ಗ್ರಂಥಪಾಲಕರು ಕ್ರಿಯಾತ್ಮಕ ವಾಗಿ ಕಾರ್ಯನಿರ್ವಹಿಸಿ: ಶ್ರೀ ಶೈಲ ಅಥಣಿ

| Published : Nov 15 2024, 12:36 AM IST

ಗ್ರಂಥಪಾಲಕರು ಕ್ರಿಯಾತ್ಮಕ ವಾಗಿ ಕಾರ್ಯನಿರ್ವಹಿಸಿ: ಶ್ರೀ ಶೈಲ ಅಥಣಿ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಗ್ರಾಮೀಣ ಭಾಗದಲ್ಲಿ ಗ್ರಂಥಪಾಲಕರು ಕ್ರಿಯಾತ್ಮಕ ವಾಗಿ ಕಾರ್ಯನಿಹಿಸಿದಾಗ ಮಾತ್ರ ಗ್ರಂಥಾಲಯಗಳು ಸದುಪಯೋಗ ವಾಗುತ್ತವೆ ಎಂದು ಡಿ.ಜಿ ವಿಕಸನ ಸಂಸ್ಥೆ ಬೆಳಗಾವಿ ವಲಯ ಸಂಯೋಜಕ ಶ್ರೀ ಶೈಲ ಅಥಣಿ ಹೇಳಿದರು.

ಗ್ರಾಪಂ ಗ್ರಂಥಪಾಲಕರಿಗೆ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ತರೀಕೆರೆ

ಗ್ರಾಮೀಣ ಭಾಗದಲ್ಲಿ ಗ್ರಂಥಪಾಲಕರು ಕ್ರಿಯಾತ್ಮಕ ವಾಗಿ ಕಾರ್ಯನಿಹಿಸಿದಾಗ ಮಾತ್ರ ಗ್ರಂಥಾಲಯಗಳು ಸದುಪಯೋಗ ವಾಗುತ್ತವೆ ಎಂದು ಡಿ.ಜಿ ವಿಕಸನ ಸಂಸ್ಥೆ ಬೆಳಗಾವಿ ವಲಯ ಸಂಯೋಜಕ ಶ್ರೀ ಶೈಲ ಅಥಣಿ ಹೇಳಿದರು. ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಪಂ ಗ್ರಂಥಾಲಯ ಗ್ರಂಥಪಾಲಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಆಧುನಿಕ ವಿದ್ಯುನ್ಮಾನ ಯುಗದಲ್ಲಿ ಕಲಿಕೆ ಹಂತ ವಿದ್ಯುನ್ಮಾನ ಸಾಧನ ಮೂಲಕ ನಡೆಸಲಾಗುತ್ತದೆ. ಇದಕ್ಕೆ ಪೂರಕವಾಗಿ ಗ್ರಂಥಪಾಲಕರು ತಂತ್ರಜ್ಞಾನದ ಬಳಕೆ ಮಹತ್ವವನ್ನು ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳ ಸದಸ್ಯರಿಗೆ ತಿಳಿಸಬೇಕು ಎಂದರು.

ತಾಲೂಕು ಪಂಚಾಯತಿ ಅಧಿಕಾರಿ ವಸಂತ ಮಾತನಾಡಿ ಕಲಿಕೆಯಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಂಥಾ ಲಯಗಳ ಪಾತ್ರ ಮಹತ್ವದ್ದಾಗಿದೆ. ಗ್ರಂಥಪಾಲಕರು ಶ್ರದ್ಧೆಯಿಂದ ಕಾರ್ಯ ನಿವಹಿಸಬೇಕಾಗಿದೆ. ಗ್ರಂಥಾಲಯಗಳು ವಿದ್ಯಾರ್ಥಿ ಗಳಿಗೆ ಸೀಮಿತವಾಗದೆ ವಯಸ್ಕರು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಜ್ಞಾನ ಪಡೆದು ಕೊಳ್ಳಬೇಕು ಎಂದು ಹೇಳಿದರು.

ಡಿಜಿ ವಿಕಸನ ಸಂಸ್ಥೆ ಜಿಲ್ಲಾ ಸಂಯೋಜಕ ನವೀನ್ ಕುಮಾರ್ ಮಾತನಾಡಿ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಸಂಸ್ಥೆಯಿಂದ ಗ್ರಂಥಾಲಯಗಳಿಗೆ ವಿದ್ಯುನ್ಮಾನ ಪರಿಕರಗಳ ಉಪಯೋಗವನ್ನು ಎಲ್ಲಾ ಗ್ರಂಥಪಾಲಕರು ಪಡೆಯಬೇಕು ಎಂದರು.

ಜಿಲ್ಲಾ ಸಂಯೋಜಕ ಆನಂದ ರಾಥೋಡ್ ಮಾತನಾಡಿ ತರಬೇತಿ ಪಡೆದು ಎಲ್ಲಾ ಗ್ರಂಥಪಾಲಕ ವಿದ್ಯುನ್ಮಾನ ಪರಿಕರಗಳ ಸದುಪಯೋಗ ಪಡೆದುಕೊಳ್ಳಿ ಆ ಮೂಲಕ ಡಿಜಿಟಲ್ ಸಾಕ್ಷರತೆ ಪರಿಣಾಮ ಕಾರಿ ಅನುಷ್ಟಾನ ಗೊಳಿಸಬೇಕು ಎಂದು ಹೇಳಿದರು.

13ಕೆಟಿಆರ್.ಕೆ.9ಃ

ತರೀಕೆರೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಪಂ ಗ್ರಂಥಾಲಯ ಗ್ರಂಥಪಾಲಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಡಿ.ಜಿ ವಿಕಸನ ಸಂಸ್ಥೆ ಬೆಳಗಾವಿ ವಲಯ ಸಂಯೋಜಕ ಶ್ರೀ ಶೈಲ ಅಥಣಿ ಮಾತನಾಡಿದರು.