ಸಾರಾಂಶ
ಶಿಗ್ಗಾಂವಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಆಗುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದೆ ಎಂದು ನಗರದ ಶ್ರೀಮತಿ ಜಿ.ಬಿ. ಅಂಕಲಕೋಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎ.ಸಿ. ವಾಲಿ ತಿಳಿಸಿದರು.ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಗ್ರಂಥಾಲಯಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡಿಪಾಯವಾಗಿದ್ದು, ಅಪಾರ ಮಾಹಿತಿ ಸಂಪನ್ಮೂಲಗಳೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಕಲಿಕೆ, ಸಂಶೋಧನೆ ಮತ್ತು ಸಾಮಾಜಿಕ ಅಭಿವೃದ್ಧಿಯ ಕೇಂದ್ರಗಳಾಗಿವೆ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡುವ ನಿರಂತರ ಕೊಡುಗೆಗಳಿಂದಾಗಿ ಗ್ರಂಥಾಲಯಗಳು ಸದಾ ಬೆಂಬಲ ಮತ್ತು ಮನ್ನಣೆಗೆ ಅರ್ಹವಾಗಿವೆ ಎಂದರು. ಇದೇ ಸಂದರ್ಭದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರದಿಂದ ಹೊರತಂದ ಗ್ರಂಥಾಲಯ ಕೈಪಿಡಿ ೨೦೨೬ ಅನ್ನು ಬಿಡುಗಡೆಗೊಳಿಸಲಾಯಿತು. ಪ್ರೊ. ಡಿ.ಎಸ್. ಭಟ್, ಪ್ರೊ. ಡಿ.ಎಸ್. ಸೊಗಲದ್, ಡಾ. ಶೈಲಜಾ ಹುದ್ದಾರ್, ಡಾ. ಪ್ರಬಲ ರೊಡ್ಡಣ್ಣವರ್, ಡಾ. ಲತಾ ಕೊಪರ್ಡೆ, ಪ್ರೊ. ವಿನಯ್ ಕುಲಕರ್ಣಿ, ಪ್ರೊ. ಶುಭಾ ಹಿರೇಮಠ, ಪ್ರೊ. ಇಮ್ತಿಯಾಜ್ ಖಾನ್, ಡಾ. ಸುರೇಶ ವಾಲ್ಮೀಕಿ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು. ಡಾ. ಆನಂದ ಇಂದೂರ ನಿರೂಪಿಸಿದರು. ಗ್ರಂಥಪಾಲಕರಾದ ಡಾ. ಮಂಜುನಾಥ್ ಅಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜನತಾ ಶಿಕ್ಷಣ ಸಂಘದ ಸದಸ್ಯತ್ವಕ್ಕೆ ಅರ್ಜಿ
ಹಾನಗಲ್ಲ: ಪಟ್ಟಣದ ಪ್ರತಿಷ್ಠಿತ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘಕ್ಕೆ ಸದಸ್ಯತ್ವ ಸ್ವೀಕರಿಸಲು ಬಯಸಿ ಮನವಿ ಸಲ್ಲಿಸಿದವರಿಗೆ ಅರ್ಜಿ ಫಾರ್ಮ್ ನೀಡಲು ಸಂಸ್ಥೆ ಕಾಲ ಮಿತಿ ನೀಡಿದ್ದು, ಈ ಅವಧಿಯಲ್ಲಿ ಅರ್ಜಿ ಫಾರ್ಮ್ ಪಡೆದು, ನಿಗದಿತ ಅವಧಿಯಲ್ಲಿ ಶುಲ್ಕ ಭರಿಸಿ ಸದಸ್ಯರಾಗಲು ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರೊ. ಸಿ. ಮಂಜುನಾಥ ಮೂಲಕ ಹಾಗೂ ನಂತರ ಹಲವರು ಸಂಸ್ಥೆಗೆ ಸದಸ್ಯರಾಗಲು ಬಯಸಿದ್ದಾರೆ. ಮನವಿ ಸಲ್ಲಿಸಿದವರು ಸೆ. 2ರಿಂದ ಸೆ.8 ರ ವರೆಗೆ ಕಚೇರಿ ಅವಧಿಯಲ್ಲಿ ತಮ್ಮ ಗುರುತಿನ ಚೀಟಿಯೊಂದಿಗೆ ವೈಯಕ್ತಿಕವಾಗಿ ಆಗಮಿಸಿ ಶುಲ್ಕ ಭರಣಾ ಮಾಡಿ ಸಹಕಾರಿಯ ಮುಖ್ಯ ಕಾರ್ಯ ನಿರ್ವಾಹಕರಿಂದ ಸದಸ್ಯತ್ವದ ಅರ್ಜಿ ಫಾರ್ಮ ಪಡೆದುಕೊಳ್ಳಬಹುದು. ಸೆಪ್ಟೆಂಬರ್ ತಿಂಗಳಿನಲ್ಲಿ ಸಂಘದ ಸರ್ವಸಾಧಾರಣ ಸಭೆ ನಡೆಯಲಿದ್ದು, ನಂತರ ಸೆ. 22ರಿಂದ ಸೆ. 26ರ ಅವಧಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಶುಲ್ಕ ಪಾವತಿಸಿ ಸದಸ್ಯತ್ವದ ಅರ್ಜಿ ಸಲ್ಲಿಸಬಹುದು ಎಂದು ಬಿ.ಎಸ್. ಅಕ್ಕಿವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.