ಸಾರಾಂಶ
ಗ್ರಂಥಾಲಯಗಳು ಜ್ಞಾನದ ನೆಲೆಯಾಗಿದ್ದು, ಗ್ರಂಥಪಾಲಕ ಮಾಹಿತಿಯ ಸಂವಾಹಕ ಎಂದು ಇಲ್ಲಿನ ಶಾಖಾ ಗ್ರಂಥಾಲಯ ಪ್ರಭಾರ ಗ್ರಂಥಪಾಲಕ ರವಿಕುಮಾರ್ ಹರಿಹರದಲ್ಲಿ ಹೇಳಿದ್ದಾರೆ.
- ಹರಿಹರದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಎಸ್.ಆರ್. ರಂಗನಾಥ್ 132ನೇ ಜಯಂತಿ - - - ಕನ್ನಡಪ್ರಭ ವಾರ್ತೆ ಹರಿಹರ
ಗ್ರಂಥಾಲಯಗಳು ಜ್ಞಾನದ ನೆಲೆಯಾಗಿದ್ದು, ಗ್ರಂಥಪಾಲಕ ಮಾಹಿತಿಯ ಸಂವಾಹಕ ಎಂದು ಇಲ್ಲಿನ ಶಾಖಾ ಗ್ರಂಥಾಲಯ ಪ್ರಭಾರ ಗ್ರಂಥಪಾಲಕ ರವಿಕುಮಾರ್ ಹೇಳಿದರು.ನಗರದ ಶಾಖಾ ಗ್ರಂಥಾಲಯದಲ್ಲಿ ಸೋಮವಾರ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಪುರಸ್ಕೃತ ಡಾ. ಎಸ್.ಆರ್. ರಂಗನಾಥ್ ಅವರ 132ನೇ ಜಯಂತಿ ನಿಮಿತ್ತ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಂಥಾಲಯಗಳಿಗೆ ಒಂದು ಸಾಂಸ್ಥಿಕ ಚೌಕಟ್ಟು, ರೂಪುರೇಷೆ ರೂಪಿಸಿದ ಖ್ಯಾತಿ ರಂಗನಾಥರಿಗೆ ಸಲ್ಲುತ್ತದೆ. ಗ್ರಂಥಾಲಯ ಸೇವೆಯಲ್ಲಿ ಇರುವವರಿಗೆ ಅವರ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆ ನಿಂತಿವೆ. ಗ್ರಂಥಗಳ ಉಪಯೋಗಕ್ಕಾಗಿ, ಪ್ರತಿ ಗ್ರಂಥಕ್ಕೆ ಅದರ ಓದುಗ, ಪ್ರತಿಯೊಬ್ಬ ಓದುಗನಿಗೆ ಅವನದೇ ಗ್ರಂಥ ಇರುತ್ತದೆ. ಪ್ರತಿಯೊಬ್ಬ ಓದುಗನ ಅಭಿರುಚಿಗೆ ಅನುಗುಣವಾದ ಪುಸ್ತಕಗಳು ಇಲ್ಲಿ ಲಭ್ಯ. ಓದುಗನ ಸಮಯ ಉಳಿಸಿ, ಗ್ರಂಥಾಲಯ ಒಂದು ಬೆಳೆಯುವ ಶಿಶು ಎಂಬ ರಂಗನಾಥರ ಪಂಚ ಸೂತ್ರಗಳನ್ನು ಗ್ರಹಿಸಿ ಅವುಗಳನ್ನು ಪಾಲಿಸುವ ಗ್ರಂಥಪಾಲಕ ಸಕ್ಷಮವಾಗಿ ಸೇವೆ ನೀಡಲು ಸಾಧ್ಯ ಎಂದರು.ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ದೆವೆ ಎಂದರೆ ಅದು ಗ್ರಂಥಾಲಯಗಳಿಂದಾಗಿ ಸಾಧ್ಯವಾಗಿದೆ. ಗ್ರಂಥಾಲಯ ಎಂದರೆ ಜ್ಞಾನದ ಸಾಗರ, ಜ್ಞಾನದ ಕಣಜವಾಗಿದೆ. ಮಾಡಿದ ಸಾಧನೆಯನ್ನು ಪರಿಗಣಿಸಿ ದೇಶವು ಇಂದು ರಂಗನಾಥರಿಗೆ ಗೌರವ ಸಮರ್ಪಿಸುತ್ತಿದೆ. ಎಲ್ಲರೂ ಗ್ರಂಥಾಲಯದ ಉಪಯೋಗ ಪಡೆದು ಬೆಳೆಸೋಣ ಎಂದರು.
ಕಾರ್ಯಕ್ರಮದಲ್ಲಿ ಸಂಜಯ್, ಪ್ರಭಾಕರ್, ರಮೇಶ್ ಬೆಳ್ಳೂಡಿ, ಕೇಶವ ಎಸ್. ಹಾಗೂ ಓದುಗರಿದ್ದರು.- - - -12ಎಚ್‍ಆರ್‍ಆರ್4:
ಹರಿಹರದ ಶಾಖಾ ಗ್ರಂಥಾಲಯದಲ್ಲಿ ಸೋಮವಾರ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಪುರಸ್ಕೃತ ಡಾ. ಎಸ್.ಆರ್. ರಂಗನಾಥ್ 132ನೇ ಜಯಂತಿ ನಿಮಿತ್ತ ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.