ಬ್ಯಾಂಕ್‌ನಲ್ಲಿ ವಿಮೆ ಮಾಡಿಸಿ, ವಿಮೆ ಮಾಡಿಸುವಾಗ ಆಧಾರ್ ಕಾರ್ಡ್ ನೀಡಿ ನಮೂದಿಸಿ. ಏಕೆಂದರೆ ವಿಮೆ ಹಣ ಪಡೆಯುವಾಗ ಯಾವುದೇ ಗೊಂದಲವಿರುವುದಿಲ್ಲ. ಹಾಗೆಯೇ ನಮ್ಮ ಬ್ಯಾಂಕ್‌ನಲ್ಲಿ ಹಸು ಖರೀದಿಗೆ ಸಾಲ ಸಿಗುತ್ತದೆ. ನೀವು ಹಾಕುವ ಹಾಲಿನ ಹಣ ಸಂಘದಿಂದ ಬ್ಯಾಂಕ್‌ಗೆ ಸಂದಾಯವಾಗುತ್ತದೆ. ಅದರಿಂದ ನೀವು ಹಣ ಪಡೆಯಬಹುದು.

ಕನ್ನಡಪ್ರಭ ವಾರ್ತೆ ಹಲಗೂರು

ಡಿಸಿಸಿ ಬ್ಯಾಂಕ್‌ನಿಂದ ಹಸು, ಕುರಿ ಸೇರಿದಂತೆ ಇನ್ನಿತರ ಉಪಯೋಗಕ್ಕೆ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವ ಸಾಲವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿರಾಗುವಂತೆ ಹಲಗೂರು ಶಾಖಾ ವ್ಯವಸ್ಥಾಪಕಿ ಪಿ. ಶಾಂತಲಾ ತಿಳಿಸಿದರು.

ಸಮೀಪದ ನಿಟ್ಟೂರು ಗ್ರಾಮದಲ್ಲಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ನಡೆದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿ, ನೀವು ದುಡಿದ ಹಣವನ್ನು ಸ್ವಲ್ಪ ಬ್ಯಾಂಕ್‌ನಲ್ಲಿ ತೊಡಗಿಸಿ. ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಿ. ಉತ್ತಮ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಿಂದ ಜೀವನ ನಡೆಸುವಂತೆ ಸಲಹೆ ನೀಡಿದರು.

ಬ್ಯಾಂಕ್‌ನಲ್ಲಿ ವಿಮೆ ಮಾಡಿಸಿ, ವಿಮೆ ಮಾಡಿಸುವಾಗ ಆಧಾರ್ ಕಾರ್ಡ್ ನೀಡಿ ನಮೂದಿಸಿ. ಏಕೆಂದರೆ ವಿಮೆ ಹಣ ಪಡೆಯುವಾಗ ಯಾವುದೇ ಗೊಂದಲವಿರುವುದಿಲ್ಲ. ಹಾಗೆಯೇ ನಮ್ಮ ಬ್ಯಾಂಕ್‌ನಲ್ಲಿ ಹಸು ಖರೀದಿಗೆ ಸಾಲ ಸಿಗುತ್ತದೆ. ನೀವು ಹಾಕುವ ಹಾಲಿನ ಹಣ ಸಂಘದಿಂದ ಬ್ಯಾಂಕ್‌ಗೆ ಸಂದಾಯವಾಗುತ್ತದೆ. ಅದರಿಂದ ನೀವು ಹಣ ಪಡೆಯಬಹುದು. ಆರು ತಿಂಗಳ ಹಾಲಿನ ಹಣ ಸಂದಾಯವಾಗಿದ್ದರೆ ನಿಮಗೆ ಹಸು ಖರೀದಿಗೆ ಸಾಲ ನೀಡಲಾಗುತ್ತದೆ. ಒಂದು ವರ್ಷದವರೆಗೆ ಮರುಪಾವತಿಗೆ ಅವಕಾಶವಿರುತ್ತದೆ. ಒಡವೆ ಸಾಲ ಸೌಲಭ್ಯವಿದೆ ಕಷ್ಟದ ಸಮಯಕ್ಕೆ ನಿಮ್ಮ ಅನುಕೂಲಕ್ಕಾಗಿ ಹಲವಾರು ಯೋಜನೆಗಳು ನಮ್ಮ ಬ್ಯಾಂಕ್‌ನಲ್ಲಿದೆ. ನೀವು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಅಧ್ಯಕ್ಷತೆಯನ್ನು ವಿವಿಧೋದ್ದೇಶ ಪ್ರಾರ್ಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಕೆ.ತಿಮ್ಮರಾಜು ವಹಿಸಿದ್ದರು. ಆರ್ಥಿಕ ಸಾಕ್ಷರತೆಯ ಸಂಯೋಜಕ ವಿನೋದ್ ವಿ.ಜೋಶಿ, ಕಾರ್ಯನಿರ್ವಣಾಧಿಕಾರಿ ಕುಮಾರ್, ಸ್ವಸಹಾಯ ಸಂಘದ ಸಂಯೋಜಕ ಶಿವಕುಮಾರ್ ಇತರರಿದ್ದರು.ನಾಡಿದ್ದು ವಿದ್ಯುತ್ ವ್ಯತ್ಯಯ

ಮಂಡ್ಯ: ಚಿಕ್ಕ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಜ.20 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ. ಚಿಕ್ಕಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ನಗರ ಪ್ರದೇಶಗಳಾದ ಶಂಕರಪುರ, ಜೈನ ಸ್ಟ್ರೀಟ್, ಬೀಡಿ ಕಾಲೋನಿ, ಜಬರ್ ಸರ್ಕಲ್, ಹೊಳಲು ವೃತ್ತ, ವಿನಾಯಕನಂದ ಬಡಾವಣೆ. ಗ್ರಾಮಾಂತರ ಪ್ರದೇಶಗಳಾದ ಗೋಪಾಲಪುರ, ಚಿಕ್ಕಮಂಡ್ಯ ಸಾತನೂರು, ಕೊಮ್ಮೇರಹಳ್ಳಿ, ಹುಲಿವಾನ, ಕೆ.ಗೌಡಗೆರೆ. ಎಚ್.ಮಲ್ಲಿಗೆರೆ, ಎಸ್.ಐ.ಕೋಡಿಹಳ್ಳಿ, ಹೆಚ್. ಕೋಡಿಹಳ್ಳಿ, ಸಂಪಹಳ್ಳಿ, ಗೊರವಾಲೆ, ಬಿ. ಹೊಸಹಳ್ಳಿ, ಬೀರಗೌಡನಹಳ್ಳಿ ಹಾಗೂ ಈ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರಾದ ಎಸ್.ಅನಿತಾಬಾಯಿ ತಿಳಿಸಿದ್ದಾರೆ.