಪ, ತಾಜುದ್ದೀನ್, ಶ್ಯಾಂ, ಅಂಬಮ್ಮ ಇತರರು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ನೂರಾರು ಕಾರ್ಮಿಕರು ನಗರದ ಸ್ಟೇಷನ್ ಬಜಾರ್ ಪೋಸ್ಟ್ ಆಫೀಸ್‌ನ ಡಬ್ಬಿಗೆ ಪತ್ರಗಳನ್ನು ಹಾಕಿ ಪತ್ರ ಚಳವಳಿ ನಡೆಸಿದರು.

-

3ವೈಡಿಆರ್‌6 :

ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಎಐಯುಟಿಯುಸಿ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಯಾದಗಿರಿಯಲ್ಲಿ ಶನಿವಾರ ಮುಖ್ಯಮಂತ್ರಿಗಳಿಗೆ ನೂರಾರು ಪತ್ರಗಳನ್ನು ಬರೆದು ಪೋಸ್ಟ್ ಮಾಡುವ ಮೂಲಕ ಪತ್ರ ಚಳವಳಿಯನ್ನು ನಡೆಸಿದರು.