ಸಾರಾಂಶ
ಹಿರೇಕೆರೂರು: ಗ್ರಂಥಾಲಯಗಳು ಆಧುನಿಕ ಕಾಲದ ಸರಸ್ವತಿ ಮಂದಿರಗಳು. ಶತ-ಶತಮಾನಗಳಿಂದ ಸಂಗ್ರಹಗೊಂಡಿರುವ ಜ್ಞಾನನಿಧಿಗಳೇ ಗ್ರಂಥಾಲಯಗಳು. ಪ್ರಾಚೀನ ಕವಿ, ಖುಷಿ, ಸಂತ, ತತ್ವಜ್ಞಾನಿ, ವಿಜ್ಞಾನಿಗಳ ತವರೂರು ಗ್ರಂಥಾಲಯ ಎಂದು ವಿಶ್ರಾಂತ ಗ್ರಂಥಪಾಲಕ ಡಾ. ಎನ್.ಎನ್. ಅರಬಗೊಂಡರ ಹೇಳಿದರು
ಪಟ್ಟಣದ ಬಿ.ಆರ್. ತಂಬಾಕದ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕುರಿತು ಮಾತನಾಡಿದರು,ಗ್ರಂಥಾಲಯಗಳಿಲ್ಲದ ಶಾಲಾ-ಕಾಲೇಜುಗಳು ಮರುಭೂಮಿಗಳು. ಇಂದಿನ ಬದುಕಿಗೆ ಮಾತ್ರವಲ್ಲ, ಮುಂದಿನ ಬದುಕಿಗೂ ಅತ್ಯವಶ್ಯಕವಾದ ಮಾಹಿತಿಯನ್ನು ರಕ್ಷಿಸವ ಶಕ್ತಿ ಗ್ರಂಥಾಲಯಕ್ಕಿದೆ. ಗ್ರಂಥಾಲಯಗಳಿಗೆ ಮೃಗ ಮನಸ್ಸಿನ ಮಾನವನನ್ನು ಪರಿಪೂರ್ಣ ಮಾನವರನ್ನಾಗಿ ಪರಿವರ್ತಿಸುವ ಶಕ್ತಿ ಇದೆ. ನೂರು ಜನರ ಸಹವಾಸ ಮಾಡುವುದಕ್ಕಿಂತ ಗ್ರಂಥಾಲಯದ ಸಹವಾಸ ಮಾಡಿದರೆ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂ ದು ಅಭಿಪ್ರಾಯ ಪಟ್ಟರು. ಇದೇವೇಳೆ, ಆನ್‌ಲೈನ್, ಡಿಜಿಟಲ್ ಲೈಬ್ರರಿ ಕುರಿತು ಸಮಗ್ರ ಮಾಹಿತಿ ನೀಡಿದರು.ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ ಮಾತನಾಡಿ, ಉತ್ತಮ ಗ್ರಂಥಗಳಿಗೆ ಯಾವಾಗಲೂ ಮುಪ್ಪಿಲ್ಲ. ಪ್ರಸ್ತುತ ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಗಳಿಸಬೇಕಾಗಿದ್ದು ಆಸ್ತಿ, ಚಿನ್ನವನ್ನಲ್ಲ. ಜ್ಞಾನನಿಧಿಗಳಾದ ಗ್ರಂಥರಾಶಿಗಳನ್ನೇ ಆಸ್ತಿಯನ್ನಾಗಿ ಸಂಗ್ರಹಿಸದರೆ, ಆ ಪುಸ್ತಕಗಳೇ ನಿಮಗೆ ಆಸ್ತಿ ಹಾಗೂ ಚಿನ್ನವನ್ನು ತಂದುಕೊಡುತ್ತವೆ. ನೀವು ನಿಮ್ಮ ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಮಕ್ಕಳಿಗೆ ಒಂದು ಪುಸ್ತಕ ಕೊಟ್ಟು ಅವರನ್ನೇ ಆಸ್ತಿಯನ್ನಾಗಿ ಮಾಡಿದರೆ, ಅವರೇ ನಿಮ್ಮ ನಿಜವಾದ ಸಂಪತ್ತು ಎಂದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಬಿ. ಚನ್ನಗೌಡ್ರ ಮಾತನಾಡಿ. ಗ್ರಂಥಾಲಯಗಳು ಮಹಾವಿದ್ಯಾಲಯದ ಹೃದಯವಿದ್ದಂತೆ. ವಿದ್ಯಾರ್ಥಿಗಳು ಗ್ರಂಥಾಲಯದ ಸ್ನೇಹ ಮಾಡಿದರೆ ನಿಮ್ಮ ಭವಿಷ್ಯ ಬಂಗಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಗ್ರಂಥಪಾಲಕರಾದ ಎಂ.ಎಸ್. ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ನಾಗರಾಜ ಎಚ್.ಪಿ., ನವೀನ ಎಲಿಗಾರ, ಕಿರಣ ಬಾಗಲರ, ಸೌಮ್ಯಾ ಆರ್.ಎಸ್., ಲಿಂಗರಾಜ ಹಲವಾಲ, ಸತೀಶ ಲಮಾಣಿ, ಮಂಜು ನಾಯಕ್, ಕೀರ್ತಿಕುಮಾರ ಕಾರಗಿ, ವಿರೂಪಾಕ್ಷಪ್ಪ ಎಸ್.ಕೆ., ಪ್ರಶಾಂತ ಎಂ., ಪ್ರಿಯಾ ಎಂ.ಡಿ. ಉಪಸ್ಥಿತರಿದ್ದರು. ಪಿ.ಎಂ. ವಿಜಯಕುಮಾರ ಸ್ವಾಗತಿಸಿದರು. ಸಾವಿತ್ರಮ್ಮ ನಿರೂಪಿಸಿದರು,